ಮಾಧ್ಯಮ ಮೇಲಿನ ನಿರ್ಬಂಧ ಕುರಿತು ಸ್ಪೀಕರ್ ಜೊತೆ ಮಾತುಕತೆ: ಯತ್ನಾಳ್

ಮಾಧ್ಯಮಗಳಿಗೆ ಸ್ವಾತಂತ್ರ್ಯವಿದೆ, ನಾವು ಮಾಡುವ ಕಾರ್ಯ ಕಲಾಪಗಳ ಕುರಿತು ಜನರಿಗೆ ಗೊತ್ತಾಗಬೇಕು. ಆದರೆ, ಅಧಿವೇಶನದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಏಕೆ ನಿರ್ಬಂಧ ಹೇರಲಾಗಿದೆ ಎಂಬುದು ತಮಗೇನು...
ಬಸನಗೌಡ ಪಾಟೀಲ್ ಯತ್ನಾಳ್
ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ: ಮಾಧ್ಯಮಗಳಿಗೆ ಸ್ವಾತಂತ್ರ್ಯವಿದೆ, ನಾವು ಮಾಡುವ ಕಾರ್ಯ ಕಲಾಪಗಳ ಕುರಿತು ಜನರಿಗೆ ಗೊತ್ತಾಗಬೇಕು. ಆದರೆ, ಅಧಿವೇಶನದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಏಕೆ ನಿರ್ಬಂಧ ಹೇರಲಾಗಿದೆ ಎಂಬುದು ತಮಗೇನು ಗೊತ್ತಾಗಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬುಧವಾರ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಅಧ್ಯಕ್ಷರು ಏನು ನಿರ್ಧಾರ ಮಾಡಿದ್ದಾರೆಂಬುದು ಗೊತ್ತಿಲ್ಲ.  ನಾಳೆ ಬೆಂಗಳೂರಿಗೆ ಹೋದ ತಕ್ಷಣ ಅವರನ್ನು ಭೇಟಿಯಾಗಿ ಮಾತಾಡುತ್ತೇನೆ. ಶಾಸಕರು ಏನೂ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಾಗಬೇಕು ಎಂಬುದು ಸ್ವಾಭಾವಿಕ. ಆದರೆ, ಮಾಧ್ಯಮಗಳಿಗೆ ನಿರ್ಬಂಧ ಹೇರುವ ನಿರ್ಧಾರ ಏಕೆ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ. ನಾಳೆ ಖಂಡಿತವಾಗಿ ಮಾಧ್ಯಮಗಳ ಪರವಾಗಿ ಮಾತನಾಡುತ್ತೇನೆ ಎಂದರು.

ವಿಧಾನಸಭೆ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ. ಇಲ್ಲಿ ನಡೆಯುವ ಕಾರ್ಯ ಕಲಾಪ ನಾಡಿನ ಜನತೆ ನೋಡಬೇಕು. ನಾವು ವಿಧಾನಸಭೆಯಲ್ಲಿ ಶಿಸ್ತಿನಿಂದ ವರ್ತನೆ ಮಾಡುತ್ತೇವೋ ಅಥವಾ ಜಾತ್ರೆ, ಸಂತೆಯಲ್ಲಿ ಮಾಡಿದ ಹಾಗೇ ನಮ್ಮ ವರ್ತನೆ ಇರುತ್ತದೆಯೋ ಎಂಬುದನ್ನು ಜನರು ನೋಡುತ್ತಾರೆ. ಶಾಸಕರು ಜನರ ಭಯದಿಂದ ಮತ್ತಷ್ಟು ಶಿಸ್ತಿನಿಂದ ಇರಲು ಸಾಧ್ಯವಾಗಲಿದೆ ಎಂದರು. 

ಸಂಸದ ರಮೇಶ ಜಿಗಜಿಣಗಿ ಕೇವಲ‌ ಒಂದು ಸಮುದಾಯದ ಪರವಾಗಿ ಮಾತನಾಡುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಎದುರು ಆಲಮಟ್ಟಿ ವಿಚಾರವಾಗಿ ಒಂದೇ ಸಮುದಾಯದ ಪರ ಮಾತನಾಡಿದ್ದಾರೆ. ಮೋದಿ‌ ಫೋಟೋ ಮೇಲೆ ಆಯ್ಕೆಯಾದ ಸಂಸದರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಅವರು ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com