ಕಾಂಗ್ರೆಸ್ ನ ತಂಗಡಗಿ, ರಾಯರೆಡ್ಡಿ ಮಿಂಚಿಂಗ್ ಸ್ಟಾರ್ಸ್: ಸಂಸದ ಕರಡಿ ಸಂಗಣ್ಣ ಆರೋಪ

ಮಾಜಿ ಸಚಿವ ಶಿವರಾಜ್ ತಂಗಡಗಿ, ಬಸವರಾಜ ರಾಯರೆಡ್ಡಿ ಮಿಂಚಿಂಗ್ ಸ್ಟಾರ್ಸ್. ಸದಾ ಬೆಂಗಳೂರಿನಲ್ಲೇ ಇರುವ ಇವರು ಅಪರೂಪಕ್ಕೆ ಕ್ಷೇತ್ರದ ಕಡೆಗೆ ಮುಖ ಮಾಡುತ್ತಾರೆ. ಆದರೂ ಅವರು ಮಾಡಿ ದಬ್ಬಾಕಿದ್ದು ಏನು ಇಲ್ಲ ಎಂದು ಬಿಜೆಪಿ ಸಂಸದ ಕರಡಿ ಸಂಗಣ್ಣ ಆರೋಪಿಸಿದ್ದಾರೆ.

Published: 23rd October 2019 05:19 PM  |   Last Updated: 23rd October 2019 05:44 PM   |  A+A-


Karadi Sanganna

ಸಂಸದ ಕರಡಿ ಸಂಗಣ್ಣ

Posted By : Vishwanath S
Source : RC Network

ಕೊಪ್ಪಳ: ಮಾಜಿ ಸಚಿವ ಶಿವರಾಜ್ ತಂಗಡಗಿ, ಬಸವರಾಜ ರಾಯರೆಡ್ಡಿ ಮಿಂಚಿಂಗ್ ಸ್ಟಾರ್ಸ್. ಸದಾ ಬೆಂಗಳೂರಿನಲ್ಲೇ ಇರುವ ಇವರು ಅಪರೂಪಕ್ಕೆ ಕ್ಷೇತ್ರದ ಕಡೆಗೆ ಮುಖ ಮಾಡುತ್ತಾರೆ. ಆದರೂ ಅವರು ಮಾಡಿ ದಬ್ಬಾಕಿದ್ದು ಏನು ಇಲ್ಲ ಎಂದು ಬಿಜೆಪಿ ಸಂಸದ ಕರಡಿ ಸಂಗಣ್ಣ ಆರೋಪಿಸಿದ್ದಾರೆ. 

ಕ್ಷೇತ್ರಕ್ಕೆ ಬಂದರೂ ಜನರ ಸಮಸ್ಯೆ ಕೇಳೋದನ್ನ ಬಿಟ್ಟು ಮಾಧ್ಯಮದವರ ಎದುರು ಅಡ್ಡಾದಿಡ್ಡಿ ಮಾತಾಡಿ ಮಿಂಚುತ್ತಾರೆ. ಬಾಯಿಗೆ ಬಂದಂತೆ ಮಾತನಾಡಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸೊ ಮಿಂಚಿಂಗ್ ಸ್ಟಾರ್ಸ್ ಇವರು ಎಂದು ನವಲಿಯಿಂದ ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ. 

ನವಲಿಯಿಂದ ಕಾರಟಗಿಗೆ ಮಹಾತ್ಮ ಗಾಂಧಿ ಸಂಕಲ್ಪ ಪಾದಯಾತ್ರೆ ವೇಳೆ ಸಂಗಣ್ಣ ಈ ಭಾಗದಲ್ಲಿ ಸಮಾಂತರ ಜಲಾಶಯ ನಿರ್ಮಾಣ ಅಗತ್ಯವಿದೆ. ಅದಕ್ಕಿರುವ ಸಮಸ್ಯೆ ತಿಳಿಯಲು ಜನಾಭಿಪ್ರಾಯ ಸಂಗ್ರಹಿಸಲು ಈ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ ಎಂದರು.

ತಂಗಡಗಿ ಸೋತಿದ್ದಾರೆ. ಮಾಡೋಕೆ ಬೇರೆ ಕೆಲಸ ಇಲ್ಲ. ಅದಕ್ಕೆ ಆಗಾಗ್ಗೆ ಮಾಧ್ಯಮ ಎದುರು ಶೋ ಮಾಡುತ್ತಾರೆ ಎಂದು ಸಂಗಣ್ಣ ಕರಡಿ ಆರೋಪಿಸಿದ್ದಾರೆ. 

ವರದಿ: ಬಸವರಾಜ್ ಕರುಗಲ್

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp