ಜಿಲ್ಲೆಯ ಎಲ್ಲಾ ಸಮಸ್ಯೆಗಳನ್ನು ಸುಮಲತಾ ಬಗೆಹರಿಸುತ್ತಿದ್ದಾರೆ: ಅನ್ನದಾನಿ ವ್ಯಂಗ್ಯ

ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ನಾವೆಲ್ಲಾ ಓಡಾಡುತ್ತಿದ್ದೇವೆ. ನಾವು ಏನೂ ಕೆಲಸ ಮಾಡುತ್ತಾ ಇಲ್ಲ ಎಂದು ಜೆಡಿಎಸ್​ ಶಾಸಕ ಅನ್ನದಾನಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ತಿರುಗೇಟು ನೀಡಿದ್ದಾರೆ.

Published: 17th October 2019 10:50 AM  |   Last Updated: 17th October 2019 10:50 AM   |  A+A-


Sumalatha

ಸುಮಲತಾ

Posted By : Shilpa D
Source : UNI

ಮಂಡ್ಯ: ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ನಾವೆಲ್ಲಾ ಓಡಾಡುತ್ತಿದ್ದೇವೆ. ನಾವು ಏನೂ ಕೆಲಸ ಮಾಡುತ್ತಾ ಇಲ್ಲ ಎಂದು ಜೆಡಿಎಸ್​ ಶಾಸಕ ಅನ್ನದಾನಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಗೆ ತಿರುಗೇಟು ನೀಡಿದ್ದಾರೆ.

ಮಳವಳ್ಳಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನ ನಿತ್ಯ ಜನರ ಕಷ್ಟ ಸುಖವನ್ನು ಸುಮಲತಾ ಅವರೇ ಕೇಳುತ್ತಿದ್ದಾರೆ. ತಾಲೂಕು ಕಚೇರಿ,ಪೊಲೀಸ್ ಠಾಣೆ ಎಲ್ಲೇ ಕೆಲಸ ಇದರೂ ಅವರೇ ಮಾಡುತ್ತಿದ್ದಾರೆ. ಕೆರೆ ತುಂಬಿಸಿದ್ದು, ಪಿಂಚಿಣಿ ಕೊಡಿಸುತ್ತಿರುವುದು ಮೇಡಂ ಸುಮಲತಾ ಅವರೇ .ಜಗಳವಾದರೂ ಬಿಡಿಸಿ ಬುದ್ದಿ ಹೇಳುತ್ತಾ ಇರುವುದೂ ಅವರೇ ಎಂದು ಅವರು ವ್ಯಂಗ್ಯ ಭರಿತ ತಿರುಗೇಟು ನೀಡಿದ್ದಾರೆ.

ಮಂಡ್ಯದಲ್ಲಿ ನಮ್ಮದೇನಿದೆ, ಮಳವಳ್ಳಿಯ ಕೆರೆಗಳಿಗೆ ನೀರು ತುಂಬಿಸುತ್ತಾ ಇರೋದೇ ಸುಮಲತಾ ಮೇಡಂ ಎಂದು ವ್ಯಂಗ್ಯವಾಡಿದ್ದಾರೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾನು ಗೆದ್ದೆ ಎಂದು, ಎಂಟು ಜನ ಶಾಸಕರು ಕೆಲಸ ಮಾಡಬಾರದು ಎನ್ನುವ ಕಾನೂನು ಏನಾದರೂ ಇದೆಯಾ" ಎಂದು ಸುಮಲತಾ, ಎರಡು ದಿನಗಳ ಹಿಂದೆ ಹೇಳಿಕೆಯನ್ನು ನೀಡಿದ್ದರು.
 
ಇದಕ್ಕೆ ಪ್ರತಿಕ್ರಿಯಿಸಿದ ಅನ್ನದಾನಿ, "ಕೆರೆಗೆ ನೀರು ತುಂಬಿಸುವುದು ಅವರೇ, ಕೆರೆಗೆ ಪೂಜೆ ಮಾಡುವುದೂ ಅವರೇ.. ನಮ್ಮದೇನಿದ್ದರೂ, ಊಟಮಾಡಿಕೊಂಡು ಹಾಯಾಗಿ ತಿರುಗಾಡಿಕೊಂಡಿರುವುದು" ಎಂದು ಹೇಳಿದ್ದಾರೆ.

"ಇಡೀ ನಮ್ಮ ಮಳವಳ್ಳಿ ತಾಲೂಕಿನ ಕೆಲಸಗಳನ್ನೆಲ್ಲಾ ಅವರೇ ತಮ್ಮ ಹೆಗಲ ಮೇಲೆ ಹಾಕಿಕೊಂಡು ಮಾಡಿಕೊಂಡು ಬರುತ್ತಿದ್ದಾರೆ. ನಾವೇನೂ ಇಲ್ಲಿ ಕೆಲಸಕಾರ್ಯಗಳನ್ನು ಮಾಡುತ್ತಿಲ್ಲ" ಎಂದು ಅನ್ನದಾನಿ ವ್ಯಂಗ್ಯವಾಡಿದ್ದಾರೆ.

Stay up to date on all the latest ರಾಜಕೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp