ಉಲ್ಟಾ ಹೊಡೆದ ಎಚ್.ವಿಶ್ವನಾಥ್: ಚಾಮುಂಡಿ ಬೆಟ್ಟದಲ್ಲಿ ಗಳಗಳನೆ ಅತ್ತ ಸಾ.ರಾ. ಮಹೇಶ್!

ಗುರುವಾರ ಬೆಳಿಗ್ಗೆ ಚಾಮಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅನರ್ಹ ಶಾಸಕ ವಿಶ್ವನಾಥ್, ತಾನು ಯಾವುದೇ ಆಣೆ ಪ್ರಮಾಣ ಮಾಡುವುದಿಲ್ಲ. ನನ್ನನ್ನು ಕೊಂಡುಕೊಂಡ ಭೂಪನನ್ನು ನೋಡಲು ತಾನು ಬಂದಿರುವುದು ಎಂದು ಹೇಳಿಕೆ ನೀಡಿದರು.

Published: 17th October 2019 10:15 AM  |   Last Updated: 17th October 2019 11:45 AM   |  A+A-


SaRa Mahesh And H.Vishwanath

ಸಾರಾ ಮಹೇಶ್ ಮತ್ತು ಎಚ್.ವಿಶ್ವನಾಥ್

Posted By : Shilpa D
Source : Online Desk

ಮೈಸೂರು: ಅನರ್ಹ ಶಾಸಕ ಎಚ್. ವಿಶ್ವನಾಥ್ ಮತ್ತು ಸಾ.ರಾ. ಮಹೇಶ್ ನಡುವಿನ 25 ಕೋಟಿ ವಿವಾದ ಈಗ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತಲುಪಿದೆ. 

ಇಬ್ಬರು ನಾಯಕರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಆದರೆ ಪರಸ್ಪರ ಭೇಟಿಯಾಗಲಿಲ್ಲ. ಗುರುವಾರ ಬೆಳಿಗ್ಗೆ ಚಾಮಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅನರ್ಹ ಶಾಸಕ ವಿಶ್ವನಾಥ್, ತಾನು ಯಾವುದೇ ಆಣೆ ಪ್ರಮಾಣ ಮಾಡುವುದಿಲ್ಲ. ನನ್ನನ್ನು ಕೊಂಡುಕೊಂಡ ಭೂಪನನ್ನು ನೋಡಲು ತಾನು ಬಂದಿರುವುದು ಎಂದು ಹೇಳಿಕೆ ನೀಡಿದರು.

ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದ ಎಚ್. ವಿಶ್ವನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಯಾವುದೇ ಆಣೆ ಪ್ರಮಾಣ ಮಾಡುವುದಿಲ್ಲ. ಆರೋಪ ಮಾಡಿ ಓಡಿಹೋಗುವವರಿಗೆ ಒಳ್ಳೆಯ ಬುದ್ದಿ ಕೊಡಲೆಂದು ದೇವರ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ. ನಾನಿಲ್ಲಿ ಬಂದಿರುವುದು ನನ್ನನ್ನು ಖರೀದಿಸಿದವರನ್ನು ನೋಡಲು. ಸಾ.ರಾ ಮಹೇಶ್ ಹೇಳಿದಂತೆ 25 ಕೋಟಿ ಕೊಟ್ಟು ನನ್ನನ್ನು ಖರೀದಿ ಮಾಡಲು ಬಂದವರನ್ನು ನೋಡಲು ಬಂದಿದ್ದೇನೆ ಎಂದು ತಿಳಿಸಿದರು.

ನಂತರ ಬೆಟ್ಟಕ್ಕೆ ಆಗಮಿಸಿದ ಸಾ.ರಾ,ಮಹೇಶ್, ವಿಶ್ವನಾತ್ ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಿದ್ದಾರೆ. ಅವರ ಆರೋಪ ಸಾಬೀತಾದರೆ ನಾನು ಕ್ಷಮೆಯಾಚಿಸುವೆ. ನಾನು ಯಾರನ್ನೂ ಕರೆದುಕೊಂಡು ಬರುತ್ತೇನೆಂದು ಎಲ್ಲೂ ಹೇಳಿಲ್ಲ ಎಂದ ಅವರು ಮಾಧ್ಯಮದ ಮುಂದೆ ಗಳಗಳನೆ ಅತ್ತರು.

ಹುಣಸೂರು ಕ್ಷೇತ್ರದ ಶಾಸಕ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ ನೀಡಿದ ಸಂದರ್ಭ ಸಾ.ರಾ. ಮಹೇಶ್ ಅವರು ವಿಧಾನಸಭೆಯಲ್ಲಿ ಮಾಡಿದ್ದ ಆರೋಪವೊಂದು ಈ ಪ್ರಕರಣದ ಮೂಲ. ವಿಶ್ವನಾಥ್ ಅವರು 25 ಕೋಟಿ ಹಣ ಪಡೆದು ರಾಜೀನಾಮೆ ನೀಡಿದ್ದರು ಎಂದು ಸಾ ರಾ ಮಹೇಶ್ ಆರೋಪ ಮಾಡಿದ್ದರು. ಆದರೆ ನಂತರ ಯಾವುದೇ ಆಣೆ ಪ್ರಮಾಣ ಮಾಡದೇ  ವಿಶ್ವನಾಥ್ ದೇವಾಲಯದಿಂದ ಹೊರಗೆ ತೆರಳಿದರು. 

ವೈಯುಕ್ತಿಕ ಟೀಕೆಯಿಂದ ಬೇಸತ್ತು ರಾಜೀನಾಮೆ ಸಲ್ಲಿಸಲಾಗುತ್ತಿದೆ. ಅನರ್ಹ ಶಾಸಕ ಎಚ್.ವಿಶ್ವನಾಥ್ ಮಾಡಿದ ಟೀಕೆಗಳಿಂದ ಮನನೊಂದು ರಾಜೀನಾಮೆ ನೀಡುತಿದ್ದೇನೆ ಎಂದಿದ್ದಾರೆ. 

ನನ್ನ ವಿರುದ್ದ ಬಳಸಿರುವ ಪದಗಳು ಮನಸ್ಸಿಗೆ ಘಾಸಿ ಉಂಟುಮಾಡಿದೆ. ಅಶ್ಲೀಲ ಆರೋಪ ಹೊತ್ತು ಸಾರ್ವಜನಿಕ ಜೀವನದಲ್ಲಿ ಇರಲು ನನಗೆ ಮನಸ್ಸಿಲ್ಲ. ಆದ್ದರಿಂದ ಸ್ವಇಚ್ಛೆಯಿಂದ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp