3 ದಿನಗಳಿಗಿಂತ ಹೆಚ್ಚು ಕಾಲ ವಿಧಾನ ಮಂಡಲ ಕಲಾಪ ವಿಸ್ತರಣೆ ಇಲ್ಲ: ಎನ್. ರವಿ ಕುಮಾರ್

ಪ್ರತಿಪಕ್ಷಗಳವರು ಎಷ್ಟೇ ಒತ್ತಾಯ ಮಾಡಿದರೂ ಸಹ ಮೂರು ದಿನಗಳಿಗಿಂತ ಹೆಚ್ಚು ಕಾಲ ವಿಧಾನ ಮಂಡಲದ ಕಲಾಪಗಳನ್ನು ವಿಸ್ತರಣೆ ಮಾಡುವುದಿಲ್ಲ ಎಂದು ವಿಧಾನಪರಿಷತ್ತು ಸದಸ್ಯ ರವಿ ಕುಮಾರ್ ತಿಳಿಸಿದರು.
ರವಿಕುಮಾರ್ (ಸಂಗ್ರಹ ಚಿತ್ರ)
ರವಿಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು: ಪ್ರತಿಪಕ್ಷಗಳವರು ಎಷ್ಟೇ ಒತ್ತಾಯ ಮಾಡಿದರೂ ಸಹ ಮೂರು ದಿನಗಳಿಗಿಂತ ಹೆಚ್ಚು ಕಾಲ ವಿಧಾನ ಮಂಡಲದ ಕಲಾಪಗಳನ್ನು ವಿಸ್ತರಣೆ ಮಾಡುವುದಿಲ್ಲ ಎಂದು ವಿಧಾನಪರಿಷತ್ತು ಸದಸ್ಯ ರವಿ ಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿದ ಅವರು, ಪ್ರಸಕ್ತ ಎಲ್ಲ ಶಾಸಕರು ನೆರೆ ಪೀಡಿತ ಪ್ರದೇಶಗಳಿಗೆ ಹೋಗಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಬೇಕೇ ಹೊರತು ವಿಧಾನಸಭಾ ಅಧಿವೇಶನದಲ್ಲಿ ಕೂರುವುದಲ್ಲ. ಮೂರು ದಿನಗಳಲ್ಲಿ ನೆರೆ ವಿಷಯಕ್ಕೆ ಸಂಬಂಧಿಸಿದಂತೆ ವಿಸ್ತೃತ ಚರ್ಚೆಗೆ ನಾವು ಸಿದ್ಧ. ನಾಳೆ ಸಂತಾಪ ನಿರ್ಣಯದ ಬಳಿಕ ಸದನದಲ್ಲಿ ಬಜೆಟ್ ಲೇಖಾನುದಾನ ಮಂಡಿಸುತ್ತೇವೆ ಎಂದು ಹೇಳಿದ್ದಾರೆ.

ಈಗಾಗಲೇ ತೀರ್ಮಾನಿಸಿದಂತೆ ಅಧಿವೇಶನವನ್ನು ಮೂರು ದಿನಗಳ ಕಾಲ ನಡೆಸಲಾಗುವುದು. ಪ್ರತಿಪಕ್ಷದವರು ಒತ್ತಾಯ ಮಾಡಿದರು ಎಂಬ ಕಾರಣಕ್ಕಾಗಿ ಸದನದ ಕಲಾಪವನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಪ್ರವಾಹ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿರುವ ಕಾರಣ ಶಾಸಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳುವಲ್ಲಿ ತೊಡಗಿಸಿಕೊಳ್ಳಬೇಕೇ ಹೊರತು ಅಧಿವೇಶನದಲ್ಲಿ ಕೂರುವುದಲ್ಲ. ಹೀಗಾಗಿ ಪ್ರತಿಪಕ್ಷವು ಎಷ್ಟೇ ಒತ್ತಾಯ ಮಾಡಿದರೂ ಮೂರು ದಿನಗಳಿಂದ ಹೆಚ್ಚು ವಿಸ್ತರಣೆ ಮಾಡುವುದಿಲ್ಲ. 

ನೆರೆ ಪರಿಹಾರ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಿದೆ. ಕಲಾಪದ ಮೊದಲ ದಿನ ಸಂತಾಪ ನಿರ್ಣಯ ಕೈಗೊಂಡ ಬಳಿಕ ಬಜೆಟ್ ಲೇಖಾನುದಾನ ಮಂಡಿಸುತ್ತೇವೆ. ಬಜೆಟ್ ಮೇಲಿನ ಚರ್ಚೆ ಮತ್ತು ಅನುಮೋದನೆಗೆ ಪ್ರತಿಪಕ್ಷಗಳ ಸಹಕಾರವನ್ನು ಸಹ ಕೋರಲಾಗುವುದು. ಸದನ ಕಲಾಪದಲ್ಲಿ ಪಕ್ಷದ ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿಕಬೇಕೆಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com