ಜೆಡಿಎಸ್ ಪಕ್ಷದವರು ಆಹ್ವಾನಿಸಿದ್ರೆ ಅವರ ಕಚೇರಿಗೂ ಹೋಗುವೆ: ಸುಮಲತಾ ಅಂಬರೀಶ್

ನನ್ನಲ್ಲಿ ಹಾಗೂ ನನ್ನ ಉದ್ದೇಶದಲ್ಲಿ ದುರುದ್ದೇಶವಿಲ್ಲ, ಪ್ರತಿಯೊಬ್ಬರ ಅಭಿಪ್ರಾಯಗಳಿಗೆ ಉತ್ತರ ಕೊಡಲು ಆಗುವುದಿಲ್ಲ, ಹೀಗಾಗಿ ನನ್ನ ವಿರುದ್ಧ ಗಾಸಿಪ್​ಗಳು ಹರಿದಾಡುತ್ತಿವೆ ಎಂದು ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟಪಡಿಸಿದ್ದಾರೆ.
ಸುಮಲತಾ ಅಂಬರೀಶ್
ಸುಮಲತಾ ಅಂಬರೀಶ್

ಮಂಡ್ಯ:  ನನ್ನಲ್ಲಿ ಹಾಗೂ ನನ್ನ ಉದ್ದೇಶದಲ್ಲಿ ದುರುದ್ದೇಶವಿಲ್ಲ, ಪ್ರತಿಯೊಬ್ಬರ ಅಭಿಪ್ರಾಯಗಳಿಗೆ ಉತ್ತರ ಕೊಡಲು ಆಗುವುದಿಲ್ಲ, ಹೀಗಾಗಿ ನನ್ನ ವಿರುದ್ಧ ಗಾಸಿಪ್​ಗಳು ಹರಿದಾಡುತ್ತಿವೆ ಎಂದು ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಸ್ಪಷ್ಟಪಡಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲದ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು,ಬಿಜೆಪಿ ಆಫೀಸ್​ನಿಂದ ಕರೆದಿದರು.ಧನ್ಯವಾದಗಳನ್ನು ಹೇಳಬೇಕಾಗಿತ್ತು, ಅದಕ್ಕೆ ನಾನು ಹೋಗಿದ್ದೆ. ಇವತ್ತು ಕಾಂಗ್ರೆಸ್ ಅವರು ಕರೆದಿದರು ಅದಕ್ಕೆ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದು ಈಗ ನಾನು ಕಾಂಗ್ರೆಸ್ ಅವರಿಗೆ ಧನ್ಯವಾದಗಳನ್ನು ಹೇಳಿದ್ದೇನೆ ಎಂದು ಅವರು ತಿಳಿಸಿದರು.

ಇನ್ನು ನಾನು ಪಕ್ಷೇತರ ಸಂಸದರು,ನಾನು ಎಲ್ಲಿಗೆ ಹೋಗಬೇಕು ಅನ್ನೋದು ಗೊತ್ತು. ಪಕ್ಷದ ವಿರುದ್ಧ ನಿಂತು ನನ್ನ ಪರ ಕೆಲಸ ಮಾಡಿದರು ಅಂತವರಿಗೆ ನಾನು ವೇದಿಕೆಯ ಮೇಲೆ ಕರೆದು ಥ್ಯಾಂಕ್ಸ್ ಹೇಳಿದ್ದೇನೆ. ಅಂಬರೀಶ್ ಅವರನ್ನು ಪ್ರೀತಿಸುತಿದರು. ಸ್ವಾಭಿಮಾನ ಇದ್ದವರು ನನಗೆ ಮತ ಹಾಕಿದ್ದಾರೆ. ಜೆಡಿಎಸ್ ಮತದಾರರು ನನಗೆ ಮತಹಾಕಿದ್ದರೇ, ಜೆಡಿಎಸ್ ಆಫೀಸ್​ಗೂ ಕರೆದರು ನಾನು ಹೋಗುತ್ತೇನೆ ಅವರಿಗೂ ನಾನು ಧನ್ಯವಾದಗಳನ್ನು ಹೇಳುತ್ತೇನೆ ಎಂದು ಅವರು ನುಡಿದರು.

ಅಂತೆಯೇ ಪಕ್ಷೇತರ ಎಂಪಿ ಆಗಿರಬೇಕು ಅನ್ನೋದು ಜನರಿ ನಿರ್ಧಾರ ಮಾಡಿದ್ದಾರೆ. ಅಮಿತಾ ಶಾ ಬೇಡಿ ಮಾಡಿದಾಗ ಅವರು ನಮ್ಮ ಸಹಕಾರವಿದೆ ಅಂತಾ ಹೇಳಿದರು. ಅವರು ಕೂಡ ನನ್ನಿಂದ ಯಾವುದೇ ನಿರೀಕ್ಷೆ ಇಟ್ಟಿಲ್ಲ,ಚುನಾವಣೆಯಲ್ಲಿ ನನಗೆ ಸಹಾಯ ಮಾಡಿದ್ದು ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕಾಗಿ ನಾನು ಕಾಂಗ್ರೆಸ್​ಗೆ ಋಣಿಯಾಗಿ ರುತ್ತೇನೆ ಎಂದರು.

ಅಲ್ಲದೇ ನಾನು ಯಾವುದೇ ಪಕ್ಷ ಸೇರಿದರು ಕಾಂಗ್ರೆಸ್ ಕಾರ್ಯಕರ್ತರನ್ನು ಮರೆಯಲ್ಲ, ನನಗೆ ಯಾರು ಹೈಕಮಾಂಡ್ ಯಾರು ಇಲ್ಲ, ನಾನು ಉಪಚುನಾವಣೆಯಲ್ಲಿ ತಟಸ್ಥವಾಗಿ ಇರಬಹುದು. ಕೆಲವರು ಇದ್ದಾರೆ ನನ್ನ ಹೆಸರು ಬಳಸಿದರೆ ಪಬ್ಲಿಸಿಟಿ ಸಿಗುತ್ತೆ ಅಂತ್ತಾ ಅದಕ್ಕೆ ಕೆಲವರು ನನ್ನ ಹೆಸರು ಬಳಸುತ್ತಿದ್ದಾರೆ ಎಂದು ಸುಮಲತಾ ಅಂಬರೀಶ್ ಅವರು ಮಾತನಾಡಿದ್ದಾರೆ.

17ನೇ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಮಾಡಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್​ ಕಾರ್ಯಕರ್ತರು ಜೊತೆಗೂಡಿ ಜೆಡಿಎಸ್​ ಅಭ್ಯರ್ಥಿಯಾಗಿದ್ದ ನಿಖಿಲ್​ ಕುಮಾರಸ್ವಾಮಿ ಅವರನ್ನು ಪರಾಭವಗೊಳಿಸುವ ಮೂಲಕ ಸುಮಲತಾ ಅಂಬರೀಶ್ ಅವರು ಭಾರೀ ಅಂತರದಿಂದ ಜಯಭೇರಿ ಬಾರಿಸಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com