ಬಿಜೆಪಿ ಸರ್ಕಾರವನ್ನು ಬೆಂಬಲಿಸಲು ಜೆಡಿಎಸ್ ಶಾಸಕರು ತೀರ್ಮಾನಿಸಿದ್ದೆವು : ಶಾಸಕ ಸುರೇಶ್ ಗೌಡ

ಬಿಜೆಪಿ ಜತೆ ಕೈ ಜೋಡಿಸಲು‌ ಜೆಡಿಎಸ್ ಶಾಸಕರು ನಿರ್ಧರಿಸಿದ್ದೆವು.ನಾವೇ ಅವರಿಗೆ ಬಾಹ್ಯ ಬೆಂಬಲ ನೀಡಿದರೂ ಆಪರೇಷನ್ ಕಮಲ ಏಕೆ ಮಾಡಿದರು ಎಂಬುದು ತಿಳಿದಿಲ್ಲ ಎನ್ನುವ ಮೂಲಕ ನಾಗಮಂಗಲ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಶಾಸಕ ಸುರೇಶ್ ಗೌಡ
ಜೆಡಿಎಸ್ ಶಾಸಕ ಸುರೇಶ್ ಗೌಡ

ಮಂಡ್ಯ: ಬಿಜೆಪಿ ಜತೆ ಕೈ ಜೋಡಿಸಲು‌ ಜೆಡಿಎಸ್ ಶಾಸಕರು ನಿರ್ಧರಿಸಿದ್ದೆವು.ನಾವೇ ಅವರಿಗೆ ಬಾಹ್ಯ ಬೆಂಬಲ ನೀಡಿದರೂ ಆಪರೇಷನ್ ಕಮಲ ಏಕೆ ಮಾಡಿದರು ಎಂಬುದು ತಿಳಿದಿಲ್ಲ ಎನ್ನುವ ಮೂಲಕ ನಾಗಮಂಗಲ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.
  
ನಾಗಮಂಗಲದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಉಪ ಚುನಾವಣೆ ಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳನ್ನು ಗೆಲ್ಲುವುದಿಲ್ಲ. ಅದಕ್ಕಾಗಿ ಬಿಜೆಪಿ ಎರಡನೇ ಹಂತದ ಆಪರೇಷನ್ ಕಮಲ ಮಾಡಬಹುದು.ಜೆಡಿಎಸ್ ಶಾಸಕರನ್ನು ಗೌರವಯುತವಾಗಿ  ನಡೆಸಿಕೊಂಡರೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ತೀರ್ಮಾನ ಮಾಡಿದ್ದೆವು. ಬಿಜೆಪಿ ಬೆಂಬಲಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದೇವೆ. ಗೌರವಯುತವಾಗಿ ನಡೆಸಿಕೊಂಡು ಹೋಗುವುದಾದರೆ ಬೆಂಬಲ ಮಾಡೋಣ ಎಂದು ಕುಮಾರಣ್ಣನೂ ಹೇಳಿದ್ದು ನಿಜ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರದ ರಕ್ಷಣೆಗೆ ಜೆಡಿಎಸ್ ಸಿದ್ಧವಿದೆ ಎಂಬ ಸಂದೇಶ ರವಾನಿಸಿದ್ದಾರೆ.
  
ಬಿಜೆಪಿ ನಾಯಕರು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಬೆಂಬಲ ನೀಡುವುದು ಅನುಮಾನ.ಏಕೆಂದರೆ 2017-18ರಲ್ಲಿ ಬಿಡುಗಡೆ ಮಾಡಿದ್ದ ಅನುದಾನ ಕಿತ್ತುಕೊಂಡರು.ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಅರ್ಥವಾಗು ತ್ತಿಲ್ಲ.ಇದನ್ನೆಲ್ಲಾ ನೋಡಿದರೆ ಅಧಿಕಾರ ಬೇರೆಯದಕ್ಕೆ ಬೇಕು, ಜನಗಳ ಕಷ್ಟ ಸುಖಕ್ಕೆ ಸ್ಪಂದಿಸೋದಕ್ಕಲ್ಲ ಅನ್ನಿಸುತ್ತಿದೆ. ನೋಡೋಣ ಇವೆಲ್ಲಾ ಎಷ್ಟು ದಿನ ನಡೆಯುತ್ತೆ. ಪರಿಸ್ಥಿತಿಯನ್ನು ಎದುರಿಸೋಣ. ನಮ್ಮ ಪಕ್ಷದಿಂದ ಯಾವ ಶಾಸಕರು ಬಿಜೆಪಿಗೆ ಹೋಗಲ್ಲ. ನನಗೆ 2018ರಿಂದಲೂ ಆಮಿಷ ಬರುತ್ತಿದೆ. ಜನರು ನೀಡಿರುವ ಅಧಿಕಾರವನ್ನು ವ್ಯಾಪಾರಕ್ಕೆ ಇಡುವುದಿಲ್ಲ ಎಂದು ಹೇಳಿದರು.
  
ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ, ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ, ಕುತಂತ್ರಿ. ಚಲುವರಾಯಸ್ವಾಮಿಗೆ ಅನುದಾನ ಎಲ್ಲಿ ಬಂತು, ಎಲ್ಲಿ ಹೋಯ್ತು. ಬೆಳಗ್ಗೆ ಯಾರ ಹತ್ತಿರ ಹೋಗೋಣ,ಸಂಜೆ-ರಾತ್ರಿ ಯಾರ ಬಳಿ ಹೋಗಿ ರಾಜಕಾರಣ ಮಾಡುವುದು ಎಂದು ಪಿಹೆಚ್​​ಡಿ ಮಾಡುತ್ತಿದ್ದಾರೆ, ಬೆಳಗ್ಗೆ ಒಂದು ಮನೆಗೆ, ರಾತ್ರಿಯೊಂದು ಮನೆಗೆ ಹೋಗಿ ರಾಜಕಾರಣ ಮಾಡುವವರನ್ನು ಏನು ಹೇಳಬೇಕು, ದುಡ್ಡು, ಅಧಿಕಾರಕ್ಕಾಗಿ ಚಲುವರಾಯಸ್ವಾಮಿ ಏನು ಬೇಕಾದ್ರೂ ಮಾಡುತ್ತಾರೆ ಎಂದರು.


ಇನ್ನು ಅವರೆಲ್ಲ ದೊಡ್ಡವರು, ಸ್ವಯಂ ಘೋಷಿತ ರಾಜ್ಯ ನಾಯಕರು. ಎಚ್.ಡಿ ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ಮಂಡ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂಬ ಚಲುವರಾಯಸ್ವಾಮಿ ಆರೋಪಿಸಿದ್ದಾರೆ. ಕುಮಾರಸ್ವಾಮಿ ಏನು ಮಾಡಿದ್ದಾರೆಂಬುದನ್ನು ಪುಸ್ತಕ ಮುದ್ರಿಸಲಾಗಿದೆ. ಅವರಿಗೂ ತಲುಪಿಸುತ್ತೇವೆ. ಅಲ್ಲದೇ ಕುಮಾರಸ್ವಾಮಿ ಅವರ ಸಹಾಯ ಪ್ರತಿಯೊಂದು ಕುಟುಂಬಕ್ಕೂ ತಲುಪಿದಿಯೋ, ಇಲ್ಲವೋ  ಎಂದು ದೂರವಾಣಿ ಕರೆ ಮಾಡಿ ತಿಳಿದುಕೊಳ್ಳಲಿ. ಅರ್ಧಂಬರ್ಧ ಓದಿ ರಾಜಕೀಯ ಮಾಡೋರು ಹೀಗೆ ಆಡೋದು. ದೊಡ್ಡವರ ಬಗ್ಗೆ ಮಾತ ನಾಡಿದರೆ ಪುಕ್ಕಟೆ ಪ್ರಚಾರ ಸಿಗುತ್ತೆ ಎಂದು ಚೆಲುವರಾಯಸ್ವಾಮಿ ಮಾತನಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com