ಬಿಜೆಪಿಯದ್ದು ವಿಕೃತ ಮನಸ್ಥಿತಿ: ರಾಮಲಿಂಗಾರೆಡ್ಡಿ

ಇಷ್ಟು ವರ್ಷಗಳ ಕಾಲ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವ ಕಾಂಗ್ರೆಸ್ ಪಕ್ಷವನ್ನು ದೇಶಕ್ಕಾಗಿ ಪಕ್ಷ ಏನು ಮಾಡಿದೆ ಎಂದು ಬಿಜೆಪಿ ನಾಯಕರು ಕೇಳುವುದು ಅವರ ವಿಕೃತ ಮನೋಭಾವನೆಯನ್ನು ತೋರಿಸುತ್ತದೆ.

Published: 21st October 2019 02:21 PM  |   Last Updated: 21st October 2019 03:13 PM   |  A+A-


Ramalinga Reddy

ರಾಮಲಿಂಗಾ ರೆಡ್ಡಿ

Posted By : Shilpa D
Source : UNI

ಬೆಂಗಳೂರು: ಇಷ್ಟು ವರ್ಷಗಳ ಕಾಲ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವ ಕಾಂಗ್ರೆಸ್ ಪಕ್ಷವನ್ನು ದೇಶಕ್ಕಾಗಿ ಪಕ್ಷ ಏನು ಮಾಡಿದೆ ಎಂದು ಬಿಜೆಪಿ ನಾಯಕರು ಕೇಳುವುದು ಅವರ ವಿಕೃತ ಮನೋಭಾವನೆಯನ್ನು ತೋರಿಸುತ್ತದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ನಗರದ ಗಾಂಧಿಭವನದಲ್ಲಿ ನಡೆದ ಗಾಂಧಿ ನೆನಪಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಯಾವುದೇ ದೇಶಕ್ಕೆ ಹೋದರೂ ಗಾಂಧಿಯನ್ನು ಸ್ಮರಿಸಲಾಗುತ್ತದೆ. ಭಾರತ ದೇಶವನ್ನು ಪ್ರಪಂಚದಲ್ಲಿ ಗುರುತಿಸುವಂತೆ ಮಾಡಿದ್ದು, ದೇಶಕ್ಕೆ ಹೆಸರು ತಂದುಕೊಟ್ಟಿದ್ದು ಮಹಾತ್ಮಗಾಂಧೀಜಿ. ದೇಶದ ಜನರನ್ನು ಒಗ್ಗೂಡಿಸಿದವರು ಗಾಂಧೀಜಿ. ಪ್ರಸಕ್ತ ಸನ್ನಿವೇಶದಲ್ಲಿ ಗಾಂಧೀಜಿಯನ್ನು ಸ್ಮರಿಸಿಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದು ಕಾಂಗ್ರೆಸ್. ಆದರೂ ಬಿಜೆಪಿಯವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಹಿಂದೆ ಬಿಜೆಪಿಯ ಅಸ್ವಿತ್ವವೇ ಇರಲಿಲ್ಲ. ಸ್ವಾತಂತ್ರ್ಯ ಚಳುವಳಿ ವೇಳೆ ಬಿಜೆಪಿ ಹಿರಿಯರು ಇರಲೇ ಇಲ್ಲ. ವಿಕೃತ ಮನಸ್ಸಿನಿಂದ ಇವತ್ತು ಪ್ರಶ್ನೆ ಮಾಡುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.

Stay up to date on all the latest ರಾಜಕೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp