ಒಡೆದ ಮನೆಯಾಗಿರುವ ಕಾಂಗ್ರೆಸ್: ಉಪಚುನಾವಣೆ ಇದ್ದರೂ ರಚನೆಯಾಗಿಲ್ಲ ಕೋರ್ ಕಮಿಟಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ  ಸಂಪೂರ್ಣವಾಗಿ ರಚನೆಯಾಗಿಲ್ಲ, ಆದರೆ ಉಪ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿದೆ. 
ಸೋನಿಯಾ ಗಾಂಧಿ ಮತ್ತು ಸಿದ್ದರಾಮಯ್ಯ
ಸೋನಿಯಾ ಗಾಂಧಿ ಮತ್ತು ಸಿದ್ದರಾಮಯ್ಯ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ  ಸಂಪೂರ್ಣವಾಗಿ ರಚನೆಯಾಗಿಲ್ಲ, ಆದರೆ ಉಪ ಚುನಾವಣೆಗಾಗಿ ಸಿದ್ಧತೆ ನಡೆಸುತ್ತಿದೆ. 

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಕೆಪಿಸಿಸಿ ವಿಸರ್ಜಿಸಿ ಈಗಾಗಲೇ ನಾಲ್ಕು ತಿಂಗಳು ಕಳೆದಿವೆ, ಆದರೆ ಹೈಕಮಾಂಡ್ ಇನ್ನೂ ಕೆಪಿಸಿಸಿ ನೇಮಕಾತಿ ನಡೆದಿಲ್ಲ,

ಡಿಸೆಂಬರ್ 5ರಂದು ನಡೆಯುವ ಉಪ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗಳಿಸಲು ಸಿದ್ದರಾಮಯ್ಯ ಅವರಿಗೆ ಟಾಸ್ಕ್ ನೀಡಲಾಗಿದೆ ಎಂದು ಹೇಳಲಾಗಿದೆ. ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಅವರ ಸಹಾಯಕ್ಕಾಗಿ ಕೂಡಲೇ ಕೆಪಿಸಿಸಿಗೆ ಪೂರ್ಣ ಪ್ರಮಾಣದ ತಂಡ ನೇಮಿಸಬೇಕೆಂದು ಒತ್ತಾಯಿಸಲಾಗಿದೆ.

ಈಗಾಗಲೇ ತುಂಬಾ ತಡವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಭಯ ಪಡುತ್ತಿದ್ದಾರೆ, ಕೂಡಲೇ ಕೆಪಿಸಿಸಿ ಪೂರ್ಣ ಪ್ರಮಾಣದಲ್ಲಿ ರಚನೆಯಾದರೇ ಪ್ರಚಾರಕ್ಕೆ ಮತ್ತಷ್ಟು ಬಲ ಬರುತ್ತದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. 

ಅನರ್ಹ ಶಾಸಕರ ಪ್ರಕರಣ ಇನ್ನೂ ಸುಪ್ರೀಂಕೋರ್ಟ್ ನಲ್ಲಿದೆ, ಹೀಗಾಗಿ ಚುನಾವಣೆ ನಡೆಯುತ್ತದೋ ಇಲ್ಲವೋ ಎಂಬುದರ ಬಗ್ಗೆ ಅನುಮಾನವಿದೆ, ಒಂದು ವೇಳೆ ಚುನಾವಣೆ ಬಗ್ಗೆ ಸ್ಪಷ್ಟನೆ ದೊರೆತರೆ ಚುನಾವಣೆಗೆ ಸಿದ್ದಗೊಳ್ಳುತ್ತೇವೆ ಗುಂಡೂರಾವ್ ಹೇಳಿದ್ದಾರೆ.

2019ರ ಜೂನ್ ತಿಂಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ರಾಜ್ಯ ಘಟಕವನ್ನು ವಿಸರ್ಜಿಸಿತ್ತು, ಕಾರ್ಯದರ್ಶಿ ಮತ್ತು ಸದಸ್ಯರು, ಉಪಾಧ್ಯಕ್ಷರು ಸೇರಿದಂತೆ ಸುಮಾರು 300 ಮಂದಿಯನ್ನು  ವಿಸರ್ಜಿಸಲಾಗಿತ್ತು.

ಕಾಂಗ್ರೆಸ್ ಸದ್ಯ ಒಡೆದ ಮನೆಯಾಗಿದೆ, ಹೀಗಾಗಿ ವಾಪಸ್ ಹಿಂದಿನ ಸ್ಥಿತಿಗೆ ಬರುವುದು ಕಷ್ಟವಾಗಲಿದೆ. ಕಳೆದುಕೊಂಡ ಸಾಮರ್ಥ್ಯವನ್ನು ಮತ್ತೆ ಪಡೆದುಕೊಳ್ಳಲು ಕಾಂಗ್ರೆಸ್ ಸಿದ್ದರಾಮಯ್ಯ ಅವರಂತ ವರ್ಚಸ್ವಿ ನಾಯಕರ ಅವಶ್ಯಕತೆಯಿದೆ ಎಂದು ರಾಜಕೀಯ ಪಂಡಿತ ಪ್ರೊ ಹರೀಶ್ ರಾಮಸ್ವಾಮಿ ಹೇಳಿದ್ದಾರೆ.

ಕಾಂಗ್ರೆಸ್ ಮಾಡು ಅಥವಾ ಮಡಿ ಸ್ಥಿತಿಯಲ್ಲಿದೆ, ಹೀಗಾಗಿ ಎಲ್ಲವನ್ನು ಸರಿಯಾಗಿ ಕೊಂಡೊಯ್ಯುವ ಮಾಸ್ ಲೀಡರ್ ಅವಶ್ಯಕತೆಯಿದೆ ಎಂದು ಹೇಳಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com