ಎರಡು ದಶಕಗಳ ನಂತರ ಗೋಕಾಕ್ ಕ್ಷೇತ್ರಕ್ಕಾಗಿ ಜಾರಕಿಹೊಳಿ 'ಸಹೋದರರ' ಸವಾಲ್

ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೋಕಾಕ್ ವಿಧಾನಸಭೆ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಮುಖಾಮುಖಿಯಾಗಲಿದ್ದಾರೆ.
ರಮೇಶ್ ಮತ್ತು ಲಖನ್ ಜಾರಕಿಹೊಳಿ
ರಮೇಶ್ ಮತ್ತು ಲಖನ್ ಜಾರಕಿಹೊಳಿ

ಬೆಳಗಾವಿ: ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೋಕಾಕ್ ವಿಧಾನಸಭೆ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಮುಖಾಮುಖಿಯಾಗಲಿದ್ದಾರೆ.

ಜಾರಕಿಹೊಳಿ ಐದು ಸಹೋದರರಲ್ಲಿ ಕೊನೆಯವರಾದ ಲಖನ್ ಜಾರಕಿಹೊಳಿ  ಗೋಕಾಕ್ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಾವೇ ಎಂದು ಘೋಷಿಸಿಕೊಂಡು 21 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದರೇ ಉಪ ಚುನಾವಣೆಯಲ್ಲಿ ತಮ್ಮ ಹಿರಿಯ ಸಹೋದರ ರಮೇಶ್ ಜಾರಕಿಹೊಳಿ  ಸ್ಪರ್ಧಿಸಲಿದ್ದಾರೆ.

ಅವರು ಜನರ ಆಶೋತ್ತರಗಳನ್ನು ಈಡೇರಿಸಲು ವಿಫಲವಾಗಿದ್ದಾರೆ, 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ, ಹೀಗಾಗಿ ಅವರನ್ನು 50 ಸಾವಿರಮತಗಳ ಅಂತರದಿಂದ  ಸೋಲಿಸುವುದಾಗಿ  ಲಖನ್ ಹೇಳಿದ್ದಾರೆ, 

ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ  ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಿಂದ ಗೆಲ್ಲುವ ಭರವಸೆಯಲ್ಲಿದ್ದಾರೆ, ತಮ್ಮ ವಿರುದ್ಧ ಲಖನ್ ಕಣಕ್ಕಿಳಿಯುವಂತೆ ತಮ್ಮ ಮತ್ತೊಬ್ಬ ಸಹೋದರ ಸತೀಶ್ ಜಾರಕಿಹೊಳಿ ಕಾರಣರಾಗಿದ್ದಾರೆ, ಈ ಮೊದಲು ಸತೀಶ್ ಬಿಂಶಿಯನ್ನು  ಕರೆದು ತಂದು ಆತನ ರಾಜಕೀಯ ಭವಿಷ್ಯ ಹಾಳು ಮಾಡಿದ ಎಂದು ರಮೇಶ್ ಆರೋಪಿಸಿದ್ದಾರೆ,

1999ರಿಂದಲೂ ರಮೇಶ್ ಜಾರಕಿಹೊಳಿ ಸತತವಾಗಿ  5 ಎಲೆಕ್ಷನ್ ಗೆದಿದ್ದರು, ಆದರೆ ಈ ಬಾರಿ  ರಮೇಶ್ ಗೆ ತಮ್ಮ ಇಬ್ಬರು ಸಹೋದರರ ಬೆಂಬಲವಿಲ್ಲ, ರಮೇಶ್ ಗೆಲುವಿನ ಹಿಂದೆ ಸತೀಶ್ ಮತ್ತು ಲಖನ್ ಶ್ರಮವಿರುತ್ತಿತ್ತು ಆದರೆ ಇದೇ ಮೊದಲ ಬಾರಿಗೆ ರಮೇಶ್ , ಸಹೋದರರ ಬೆಂಬಲವಿಲ್ಲದೇ ಏಕಾಂಗಿಯಾಗಿ ಹೋರಾಟ ನಡೆಸಬೇಕಾಗಿದೆ, ರಮೇಶ್ 5 ಬಾರಿ ಗೆದ್ದಿದ್ದರ ಸಂಪೂರ್ಣ ಕ್ರೆಡಿಟ್ ಸತೀಶ್ ಮತ್ತು ಲಖನ್ ಗೆ ಸೇರಬೇಕು, ಅವರ ಸಹಕಾರವಿಲ್ಲದೇ ರಮೇಶ್ ಒಂದೇ ಒಂದು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಜಾರಕಿಹೊಳಿ ಆಪ್ತ ಮುನ್ನ ಭಗವಾನ್ ಅಭಿಪ್ರಾಯ ಪಟ್ಟಿದ್ದಾರೆ.

ರಮೇಶ್ ಜಾರಕಿಹೊಳಿ ಗೋಕಾಕ್ ರಾಜಕೀಯಕ್ಕೆ ತನ್ನ ಅಳಿಯಂದಿರಾದ ಅಂಬಿರಾವ್ ಪಾಟೀಲ್ ಮತ್ತು ಅಪ್ಪಿ ಪಾಟೀಲ್ ಅವರನ್ನು ಕರೆತಂದದ್ದು ಸಹೋದರರ ನಡುವೆ ಒಡಕು ಮೂಡಲು ಪ್ರಮುಖ ಕಾರಣವಾಯಿತು.  ಕಳೆದ ಕೆಲವು ವರ್ಷಗಳಿಂದ ಅಂಬಿರಾವ್ ಪಾಟೀಲ್ ತನ್ನ ಮಾವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಎಲ್ಲಾ ರಾಜಕೀಯ ವ್ಯವಹಾರ, ಉದ್ಯಮ ಹಾಗೂ ಮತ್ತಿತರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಸುಪ್ರಿಂಕೋರ್ಟ್ ಕ್ಲೀನ್ ಚಿಟ್ ನೀಡಿದರೇ ಗೋಕಾಕ್ ವಿಧಾನಸಭೆ ಉಪಚುನಾವಣೆಯಲ್ಲಿ ರಮೇಶ್ ಸ್ಪರ್ಧಿಸಲಿದ್ದಾರೆ, ಒಂದು ವೇಳೆ ಸಿಗದಿದ್ದರೇ ತಮ್ಮ ಅಳಿಯ ಅಂಬಿರಾವ್ ಪಾಟೀಲ್ ಅವರನ್ನು ಕಣಕ್ಕಿಳಿಸಬೇಕೆಂಬುದು  ರಮೇಶ್ ಪ್ಲಾನ್ ಆಗಿತ್ತು,. 

ರಮೇಶ್ ಅವರ ರಾಜಕೀಯ ಜೀವನವನ್ನು ಅಂಬಿರಾವ್ ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ರಮೇಶ್ ನನ್ನ ವಿರುದ್ಧ ಸ್ಪರ್ಧಿಸಬೇಕೆಂದು ನಾನು ಬಯಸುತ್ತೇನೆ ಏಕೆಂದರೇ ನನ್ನ ಬೆಂಬಲವಿಲ್ಲದೆ ಚುನಾವಣೆಯಲ್ಲಿ ಗೆಲ್ಲಲು ಅವನಿಗೆ ಸಾಧ್ಯವಿಲ್ಲ ಎಂದು ನಾನು ತೋರಿಸಬೇಕು ಎಂದು ಲಖನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com