ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಸರ್ಜಿಕಲ್ ಸ್ಟ್ರೈಕ್ ಓಕೆ, ಆದರೆ ಚುನಾವಣೆಗೂ ಮುನ್ನವೇ ಏಕೆ?: ಕಾಂಗ್ರೆಸ್

ಸರ್ಜಿಕಲ್ ಸ್ಟ್ರೈಕ್ ಓಕೆ, ಆದರೆ, ಚುನಾವಣೆಗೂ ಮುನ್ನವೇ ಸರ್ಜಿಕಲ್ ಸ್ಟ್ರೈಕೆ ಏಕೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಸೋಮವಾರ ಪ್ರಶ್ನಿಸಿದೆ. 

ಬೆಂಗಳೂರು: ಸರ್ಜಿಕಲ್ ಸ್ಟ್ರೈಕ್ ಓಕೆ, ಆದರೆ, ಚುನಾವಣೆಗೂ ಮುನ್ನವೇ ಸರ್ಜಿಕಲ್ ಸ್ಟ್ರೈಕೆ ಏಕೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ಸೋಮವಾರ ಪ್ರಶ್ನಿಸಿದೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ರಾಮಲಿಂಗಾ ರೆಡ್ಡಿಯವರು, ಸರ್ಜಿಕಲ್ ಸ್ಟ್ರೈಲ್ ಉತ್ತಮವಾದದ್ದು. ಆದರೆ, ಚುನಾವಣೆಗೂ ಮುನ್ನವೇ ಸರ್ಜಿಕಲ್ ಸ್ಟ್ರೈಕ್ ಏಕೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ. 
 

ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು.

ಇದೇ ವೇಳೆ ಡಿಕೆ.ಶಿವಕುಮಾರ್ ಮನೆ ಮೇಲೆ ಮತ್ತೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆಂಬ ವರದಿಗಳಿಗೆ ಸ್ಪಷ್ಟನೆ ನೀಡಿದ ಅವರು,  ಡಿಕೆಶಿ ಮನೆ ಯಾವುದೇ ರೀತಿಯ ಹೊಸ ದಾಳಿಗಳೂ ನಡೆದಿಲಲ ಎಂದಿದ್ದಾರೆ. 

ಈ ನಡುವೆ ಪ್ರಮಾಣಿಕರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಕೆ.ಆರ್.ಪುರಂ ಕಾಂಗ್ರೆಸ್ ಕಾರ್ಯಕರ್ತರು ಕಾಲ್ನಡಿಗೆ ಮೂಲಕ ಪ್ರತಿಭಟನೆ ನಡೆಸಿದ್ದಾರೆ. 

ಪ್ರಾಮಾಣಿಕರಿಗೆ ಟಿಕೆಟ್ ನೀಡದೆ, ಹಣದ ಬ್ಯಾಗ್ ನೀಡಿದವರಿಗೆ ಪಕ್ಷ ಟಿಕೆಟ್ ನೀಡಿದ್ದೇ ಆದರೆ, 101 ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ಚುನಾವಣಾ ಕಣಕ್ಕಿಳಿಯಲಿದ್ದಾರೆಂದು ಕೆ.ಆರ್.ಪುರಂ ಕಾಂಗ್ರೆಸ್ ಕಾರ್ಯಕರ್ತ ಎಲ್.ಶ್ರೀನಿವಾಸ್ ಅವರು ಎಚ್ಚರಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com