ರಾಜ್ಯದ ಸಂಸದರು ರಾಜೀನಾಮೆ ಕೊಟ್ಟು ಮನೆಯಲ್ಲಿರಲಿ: ಮಾಜಿ ಸಚಿವ ರಾಮಲಿಂಗಾ ರೆಡ್ಡಿ

ನೆರೆ ಪರಿಹಾರ ಕುರಿತು ರಾಜ್ಯದ ಕಡೆ ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ರಾಮಲಿಂಗಾರೆಡ್ಡಿಯವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಬೆಂಗಳೂರು: ನೆರೆ ಪರಿಹಾರ ಕುರಿತು ರಾಜ್ಯದ ಕಡೆ ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಚಿವ ರಾಮಲಿಂಗಾರೆಡ್ಡಿಯವರು ಬುಧವಾರ ತೀವ್ರವಾಗಿ ಕಿಡಿಕಾರಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಕೇರಳ, ತಮಿಳುನಾಡಿಗೆ ಪ್ರವಾಸ ಮಾಡುತ್ತಾರೆ. ಚಂದ್ರಯಾನ ನೋಡಲು ರಾಜ್ಯಕ್ಕೆ ಬರುತ್ತಾರೆ ಆದರೆ ನರೆ ಪರಿಸ್ಥಿತಿ ವೀಕ್ಷಿಸಲು ಅವರಿಗೆ ಪುರುಸೊತ್ತಿಲ್ಲ. ನೆರೆ ಪರಿಹಾರಕ್ಕೆ ಸಾವಿರ ಕೋಟಿ ಅಲ್ಲ,ಒಂದು ನಯಾ ಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಕೇಂದ್ರ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಿಂದ 25 ಸಂಸದರು ಏಕೆ ಆಯ್ಕೆಯಾಗಿದ್ದಾರೆ? ಎಲ್ಲರೂ ರಾಜೀನಾಮೆ ಕೊಟ್ಟು ಮನೆಯಲ್ಲಿ ಇದ್ದರೆ ಒಳ್ಳೆಯದು. ಸದ್ಯ ಬಿಹಾರದಲ್ಲಿ ಚುನಾವಣೆ ಇರಬೇಕು.ಹೀಗಾಗಿ ಕೇಂದ್ರ ಸರ್ಕಾರ ಅವರ ಬಗ್ಗೆ ಪ್ರಧಾನಿಗೆ ಸಹಾನುಭೂತಿ ಇದೆ.ಇಲ್ಲಿ ಗೆದ್ದು ಹೋದ ಸಂಸದರು ಇರೋದು ಒಂದೇ, ಇಲ್ಲದೆ ಇರುವುದೂ ಒಂದೇ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com