ಫೋನ್ ನೀಡಿದ್ದಕ್ಕೆ ನನಗೆ ಐಟಿ ನೊಟೀಸ್, ಗಿಫ್ಟ್ ತೆಗೆದುಕೊಂಡ ಬಿಜೆಪಿ ಸಂಸದರಿಗೇಕಿಲ್ಲ: ಡಿಕೆಶಿ

ಲೋಕಸಭೆ ಚುನಾವಣೆಯ ನಂತರ ಹೊಸಗಿ ಆಯ್ಕೆಯಾದ ಎಲ್ಲಾ ಸಂಸದರಿಗೆ ನಾನು ಫೋನ್ ಗಿಫ್ಟ್ ನೀಡಿದ್ದಕ್ಕೆ ಆದಾಯ ತೆರಿಗೆ ಇಲಾಖೆ ನೊಟೀಸ್ ಜಾರಿ ಮಾಡಿತ್ತು. 
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಲೋಕಸಭೆ ಚುನಾವಣೆಯ ನಂತರ ಹೊಸಗಿ ಆಯ್ಕೆಯಾದ ಎಲ್ಲಾ ಸಂಸದರಿಗೆ ನಾನು ಫೋನ್ ಗಿಫ್ಟ್ ನೀಡಿದ್ದಕ್ಕೆ ಆದಾಯ ತೆರಿಗೆ ಇಲಾಖೆ ನೊಟೀಸ್ ಜಾರಿ ಮಾಡಿತ್ತು. 

ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬೆಂಗಳೂರಿಗೆ ಬಂದ ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದರು, ಈ ವೇಳೆ ಮಾತನಾಡಿದ ಅವರು, ನಾನು ಎಲ್ಲಾ ಸಂಸದರಿಗೂ ಹೊಸ ಫೋನ್ ಗಿಫ್ಟ್ ನೀಡಿದೆ, ಅದರಲ್ಲಿ ಬಿಜೆಪಿಯ ಕೆಲ ಸಂಸದರು ಗಿಫ್ಟ್ ಪಡೆದರು ಕೆಲವರು ನಿರಾಕರಿಸಿದರು, ಫೋನ್ ಪಡೆದ ಕೆಲ ಬಿಜೆಪಿ ಸಂಸದರು ನನ್ನ ವಿರುದ್ಧವೇ ಮಾತನಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಹೊಸ ಸಂಸದರಿಗೆ ಏನಾದರೂ ಗಿಫ್ಟ್ ನೀಡಿ ಎಂದು ಕೆಲವರು ನನಗೆ ಹೇಳಿದರು, ಹೀಗಾಗಿ ನಾನು ಸಂಸದರಿಗೆ ಫೋನ್ ಗಿಫ್ಟ್ ನೀಡಿದೆ. ಗಿಫ್ಟ್ ನೀಡಿದ ತಕ್ಷಣವೇ ನನಗೆ ಐಟಿಯಿಂದ ನೋಟಿಸ್ ಬಂತು. ಅದರ ಪ್ರಕಾರ ನಾನು ಫೋನ್ ಗಿಫ್ಟ್ ನೀಡಿದ್ದಕ್ಕೆ ಆದ ಖರ್ಚಿನ ಲೆಕ್ಕ ನೀಡಿದ್ದೇನೆ., ಮೂವರನ್ನು ಹೊರತು ಪಡಿಸಿದರೇ ಎಲ್ಲಾ ಸಂಸದರು ಗಿಫ್ಟ್ ಸ್ವೀಕರಿಸಿದ್ದಾರೆ, ಗಿಫ್ಟ್ ತೆಗೆದುಕೊಂಡವರು ನನ್ನ ವಿರುದ್ಧ ಮಾತನಾಡಿದ್ದಾರೆ.

ಹಾಗಾಗಿ ಅವರಿಗೂ ಕೂಡ ಐಟಿ ಇಲಾಖೆ ನೊಟೀಸ್ ನೀಡಬೇಕಲ್ಲವೇ? 50 ಸಾವಿರಕ್ಕೂ ಹೆಚ್ಚಿನ  ಬೆಲೆಯ ಫೋನ್ ಸ್ವೀಕರಿಸಿದವರ ವಿರುದ್ಧ ಏಕೆ ಕ್ರಮ ತೆಗೆದುಕೊಂಡಿಲ್ಲ, ಆದರೆ ನಾನು ವಿಷಯವನ್ನು ದೊಡ್ಡದು ಮಾಡುವುದಿಲ್ಲ, ಆ ಮಟ್ಟಕ್ಕೆ ಇಳಿಯಲು ನನಗೆ ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ, ನನಗೆ ಯಾವ ರೀತಿಯ ಕಿರುಕುಳ ನೀಡಿದ್ದಾರೆ ಎಂಬುದು ನನಗೆ ಗೊತ್ತು. ಸೂಕ್ತವಾದ ವೇದಿಕೆಯಲ್ಲಿ ಎಲ್ಲವನ್ನು ಬಹಿರಂಗ ಪಡಿಸುತ್ತೇನೆ,  ಇದೆಲ್ಲವನ್ನು ಜನರ ಗಮನಕ್ಕೆ ತರತ್ತೇನೆ ಎಂದು ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com