ಸಿಎಂ ಗಾದಿಗೇರುವಂತೆ ಪ್ರಧಾನಿ ಮೋದಿಯೇ ಆಹ್ವಾನ ನೀಡಿದ್ದರು: ಎಚ್ ಡಿಕೆ ಸ್ಫೋಟಕ ಹೇಳಿಕೆ

ಸಿಎಂ ಗಾದಿಗೇರುವಂತೆ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿಯೇ ಆಹ್ವಾನ ನೀಡಿದ್ದರು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಿಕ್ಕೋಡಿ: ಸಿಎಂ ಗಾದಿಗೇರುವಂತೆ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿಯೇ ಆಹ್ವಾನ ನೀಡಿದ್ದರು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವ ಹಾಗಿದ್ದರೆ ಲೋಕಸಭೆ ಚುನಾವಣೆಗೂ ಮುನ್ನವೇ ಬೆಂಬಲ ನೀಡುತ್ತಿದ್ದೆ.ಆಗ ನೀವೇ ಮುಖ್ಯಮಂತ್ರಿ ಆಗುವಂತೆ ಪ್ರಧಾನ ಮಂತ್ರಿ ಅವ ರಿಂದಲೇ ಆಹ್ವಾನವಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಟೋಟಕ ಹೇಳಿಕೆ ನೀಡಿದ್ದಾರೆ.

ಕಾಗವಾಡದ ಜುಗುಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನು ಯಾರ ಹಂಗಿ ನಲ್ಲೂ ಇಲ್ಲ. ಇಂಥವರಿಗೆ ಬೆಂಬಲ ಕೊಡುತ್ತೇನೆ ಎಂದ ಯಾರಿಗೂ ಬರೆದು ಕೊಟ್ಟಿಲ್ಲ.ನಾನು ರಾಜಕಾ ರಣ ಮಾಡುವುದು ನನ್ನ ವೈಯಕ್ತಿಕ ಈರ್ಷೆಗಳಿಗಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕೋಮುವಾದಿಗಳನ್ನು ಕುಮಾರಸ್ವಾಮಿ ಬೆಂಬಲಿಸುತ್ತಿದ್ದಾರೆ,’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು, 'ಈಗ ಸರ್ಕಾರ ಬಿದ್ದರೆ, ಹೊಸ ಸರ್ಕಾರ ರಚನೆಯಾಗಲು ಐದು ತಿಂಗಳು ಅಲ್ಲಿಯ ವರೆಗೆ ಜನರನ್ನು ನೋಡುವವರು ಯಾರು? ಇದೇ ಕಾರಣಕ್ಕೆ ಬಿಜೆಪಿ ಸರ್ಕಾರವನ್ನು ಬೀಳಲು ಬಿಡುವುದಿಲ್ಲ ಎಂದಿದ್ದೆ. ನಾನು ನನ್ನನ್ನು ಯಾರಿಗೂ ಬರೆದುಕೊಟ್ಟಿಲ್ಲ. ಪ‍್ರಧಾನಿ ಕರೆದಾಗಲೇ ಬಿಜೆಪಿ ಜತೆಗೆ ಹೋಗಲಿಲ್ಲ. ಕೋಮುವಾದ ಎಂದರೆ ಏನು, ಸಿದ್ದರಾಮಯ್ಯ ಯಾರು, ತಮ್ಮ ಅಧಿಕಾರವಧಿಯಲ್ಲಿ ಸಿದ್ದರಾಮಯ್ಯ ಯಾವೆಲ್ಲ ವರ್ಗಕ್ಕೆ ಸಮುದಾಯ ಭವನಗಳನ್ನು ನೀಡಿದ್ದಾರೆ, ಅದರಲ್ಲಿ ಎಷ್ಟು ತಾರತಮ್ಯ ಮಾಡಿದ್ದಾರೆ, ಇವರಿಗಿಂತಲೂ ದೊಡ್ಡ ಕೋಮುವಾದಿ ಮತ್ತೊಬ್ಬರಿಲ್ಲ,’ ಎಂದು ಅವರು ಕಿಡಿಕಾರಿದ್ದಾರೆ.

‘ನಾನು ಬಿಜೆಪಿ ಜೊತೆ ಹೋಗುವಂತಿದ್ದರೆ ಲೋಕಸಭೆ ಚುನಾವಣೆಗೆ ಮೊದಲೇ ಹೋಗುತ್ತಿದ್ದೆ. ಪ್ರಧಾನ ಮಂತ್ರಿಯೇ ನನಗೆ ಆಹ್ವಾನ ನೀಡಿದ್ದರು. ನನ್ನನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸುವುದಾಗಿ ಹೇಳಿದ್ದರು. ನಾವು ಚುನಾವಣೆಗಳ ಹಿಂದೆ ಹೋದರೆ ಜನರನ್ನು ನೋಡುವವರು ಯಾರು? ಸರ್ಕಾರ ಬಿದ್ದು ಹೊಸ ಸರ್ಕಾರ ರಚನೆಯಾಗುವ ಐದು ತಿಂಗಳವರೆಗೆ ಜನ ಏನು ಮಾಡಬೇಕು. ನಾನು ರಾಜಕಾರಣ ಮಾಡುವುದು ವೈಯಕ್ತಿಕ ಲಾಭಕಲ್ಲ. ನನ್ನನ್ನು ಯಾರಿಗೂ ಬರೆದುಕೊಟ್ಟಿಲ್ಲ,’ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com