ಮಹಾರಾಷ್ಟ್ರದ 3, ಉ.ಕರ್ನಾಟಕದ 13 ಜಿಲ್ಲೆ ಸೇರಿಸಿ ಪ್ರತ್ಯೇಕ ರಾಜ್ಯ: ಮತ್ತೆ ಉಮೇಶ ಕತ್ತಿ ವಿವಾದ

ಬಿಜೆಪಿ ಶಾಸಕ ಉಮೇಶ್ ಕತ್ತಿ ಮತ್ತೆ ಪ್ರತ್ಯೇಕ ರಾಜ್ಯದ ಮಾತನಾಡಿದ್ದು, ಮಹಾರಾಷ್ಟ್ರದ 3 ಜಿಲ್ಲೆ, ಉ.ಕರ್ನಾಟಕದ 13 ಜಿಲ್ಲೆ ಸೇರಿಸಿ ಪ್ರತ್ಯೇಕ ರಾಜ್ಯ ಮಾಡುವ ಕುರಿತು ಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಬಿಜೆಪಿ ಶಾಸಕ ಉಮೇಶ್ ಕತ್ತಿ ಮತ್ತೆ ಪ್ರತ್ಯೇಕ ರಾಜ್ಯದ ಮಾತನಾಡಿದ್ದು, ಮಹಾರಾಷ್ಟ್ರದ 3 ಜಿಲ್ಲೆ, ಉ.ಕರ್ನಾಟಕದ 13 ಜಿಲ್ಲೆ ಸೇರಿಸಿ ಪ್ರತ್ಯೇಕ ರಾಜ್ಯ ಮಾಡುವ ಕುರಿತು ಸಲಹೆ ನೀಡಿದ್ದಾರೆ.

ಹೌದು.. ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಉಮೇಶ್ ಕತ್ತಿ, 'ಉತ್ತರ ಕರ್ನಾಟಕದ ಜಿಲ್ಲೆಗಳ ಜೊತೆಗೆ ಮಹಾರಾಷ್ಟ್ರದ ಕೊಲ್ಹಾಪುರ, ಸೊಲ್ಲಾಪುರ ಹಾಗೂ ಸಾಂಗ್ಲಿ ಜಿಲ್ಲೆಗಳನ್ನು ಸೇರಿಸಿಕೊಂಡು ಪ್ರತ್ಯೇಕ ರಾಜ್ಯ ರಚಿಸಿದರೆ ಈ ಭಾಗದ ಅಭಿವೃದ್ಧಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಮುಖವಾಗಿ 'ಮಹದಾಯಿ ಹರಿಯುವ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಇದರ ಜೊತೆ ಕೇಂದ್ರದಲ್ಲಿಯೂ ಸರ್ಕಾರವಿದೆ. ಈ ಅವಕಾಶವನ್ನು ಬಳಸಿಕೊಂಡು ತಕ್ಷಣ ಮಹದಾಯಿ ಬಿಕ್ಕಟ್ಟು ಬಗೆಹರಿಸಲು ಕ್ರಮಕೈಗೊಳ್ಳಬೇಕು' ಎಂದು ಹೇಳಿದರು.

ಮಹಾರಾಷ್ಟ್ರಕ್ಕೆ ನೀರು, ಸಿಎಂ ಬಿಎಸ್ ವೈ ಹೇಳಿಕೆಗೆ ಕತ್ತಿ ಗರಂ
ಇದೇ ವೇಳೆ ನೆರೆಯ ಮಹಾರಾಷ್ಟ್ರಕ್ಕೆ ನೀರು ಹರಿಸುವ ಸಿಎಂ ಬಿಎಸ್ ವೈ ಹೇಳಿಕೆಗೆ ಪರೋಕ್ಷ ವಿರೋಧ ವ್ಯಕ್ತಪಡಿಸಿರುವ ಕತ್ತಿ, ಮೊದಲು ಕೃಷ್ಣಾ ನದಿಯ ಬಿ ಸ್ಕೀಮ್, 740 ಟಿಎಂಸಿ ನೀರು ಬಳಕೆಗೆ ಯಡಿಯೂರಪ್ಪ ಯೋಚನೆ ಮಾಡಲಿ. ಮೊದಲು ನಮ್ಮ ರಾಜ್ಯಕ್ಕೆ ನೀರು ಬಳಕೆ ಮಾಡುವ ಬಗ್ಗೆ ವಿಚಾರ ಮಾಡಲಿ. ಅದರ ಬಗ್ಗೆ ಮಾತನಾಡುವುದು ಬಿಟ್ಟು ಮಹಾರಾಷ್ಟ್ರದ ಚುನಾವಣೆಯಲ್ಲಿ ಯಡಿಯೂರಪ್ಪ ಭಾಷಣೆ ಮಾಡುವುದು ಸರಿಯಲ್ಲ. ಮೊದಲು ಸಿಎಂ ಉತ್ತರ ಕರ್ನಾಟಕದ ನೀರಾವರಿ ಬಗ್ಗೆ ಯೋಚನೆ ಮಾಡಲಿ ಎಂದು ಕಿಡಿಕಾರಿದರು.

ಈ ಕುರಿತಂತೆ ಮಾಧ್ಯಮವೊಂದರೊಂದಿಗೆ ಮಾತನಾಡಿರುವ ಅವರು, 'ಯಡಿಯೂರಪ್ಪನವರು ಮಹದಾಯಿ ಬಗ್ಗೆ ಮಾತನಾಡುತ್ತಿಲ್ಲ. ದಯವಿಟ್ಟು ಉತ್ತರ ಕರ್ನಾಟಕ ಹಾಳು ಮಾಡುವ ಯೋಚನೆ ಮಾಡಬೇಡಿ. ನಾನು ಮತ್ತೆ ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತುತ್ತೇನೆ. ಬಿಎಸ್‍ವೈ ಉತ್ತರ ಕರ್ನಾಟಕದ ಬಗ್ಗೆ ಯೋಚನೆ ಮಾಡಬೇಕು. ಮಹದಾಯಿ, ಕೃಷ್ಣಾ ನದಿ ನೀರು ಬಳಕೆ ಬಗ್ಗೆ ಯೋಚಿಸಲಿ. ಈ ಬಗ್ಗೆ ಮೊದಲು ತೀರ್ಮಾನವಾಗಲಿ ಮುಂದೆ ಅವರು ಎಲ್ಲಿ ಬೇಕಿದ್ದಲ್ಲಿ ನೀರು ಹರಿಸಲಿ. ನಮ್ಮ ರಾಜ್ಯಕ್ಕೆ ಅನ್ಯಾಯ ಆದರೆ ನಾನು ಯಾವುದೇ ರಾಜಕೀಯ ಹೋರಾಟಕ್ಕೂ ಸಿದ್ಧ. ನೆರೆಯ ಮಹಾರಾಷ್ಟ್ರಕ್ಕೆ ನೀರು ಹರಿಸುವ ಮೊದಲು ನಮ್ಮಲ್ಲಿನ ನೀರಿನ ಸಮಸ್ಯ ಬಗೆಹರಿಸಿ ಎಂದು ಕತ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com