ಯೋಗೇಶ್ವರ್ ಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ: ಡಾ.ಅಶ್ವಥ್ ನಾರಾಯಣ್

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿಯ ಹಿರಿಯ ಹಾಗೂ ಮುಂಚೂಣಿ ನಾಯಕ‌ರು. ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ಸಿಪಿ ಯೋಗೇಶ್ವರ್ ಮತ್ತು ಅಶ್ವನಾಥರಾಯಣ
ಸಿಪಿ ಯೋಗೇಶ್ವರ್ ಮತ್ತು ಅಶ್ವನಾಥರಾಯಣ

ರಾಮನಗರ:  ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿಯ ಹಿರಿಯ ಹಾಗೂ ಮುಂಚೂಣಿ ನಾಯಕ‌ರು. ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
 
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ನಮ್ಮ ಪಕ್ಷದ ವರಿಷ್ಠರು. ಅವರು ಸದಾ ಕಲಾ ನಮ್ಮ ಪಕ್ಷದ ಉನ್ನತ ಸ್ಥಾನದಲ್ಲಿ ಇರುತ್ತಾರೆ.‌ಅವರು ಕನಸಿನಲ್ಲಿಯೂ ಕಾಂಗ್ರೆಸ್ ಗೆ ಹೋಗುವುದಿಲ್ಲ.ಕಾಂಗ್ರೆಸ್ ಸಂಪೂರ್ಣ ಜನರಿಂದ ತಿರಸ್ಕೃತ ಪಕ್ಷವಾಗಿದೆ. ಸಮಾಜ ವಿಭಜನೆ,ಜಾತಿ ಒಡೆಯುವುದು. ಜಾತಿ ಜಾತಿಗಳನ್ನು ಎತ್ತಿಕಟ್ಟುವ ಕೆಲಸವನ್ನು ಮಾಡುವ ಕಾಂಗ್ರೆಸ್ ಈಗಾಗಲೇ ಮುಳುಗುತ್ತಿರುವ ಹಡಗಾಗಿದೆ ಎಂದು ಎಂದು ಅವರು ಲೇವಡಿ ಮಾಡಿದರು.
 
ಚನ್ನಪಟ್ಟಣದಲ್ಲಿ ಆಗಿರುವ ನೀರಾವರಿ ಸುಧಾರಣೆ ನಮ್ಮ ಪಕ್ಷದ ಕೊಡುಗೆ ಯೋಗೇಶ್ವರ್ ನಮ್ಮ ಪಕ್ಷದಲ್ಲೇ ಇದ್ದು,ಇನ್ನು ಎತ್ತರದ ಸ್ಥಾನಕ್ಕೆ ಏರಲಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವು ಖಂಡಿತ ಒಳ್ಳೆಯದಾಗುತ್ತದೆ.ಎರಡನೆ ಹಂತದ ಸಂಪುಟ ವಿಸ್ತರಣೆವರೆಗೆ ಕಾದು ನೋಡಿ. ಅವರಿಗೆ ಉನ್ನತ ಸ್ಥಾನದೊಂದಿಗೆ ಅವಕಾಶವು ದೊರೆಯಲಿದೆ. ಅವರು ಎಂದೂ ಹಿಂದೆ ಸರಿಯುವ ವ್ಯಕ್ತಿ ಅಲ್ಲ.‌ಸದ ಕಾಲ ಮುಂದೆ ಇರುವ ನಾಯಕರು ಅವರು. ಇನ್ನು ಹುಣಸೂರು ಕ್ಷೇತ್ರದಿಂದ ಯೋಗೇಶ್ವರ್ ಕಣಕ್ಕಿಳಯುವ ಬಗ್ಗೆ ಇನ್ನು ಕಾಲವಿದೆ ಎಂದು ಹೇಳಿದರು.
 
ಈ‌ ಹಿಂದೆ ವ್ಯಾಟ್ ಪದ್ದತಿ ಇದ್ದಾಗ ಹೆಚ್ಚಿನ ತೆರಿಗೆ ಕಟ್ಟಬೇಕಿತ್ತು. ಹತ್ತಾರು ರೀತಿ‌ ತೆರಿಗೆ ಇತ್ತು.ಅದು ಜನರ ಕಣ್ಣಿಗೆ ಕಾಣಿಸುತ್ತಿರಲಿಲ್ಲ.ಜಿಎಸ್ ಟಿ ಡೈರೆಕ್ಟ್ ಟ್ಯಾಕ್ಸ್ ಅಗಿರುವ ಹಿನ್ನಲೆಯಲ್ಲಿ‌ ಜನರ ಕಣ್ಣಿಗೆ ಕಾಣುತ್ತಿದೆ. ಜಿಎಸ್ ಟಿ‌ ಇನ್ನು ಸರಳೀಕರಣ ಮಾಡಲಾಗುತ್ತಿದೆ.‌ ಒಂದು ದೇಶ ಒಂದು ಮಾರುಕಟ್ಟೆ ಜಾರಿಯಲ್ಲಿದೆ.ಇನ್ನಷ್ಟು ಸುಧಾರಣೆ ನಡೆಯಲಿದೆ ಎಂದರು.
 
ಈ‌ ಹಿಂದೆ ದೊಡ್ಡ ಕುಳಗಳು ಟ್ಯಾಕ್ಸ್ ಕಟ್ಟುತ್ತಿರಲಿಲ್ಲ. ಖಾದಿಗೆ ಸಿಗುವಷ್ಟು ಸೌಲಭ್ಯ ಕರಕುಶಲ ವಸ್ತುಗಳಿಗೆ ದೊರೆಯಲಿದೆ.ವಿಶ್ವದ ಇತರೆ ರಾಷ್ಟ್ರಗಳು ನಕಾರಾತ್ಮಕ ಬೆಳವಣಿಗೆ ಕಾಣುತ್ತಿದೆ. ಭಾರತವೇ ಉತ್ತಮವಾಗಿದೆ. ಆದರೆ, ಇನ್ನು ಸವಾಲುಗಳಿವೆ.‌ ಅದನ್ನು ಸ್ವೀಕರಿಸಿ ಆರ್ಥಿಕ ಸುಧಾರಣೆಗೆ ಬಿಜೆಪಿ ಸಿದ್ದ ಇದೆ ಎಂದರು.
 
ಲೋಕಲ್ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧೆ ಮಾಡಿ ಗೆಲ್ಲುತ್ತದೆ. ಅನರ್ಹ ಶಾಸಕರ ಬಗ್ಗೆ ಇದು ಮಾತನಾಡುವ ಸ್ಥಳ ಅಲ್ಲ ಬರಿ ರಾಜಕೀಯ ಈಗ ಬೇಡ. ಅಭಿವೃದ್ಧಿ ಬಗ್ಗೆಯು ಮಾತನಾಡೊಣ ಎಂದು ಅನರ್ಹ ಶಾಸಕರ ಬಗ್ಗೆ ಮಾತನಾಡಲು‌ ನಿರಾಕರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com