ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕೇವಲ ಮೂರರಿಂದ ನಾಲ್ಕು ಸ್ಥಾನ ಮಾತ್ರ: ಆಂತರಿಕ ಸಮೀಕ್ಷೆ!

ಮುಂಬರುವ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 15 ರಲ್ಲಿ ಕೇವಲ 3ರಿಂದ 4 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಖಾಸಗಿ ಎಜೆನ್ಸಿಯೊಂದು ಸರ್ವೆಯಲ್ಲಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ಮುಂಬರುವ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 15 ರಲ್ಲಿ ಕೇವಲ 3ರಿಂದ 4 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಖಾಸಗಿ ಎಜೆನ್ಸಿಯೊಂದು ಸರ್ವೆಯಲ್ಲಿ ತಿಳಿಸಿದೆ.

ನವೆಂಬರ್ 11 ರಂದು  ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಲಿದ್ದು, ಅದಾದ ನಂತರ ಅಂದರೆ ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಬಂಡಾಯ ಶಾಸಕರು ಬಿಜೆಪಿಗೆ ಸವಾಲಾಗಿದ್ದಾರೆ,  ಸಮ್ಮಿಶ್ರ ಸರ್ಕಾರ ಕೆಡವಲು ಕಾರಣರಾದ ಬಂಡಾಯ ಶಾಸಕರು ಮಾಡಿದ ತ್ಯಾಗಕ್ಕೆ ಬಿಜೆಪಿ ಸೂಕ್ತ ಸ್ಥಾನಮಾನ ನೀಡಬೇಕಾಗಿದೆ. ಇದು ಬಿಜೆಪಿ ಆಂತರಿಕ ಕಲಹಕ್ಕೆ ಕಾರಣವಾಗಿದೆ.

ಬಿಜೆಪಿ ಸರ್ಕಾರ ಮುಂದುವರಿಯಲು ಇನ್ನೂ 7 ಸೀಟುಗಳಲ್ಲಿ ಗೆಲ್ಲುವ ಅಗತ್ಯವಿದೆ,  ಆದರೆ ಬಿಜೆಪಿ ಕೇವಲ ಮೂರು ನಾಲ್ಕು ಸೀಟು ಮಾತ್ರ ಗೆಲ್ಲಲಿದೆ ಎಂದು ಬಿಜೆಪಿ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿವೆ, 

ಪಕ್ಷ ತೊರೆದಿರುವ 12 ಶಾಸಕರಿಗೆ ಪರ್ಯಾಯವಾಗಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ, ಜೊತೆಗೆ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ,

ಸಮ್ಮಿಶ್ರ ಸರ್ಕಾರ ಪತನವಾಗುವುದಕ್ಕೆ ಮೊದಲು ಕಾಂಗ್ರೆಸ್ 80 ಶಾಸಕರನ್ನು ಹೊಂದಿತ್ತು, 12 ಶಾಸಕರು ರಾಜೀನಾಮೆ ನೀಡಿದರು, ಜೆಡಿಎಸ್ ನ 37 ಶಾಸಕರು ಸೇರಿ ಒಟ್ಟು 117 ಶಾಸಕರು ಒಟ್ಟುಗೂಡಿ ಸರ್ಕಾರ ರಚಿಸಿದರು.  ಆದರೆ ಅಂದುಕೊಂಡಂತೆ ಸುಲಲಿತವಾಗಿ ನಡೆಯಲಿಲ್ಲ, 

ಈ ಆಂತರಿಕ ಸಮೀಕ್ಷೆ ವರದಿ ಕೇಂದ್ರ ಬಿಜೆಪಿ ನಾಯಕರನ್ನ ಆತಂಕಕ್ಕೀಡುಮಾಡುತ್ತಿದೆ.ಹೀಗಾಗಿ ಉಪ ಚುನಾವಣೆಗೆ ಹೋಗುವ ಬದಲಾಗಿ  ಹೊಸದಾಗಿ ಮಧ್ಯಂತರ ಚುನಾವಣೆಗೆ ಹೋಗುವುದೇ ಒಳಿತು  ಎಂಬ ಮಾತುಗಳು ಕೇಳಿ ಬರುತ್ತಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com