ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ಮಾಡುವ ಅವಶ್ಯಕತೆ ಇರಲಿಲ್ಲ- ಎಚ್. ಡಿ. ಕುಮಾರಸ್ವಾಮಿ

ಸಾ.ರಾ ಮಹೇಶ್ ಹಾಗೂ ಎಚ್.ವಿಶ್ವನಾಥ್ ಇಬ್ಬರೂ ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.  ಕುಮಾರಸ್ವಾಮಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾ.ರಾ ಮಹೇಶ್ ಹಾಗೂ ಎಚ್.ವಿಶ್ವನಾಥ್ ಇಬ್ಬರೂ ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ.  ಕುಮಾರಸ್ವಾಮಿ ಹೇಳಿದ್ದಾರೆ.
  
ನಗರದ ಜೆಡಿಎಸ್​ ಕಚೇರಿ ಜೆಪಿ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿತ್ತು.ಬಿಜೆಪಿಗೆ ಅವರು ಏಕೆ ಹೋಗುತ್ತಾರೆ ಎನ್ನುವುದು ಸಾರ್ವಜನಿಕರಿಗೂ ಗೊತ್ತಿರುತ್ತೇ ಎಂದು ಅವರು ತಿಳಿಸಿದರು.
  
ಇನ್ನು ಸಾ.ರಾ ಮಹೇಶ್ ಅವರಿಗೆ ಮನವಿ ಮಾಡುತ್ತೇನೆ ಅವರು ಪದೇ ಪದೇ ಅನರ್ಹ ಶಾಸಕ ಎಚ್.ವಿಶ್ವನಾಥ್ ಬಗ್ಗೆ ಚರ್ಚೆ ಮಾಡುವುದು ಬೇಡ. ಈ ಬಗ್ಗೆ ಹುಣಸೂರಿನ ಜನರು ತೀರ್ಮಾನ ಮಾಡುತ್ತಾರೆ. ತಾಯಿ ಚಾಮುಂಡೇಶ್ವರಿ  ಅಂತಿಮ ತೀರ್ಮಾನ ಮಾಡುತ್ತಾಳೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
  
ಅಲ್ಲದೇ ಸಾ.ರಾ ಮಹೇಶ್ ಅವರು ರಾಜೀನಾಮೆ ಕೊಟ್ಟಿದ್ದು ತಮಗೆ ತಿಳಿದಿತ್ತು. ಆದರೆ ರಾಜೀನಾಮೆ ಕೊಡುವುದು ಬೇಡ ಎಂದು ಹೇಳಿದ್ದೆ.ನನ್ನ ಸರ್ಕಾರದ ಅವಧಿಯಲ್ಲಿ ಸಾ.ರಾ ಮಹೇಶ್ ಅವರು ದೂರವಾಣಿ ಕದ್ದಾಲಿಕೆ ಮಾಡಿದ್ದೇನೆ ಎನ್ನುವ ವಿಚಾರವೂ ಕೇಳಿ ಬಂದಿದೆ ಎಂದರು.
  
ಅಂತೆಯೇ ನಾನು ಸಾ.ರಾ ಮಹೇಶ್ ಒಡಹುಟ್ಟಿದ ಅಣ್ಣತಮ್ಮಂದಿರ ರೀತಿ  ಇದ್ದೇವೆ. ಅವರನ್ನ ನಾನು ಬಲ್ಲೆ ಮೊನ್ನೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಗಾಬರಿ ಹೇಳಿಕೆ ಕೊಟ್ಟಿದ್ದಾರೆ.ನಾನು ಘೋಷಣೆ ಮಾಡಿದ ಸಾಲಮನ್ನಾದಿಂದ ಯಡಿಯೂರಪ್ಪ ಅವರಿಗೆ ಯಾವುದೇ ಹೊರೆ ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
  
ರೈತರ ಸಾಲ ಮನ್ನಾಕ್ಕಾಗಿ ಬಜೆಟ್​ನಲ್ಲಿ ಸಾಕಷ್ಟು ಹಣ ಇಟ್ಟಿದ್ದೇನೆ.ನನ್ನ ಸಾಲಮನ್ನಾಗೆ ಯಡಿಯೂರಪ್ಪ ಅವರು ಹೊಸದಾಗಿ ಹಣ  ಸಂಗ್ರಹ ಮಾಡುವುದು ಬೇಡ.ಸಾಲಮನ್ನಾಕ್ಕೆ ಮೀಸಲಿಟ್ಟಿದ್ದ ಹಣದಲ್ಲಿ ಇನ್ನೂ ಸಾಕಷ್ಟ ಹಣ ಉಳಿದಿದೆ.ಇದಕ್ಕಾಗಿ ಹೊಸ ಹಣ ಸಂಗ್ರಹ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದರು.
  
ಇನ್ನು ವೈಜ್ಞಾನಿಕವಾಗಿ ನಾನು ಸಾಲಮನ್ನಾಗೆ ಹಣ ಇಟ್ಟಿದ್ದೇನೆ.ಆ ಹಣ ಬಿಡುಗಡೆ ಮಾಡಿದರೆ ಸಾಕಾಗುತ್ತೆ, ಇವತ್ತು ಯಡಿಯೂರಪ್ಪ ಅದಕ್ಕೆ ವಿವರಣೆ ನೀಡಿದ್ದಾರೆ.ನೆರೆಗೆ –ಸಾಲಮನ್ನಾ ಹಣಕ್ಕೂ ಹೊಂದಾಣಿಕೆ ಮಾಡುವುದು ಬೇಡ. ಯಡಿಯೂರಪ್ಪ ಅವರು ಘೋಷಣೆ ಮಾಡಿದ ಸಾಲಮನ್ನಾದ ಬಗ್ಗೆ ಯಡಿಯೂರಪ್ಪ ತೀರ್ಮಾನ ಮಾಡಬೇಕು ಎಂದು ಅವರು ನುಡಿದರು.
  
ಅಲ್ಲದೇ ನಾನು ಕೊಟ್ಟ ಮಾತನ್ನು ಸಾಲಮನ್ನಾ ವಿಚಾರದಲ್ಲಿ ಉಳಿಸಿಕೊಂಡಿ ದ್ದೇನೆ.ನಾನು ಜನರಿಗೆ ಟೋಪಿ ಹಾಕಿಲ್ಲ. ನನ್ನ ಮಾತು ನಾನು ಉಳಿಸಿಕೊಂಡಿ ದ್ದೇನೆ. ಯಡಿಯೂರಪ್ಪ ಅವರು ಘೋಷಣೆ ಮಾಡಿದ ಸಾಲಮನ್ನಾದ ಬಗ್ಗೆ ಅವರು ನಿರ್ಧಾರ ಮಾಡಿಲಿ ಎಂದು ಅವರು ಸವಾಲು ಹಾಕಿದರು.
  
ಅಂತೆಯೇ ಮೋದಿ ಪ್ರಮಾಣ ವಚನ ಕಾರ್ಯಕ್ರಮದ ವೇಳೆ ನಾನು ಮಹಾ ರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಮೋದಿ ಅವರಿಗೂ ಮನವಿ ಮಾಡಿದ್ದೆ.ಆದರೆ ಅವರು ನಮಗೆ ನೀರು ಬಿಡಲಿಲ್ಲ.ಅಮೇಲೆ ನಮಗೂ ಮಾತುಕತೆಗೆ ಅವಕಾಶ ಕೊಡಲಿಲ್ಲ.ನಮ್ಮ ಜನರ ಜೀವನದ ಜೊತೆ ಮಹಾರಾಷ್ಟ್ರ ಸರ್ಕಾರ ಚೆಲ್ಲಾಟ ಆಡಿದವರ ಪರ ಯಡಿಯೂರಪ್ಪಅವರು ಮತ ಕೇಳುವುದಕ್ಕೆ  ಹೋಗಿದ್ದಾರೆ ಎಂದು ಅವರು ಲೇವಡಿ ಮಾಡಿದರು.
  
ನಮ್ಮ ರಾಜ್ಯದ ರೈತರ, ಜನರ ಸಮಸ್ಯೆ ಬಗ್ಗೆ ಮೊದಲು ಯಡಿಯೂರಪ್ಪ ಗಮನ ಕೊಡಲಿ,ಮಹಾದಾಯಿಗೆ ಅನುಮತಿ ಕೊಡಲಿಲ್ಲ ಅಂತ ರೈತರು ಹೋರಾಟ ಮಾಡುತ್ತಿದ್ದಾರೆ. ಮೊದಲು ಆ ಜನರ ಕಷ್ಟ ನೋಡಿ, ನಮ್ಮ ಜನರನ್ನ ಮೊದಲು ನೋಡಿ, ಆಮೇಲೆ ಮಹಾರಾಷ್ಟ್ರದವರನ್ನು ಮುಖ್ಯಮಂತ್ರಿ ಯಡಿ ಯೂರಪ್ಪ ಅವರು  ಗಮನಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com