ಬಿಜೆಪಿಗೆ ಮರಳುವಂತೆ ವರಿಷ್ಠರಿಂದ ಆಹ್ವಾನ ಬಂದಿದೆ: ಸಿ.ಎಚ್. ವಿಜಯ್ ಶಂಕರ್
ಬಿಜೆಪಿಗೆ ಮರಳುವಂತೆ ವರಿಷ್ಠರಿಂದ ಆಹ್ವಾನ ಬಂದಿದೆ. ರಾಜಕೀಯದಲ್ಲಿ ಇಂತಹ ರಾಜಕೀಯ ಸ್ಥಿತ್ಯಂತರ ಸಹಜ.ಪಕ್ಷಕ್ಕಾಗಿ ದುಡಿದಿದ್ದೀರಿ. ಮರಳಿ ಬರುವುದಾದರೆ ಸ್ವಾಗತ ಎಂದಿದ್ದಾರೆ.
Published: 26th October 2019 09:21 AM | Last Updated: 26th October 2019 12:09 PM | A+A A-

ವಿಜಯ್ ಶಂಕರ್
ಹುಣಸೂರು: ಬಿಜೆಪಿಗೆ ಮರಳುವಂತೆ ವರಿಷ್ಠರಿಂದ ಆಹ್ವಾನ ಬಂದಿದೆ. ರಾಜಕೀಯದಲ್ಲಿ ಇಂತಹ ರಾಜಕೀಯ ಸ್ಥಿತ್ಯಂತರ ಸಹಜ.ಪಕ್ಷಕ್ಕಾಗಿ ದುಡಿದಿದ್ದೀರಿ. ಮರಳಿ ಬರುವುದಾದರೆ ಸ್ವಾಗತ ಎಂದಿದ್ದಾರೆ ಎಂದು ಮಾಜಿ ಶಾಸಕ.ಸಿ.ಎಚ್.ವಿಜಯ ಶಂಕರ್ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದರು.
ನಗರದಲ್ಲಿ ವಿಜಯ್ ಶಂಕರ್ ನಿವಾಸದಲ್ಲಿ ಕರೆದಿದ್ದ ಸಮಾನ ಮನಸ್ಕರು,ಹಾಗೂ ಬೆಂಬಲಿಗರು,ಮುಖಂಡರ ಸಭೆಯಲ್ಲಿಅವರು ಮಾತನಾಡಿ,ಅಭಿಮಾನಿಗಳು ಬಿಜೆಪಿ ಸೇರುವುದೇ ಒಳಿತು ಎನ್ನುವ ಮಾತುಗಳನ್ನಾಡಿದ್ದಾರೆ. ಹಾಗಾಗಿ ಬಿಜೆಪಿ ವರಿಷ್ಠರ ಜೊತೆ ಅವರ ನೀಡಿರುವ ಆಹ್ವಾನದ ಕುರಿತು ಶೀಘ್ರ ಚರ್ಚಿಸಿ ಸೂಕ್ತ ನಿರ್ಣಯ ಪ್ರಕಟಿಸಲಿದ್ದೇನೆ ಎಂದರು.
ಬಿಜೆಪಿ ತೊರೆದದ್ದು ತಪ್ಪಾಗಿದೆ ಬಿಜೆಪಿ ತೊರೆದಿದ್ದು ತಪ್ಪಾಗಿದೆ. ಮುಂದೆ ಇಂತಹ ತಪ್ಪು ಆಗದಂತೆ ಎಚ್ಚರ ವಹಿಸಿ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣ ನಿಮ್ಮಲ್ಲಿದೆ. ಪ್ರತಿ ತಾಲೂಕಿನಲ್ಲಿಯೂ ನಿಮ್ಮ ಅಭಿಮಾನಿಗಳಿದ್ದು, ಅವರ ಅಭಿಪ್ರಾಯ ಕೇಳಿ ಮುಂದಿನ ತೀರ್ಮಾನ ಕೈಗೊಳ್ಳಿ ಎಂದು ಬೆಂಬಲಿಗರು ಸಲಹೆ ನೀಡಿದ್ದಾರೆ.
ಅಧಿಕಾರ ಕೇಳಲು ಆಗುವುದಿಲ್ಲ "ಸಿದ್ದರಾಮಯ್ಯ ಆಶ್ವಾಸನೆ ನಂಬಿ ಕಾಂಗ್ರೆಸ್ ಸೇರಿದೆ. ನನಗೆ ಟಿಕೆಟ್ ನೀಡಿದ ಸಿದ್ದರಾಮಯ್ಯಗೆ ಭಾರವಾಗಿ ಇರಲು ನನಗೆ ಇಷ್ಟವಿಲ್ಲ. ಕಾಂಗ್ರೆಸ್‌ನಲ್ಲಿ ಅಧಿಕಾರ ಕೇಳಲು ಆಸ್ಪದವೇ ಇಲ್ಲ. ಕಾರಣ ನನಗಿಂತ ಹಿರಿಯರು ಅಲ್ಲಿದ್ದಾರೆ" ಎಂದು ಸಿ. ಎಚ್. ವಿಜಯಶಂಕರ್ ಹೇಳಿದರು.