ಲುಂಗಿ ಉಡೋಕೆ ಬಾರದವರಿಂದ ಮೇಯರ್ ಪಟ್ಟ ಕನ್ನಡಿಗರಿಗೆ ಕೈತಪ್ಪಿತು: ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ

ಲುಂಗಿ ಉಡೋಕೆ ಬಾರದವರಿಂದ ಬಿಬಿಎಂಪಿ ಮೇಯರ್ ಪಟ್ಟ ಕನ್ನಡಿಗರಿಗೆ ಕೈತಪ್ಪಿದೆ ಎಂದು ರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಹೇಳಿದ್ದಾರೆ.
ಗೌತಮ್ ಕುಮಾರ್ ಜೈನ್
ಗೌತಮ್ ಕುಮಾರ್ ಜೈನ್

ಬೆಂಗಳುರು: ಲುಂಗಿ ಉಡೋಕೆ ಬಾರದವರಿಂದ ಬಿಬಿಎಂಪಿ ಮೇಯರ್ ಪಟ್ಟ ಕನ್ನಡಿಗರಿಗೆ ಕೈತಪ್ಪಿದೆ ಎಂದು ರ್ನಾಟಕ ನವ ನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಹೇಳಿದ್ದಾರೆ.

ಸಾಮಾಜಿಕ ತಾಣ ಟ್ವಿಟ್ಟರ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಭೀಮಾಶಂಕರ್ "ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾ ಪೌರ ಸ್ಥಾನಕ್ಕೆ ಈ ಬಾರಿ ಕನ್ನಡಿಗರನ್ನೇ ಆಯ್ಕೆ ಮಾಡ ಬೇಕು ಎಂದು ಯಡ್ಇಯೂರಪ್ಪ ಹಾಗೂ ರಾಜ್ಯ ಬಿಜೆಪಿ ನಾಯಕರು ಟ್ಟಿ ನಿಲುವು ತಾಳಿದ್ದರು.ಆದರೆ ದೆಹಲಿಯಲ್ಲಿ ಕುಳಿತು ಲುಂಗಿ ಉಡಲು ಬಾರದ ಕೆಲವರು ಮಾಡಿದ ನಾಡ ವಿರೋಧಿ ಸಂಚಿಗೆ ಕನ್ನಡಿಗರಿಗೆ ಈ ಪಟ್ಟ ಒಲಿಯದೇ ಹೋಯಿತು" ಎಂದಿದ್ದಾರೆ.

ಇಂದು ನಡೆದ ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜೋಗುಪಾಳ್ಯ ವಾರ್ಡಿನ  ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆಯಾಗಿದ್ದರೆ ಬೊಮ್ಮನಹಳ್ಳಿ ವಾರ್ಡಿನ ರಾಮ್ ಮೋಹನ್ ರಾಜು ಉಪ ಮೇಯರ್ ಆಗಿ ಆಯ್ಕೆ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com