ವೈಯಕ್ತಿಕ ಕಾರಣಗಳಿಗೆ ದೇವರನ್ನು ಎಳೆದು ತರುವುದು ಸರಿಯಲ್ಲ: ಕೆ.ಎಸ್.ಈಶ್ವರಪ್ಪ

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಣೆ ಪ್ರಮಾಣದ ಬಗ್ಗೆ ನಡೆಯುತ್ತಿರುವ ಕೆಸರೆರಚಾಟದ ಬಗ್ಗೆ ಕಿಡಿ ಕಾರಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರು, ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ದೇವರನ್ನು ಎಳೆದು ತರುವುದು‌ ಸರಿಯಲ್ಲ ಎಂದು ಹೇಳಿದ್ದಾರೆ.

Published: 17th October 2019 03:03 PM  |   Last Updated: 17th October 2019 03:03 PM   |  A+A-


KS Eshwarappa

ಕೆ.ಎಸ್‍.ಈಶ್ವರಪ್ಪ

Posted By : Lingaraj Badiger
Source : UNI

ಬೆಂಗಳೂರು: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಆಣೆ ಪ್ರಮಾಣದ ಬಗ್ಗೆ ನಡೆಯುತ್ತಿರುವ ಕೆಸರೆರಚಾಟದ ಬಗ್ಗೆ ಕಿಡಿ ಕಾರಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರು, ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ದೇವರನ್ನು ಎಳೆದು ತರುವುದು‌ ಸರಿಯಲ್ಲ ಎಂದು ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರರ ಜತೆ ಮಾತನಾಡಿದ ಅವರು, ಜೆಡಿಎಸ್ ನ ಅನರ್ಹ ಶಾಸಕ ಎಚ್. ವಿಶ್ವನಾಥ್ - ಸಾ ರಾ ಮಹೇಶ್ ನಡುವೆ ಆಣೆ ಪ್ರಮಾಣದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕಾರಣಿಗಳು ಆಣೆ ಪ್ರಮಾಣ ಮಾಡುವುದು ಒಳ್ಳೆಯದಲ್ಲ. ರಾಜಕಾರಣಿಗಳನ್ನು ಸಮಾಜ ಸದಾ ನೋಡುತ್ತಿರುತ್ತದೆ. ವಿಶ್ವನಾಥ್ ಮತ್ತು ಸಾ.ರಾ‌.ಮಹೇಶ್ ಅವರದ್ದು ವೈಯಕ್ತಿಕ ವಿಚಾರ ಏನೇ ಇರಬಹುದು. ಇಬ್ಬರೂ ವೈಯಕ್ತಿಕವಾಗಿ ಏನಾದರೂ ಮಾತನಾಡಿಕೊಳ್ಳಲಿ. ಆದರೆ, ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ದೇವರನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದರು.

ಚಾಮುಂಡೇಶ್ವರಿ ಎದುರು ಆಣೆ ಪ್ರಮಾಣ ಮಾಡುವ ಪದ್ಧತಿ ಖಂಡಿತಾ ಒಳ್ಳೆಯದಲ್ಲ. ಯಾವುದೇ ಟೀಕೆ ಟಿಪ್ಪಣಿ ಬಂದರೂ ಯಾವ ರೂಪದಲ್ಲಿ ಉತ್ತರಿಸಬೇಕೋ ಹಾಗೆಯೇ ಉತ್ತರ ಕೊಡಬೇಕು. ನಿಮ್ಮ‌ ಟೀಕೆಗಳು ಸರೀ ತಪ್ಪು ಅಂತ ಸಮಾಜ ತೀರ್ಮಾನ ಕೊಡುತ್ತದೆ. ದೇಶ, ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದೇವರ ಮುಂದೆ ಹೋಗಿ. ಆದರೆ, ವೈಯ್ಯಕ್ತಿಕ ಕಾರಣಕ್ಕೆ ದೇವರನ್ನು ಎಳೆದು ತರಬೇಡಿ ಎಂದರು.

ಇದೇ ವೇಳೆ ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ಹೋಗಲು ಅಧಿವೇಶನ ಮೊಟಕು ಎಂಬ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನೆರೆ ಪರಿಹಾರ ಕಾರ್ಯಗಳು ಚೆನ್ನಾಗಿ ನಡೀತಿವೆ. ನೆರೆ ಪೀಡಿತ ಪ್ರದೇಶಗಳಲ್ಲಿ ಕಂದಾಯ ಸಚಿವರು, ಉಸ್ತುವಾರಿ ಸಚಿವರು, ಶಾಸಕರು ಭೇಟಿ ಕೊಟ್ಟು ಕೆಲಸ ಮಾಡ್ತಿದ್ದಾರೆ. ಇದರ ಜತೆಗೆ, ಮಹಾರಾಷ್ಟ್ರ ಪ್ರಚಾರಕ್ಕೂ ಕೆಲವರು ಹೋಗಿದ್ದಾರೆ ಎಂದರು.
 

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp