ಹೊಸ ಜಿಲ್ಲೆಗಳಿಗೆ ನೇತಾರರ ಬೇಡಿಕೆ: ಅಭಿವೃದ್ಧಿಯ ಗುರಿಯೋ ಅಥವಾ ರಾಜಕೀಯ ಮಹತ್ವಾಕಾಂಕ್ಷೆಯೋ?

ರಾಜ್ಯದ  15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಬಳಿಕ ಕಳೆದ ತಿಂಗಳು, ಸುಮಾರು 9 ಹೊಸ ಜಿಲ್ಲೆಗಳಿಗೆ ಬೇಡಿಕೆ  ಇಡಲಾಗಿದೆ. ಪ್ರತಿಯೊಬ್ಬ ರಾಜಕೀಯ ನೇತರರಿಗೂ ತಾವು ಪ್ರತಿನಿಧಿಸುವ ಕ್ಷೇತ್ರವೇ ಜಿಲ್ಲಾ ಪ್ರಧಾನ ಕಚೇರಿಯಾಗಬೇಕೆಂದು ಬಯಸುತ್ತಿದ್ದಾರೆ.
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್

ಉಪ ಚುನಾವಣೆ ವೋಟ್ ಬ್ಯಾಂಕ್ ಗಾಗಿ ರಾಜಕಾರಣಿಗಳ ಜಿಲ್ಲೆ ವಿಭಜನೆ ತಂತ್ರ!

ಬೆಂಗಳೂರು: ರಾಜ್ಯದ  15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಬಳಿಕ ಕಳೆದ ತಿಂಗಳು, ಸುಮಾರು 9 ಹೊಸ ಜಿಲ್ಲೆಗಳಿಗೆ ಬೇಡಿಕೆ  ಇಡಲಾಗಿದೆ. ಪ್ರತಿಯೊಬ್ಬ ರಾಜಕೀಯ ನೇತರರಿಗೂ ತಾವು ಪ್ರತಿನಿಧಿಸುವ ಕ್ಷೇತ್ರವೇ ಜಿಲ್ಲಾ ಪ್ರಧಾನ ಕಚೇರಿಯಾಗಬೇಕೆಂದು ಬಯಸುತ್ತಿದ್ದಾರೆ.

ಸೋಮವಾರ ಅನರ್ಹ ಶಾಸಕ ಎಚ್. ವಿಶ್ವನಾಥ್, ಕೃಷ್ಣರಾಜ ಸಾಗರ, ಸಾಲಿಗ್ರಾಮ, ಪಿರಿಯಾ ಪಟ್ಟಣ ಮತ್ತು ಎಚ್.ಡಿ ಕೋಟೆ ಸೇರಿಸಿಕೊಂಡು ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ,

ಜೆಡಿಎಸ್ ನಾಯಕ ರಮೇಶ್ ಬಾಬು  ತುಮಕೂರು ಜಿಲ್ಲೆಯಲ್ಲಿರುವ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ,  ಇತ್ತೀಚೆಗೆ ಮಾಜಿ ಡಿಸಿಎಂ ಜಿ. ಪರಮೇಶ್ವರ್. ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವಂತೆ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದರು.

ಇನ್ನು ಬಾಗಲಕೋಟೆಯಲ್ಲಿರುವ ಜಮಖಂಡಿಯನ್ನು ಜಿಲ್ಲೆ ಮಾಡಬೇಕೆಂದು ಅಲ್ಲಿನ ನಾಯಕರು ಬೇಡಿಕೆಯಿಟ್ಟಿದ್ದಾರೆ, ಇನ್ನು ವಿಜಯಪುರದಲ್ಲಿರುವ ಇಂಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಯಶ್ವಂತರಾಯಗೌಡ ಪಾಟೀಲ್ ಆಗ್ರಹಿಸಿದ್ದಾರೆ.  ಇನ್ನೂ ಬೆಳಗಾವಿಯಲ್ಲಿರುವ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿಸಬೇಕೆಂಬ ಬೇಡಿಕೆಯೂ ಇದೆ.

ಹೊಸ ಜಿಲ್ಲೆ ಮಾಡಬೇಕೆಂದು ಬೇಡಿಕೆ ಇಡುತ್ತಿರುವುದು ಅಭಿವೃದ್ಧಿಗಲ್ಲ ರಾಜಕಾರಣಿಗಳು ತಮ್ಮ ರಾಜಕೀಯ ಪ್ರಾಬಲ್ಯಕ್ಕಾಗಿ ಈ ಹೊಸ ವರಸೆ ಆರಂಭಿಸಿದ್ದಾರೆ ಎಂದು ರಾಜಕೀಯ. ವಿಶ್ಲೇಷಕ ಸಂದೀಪ್ ಶಾಸ್ತ್ರಿ ಅಬಿಪ್ರಾಯ ಪಟ್ಟಿದ್ದಾರೆ.  ರಾಜಕಾರಣಿಗಳು ಮತ್ತು ಅವರ ಹಿಂಬಾಲಕರು ತಮ್ಮ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ ಎಂದು ಭಾವಿಸುತ್ತಿದ್ದಾರೆ,ಹೀಗಾಗೆ ಹೊಸ ಜಿಲ್ಲೆಗಳಿಗಾಗಿ ಬೇಡಿಕೆ ಇಡುತ್ತಿದ್ದಾರೆ,  ಒಂದು ವೇಳೆ ಹೊಸ ಜಿಲ್ಲೆ ರಚನೆಯಾದರೇ ಮಹತ್ತರವಾದ ಬದಲಾವಣೆಗಳೂ ಕೂಡ ಆಗುತ್ತವೆ ಇದರಿಂದ ಚುನಾವಣೆ ಸಮಯದಲ್ಲಿ ಸಹಾಯವಾಗಲಿದೆ, ಅದರಲ್ಲೂ ಉಪ ಚುನಾವಣೆ ವೇಳೆ ಹೆಚ್ಚು ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ತಾಲ್ಲೂಕುಗಳಿಗಿಂತ ಜಿಲ್ಲೆಗಳು ಸರ್ಕಾರದಿಂದ ಹೆಚ್ಚಿನ ಆದಾಯವನ್ನು ಪಡೆಯುತ್ತವೆ. ಜಿಲ್ಲೆ ರಚನೆಯಾದರೇ ಅಲ್ಲಿನ ಭೂಮಿಯ ಮೌಲ್ಯವೂ ಹೆಚ್ಚುತ್ತದೆ,. ಬಂಡವಾಳ ಹೂಡಿಕೆದಾರರ ಗಮನ ಸೆಳೆಯುತ್ತದೆ, ಸರ್ಕಾರದಿಂದ ಹೆಚ್ಚಿನ ಹಣ ಹರಿದು ಬರುತ್ತದೆ. ಇದು ರಾಜಕೀಯ ವೊಟ್ ಬ್ಯಾಂಕ್ ಗಾಗಿ ಮಾಡುತ್ತಿರುವ ಬೇಡಿಕೆ ಎಂದು ಮತ್ತೊಬ್ಬ ರಾಜಕೀಯ ಪರಿಣಿತ ಹರೀಶ್ ರಾಮಸ್ವಾಮಿ ಹೇಳಿದ್ದಾರೆ,

ಕಳೆದ ತಿಂಗಳು ಯಡಿಯೂರಪ್ಪ ಅವರು  ಬಳ್ಳಾರಿಯ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಲು ಶಿಫಾರಸು ಮಾಡಿದ್ದರು. ಆದರೆ ನಂತರ ಅದು ರದ್ದಾಯಿತು,.

ಇನ್ನು ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುವ ಪ್ರಸ್ತಾವನೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ,  ಹೊಸ ಜಿಲ್ಲೆ ರಚಿಸುವ ಅಗತ್ಯವಿಲ್ಲ, ಪ್ರತಿ 30 ಕಿಮೀ ಗೆ ಒಂದು ಜಿಲ್ಲೆಯನ್ನು ಸರ್ಕಾರ ಹೇಗೆ ರಚಿಸುತ್ತದೆ ಎಂದು ಪ್ರಶ್ನಿಸಿದ್ದಾರೆ, ನಾನು ವಯಕ್ತಿಕವಾಗಿ ಇದನ್ನು ತೀವ್ರವಾಗಿ ವಿರೋಧಿಸುತ್ತೇನೆ,  ಮೈಸೂರು ಜಿಲ್ಲೆಯಲ್ಲಿ ಆರು ತಾಲೂಕುಗಳಿವೆ, ಮತ್ತೆ ಹೊಸ ಜಿಲ್ಲೆ ರಚಿಸುವುದು ಅವೈಜ್ಞಾನಿಕ ಎಂದು ಕಿಡಿ ಕಾರಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com