ಶರತ್ ಬಚ್ಚೇಗೌಡ ಕಣದಿಂದ ಹಿಂದೆ ಸರಿಯಲು ಸೂಚಿಸಿ: ಸಿಎಂಗೆ ಎಂಟಿಬಿ ನಾಗರಾಜ್ ಮನವಿ

ನಾವು ಬಿಜೆಪಿ ಸೇರುವುದು ಎಲ್ಲರಿಗೂ ಗೊತ್ತಿದೆ.ಅದು ಈಗಾಗಲೇ‌ ಲೋಕಾರೂಢಿಯಾಗಿ ರುವ ಸತ್ಯ.ಎಚ್.ವಿಶ್ವನಾಥ್ ಸತ್ಯವನ್ನೇ ಹೇಳಿದ್ದಾರೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿಶ್ವನಾಥ್ ಹೇಳಿಕೆ ಯನ್ನು ಸಮರ್ಥಿಸಿಕೊಂಡಿದ್ದಾರೆ.
ಶರತ್ ಬಚ್ಚೇಗೌಡ,  ಎಂಟಿಬಿ ನಾಗರಾಜ್
ಶರತ್ ಬಚ್ಚೇಗೌಡ, ಎಂಟಿಬಿ ನಾಗರಾಜ್

ಬೆಂಗಳೂರು:  ನಾವು ಬಿಜೆಪಿ ಸೇರುವುದು ಎಲ್ಲರಿಗೂ ಗೊತ್ತಿದೆ.ಅದು ಈಗಾಗಲೇ‌ ಲೋಕಾರೂಢಿಯಾಗಿ ರುವ ಸತ್ಯ.ಎಚ್.ವಿಶ್ವನಾಥ್ ಸತ್ಯವನ್ನೇ ಹೇಳಿದ್ದಾರೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿಶ್ವನಾಥ್ ಹೇಳಿಕೆ ಯನ್ನು ಸಮರ್ಥಿಸಿಕೊಂಡಿದ್ದಾರೆ.
  
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರತ್ ಬಚ್ಚೇಗೌಡ ಅವರು ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಪ್ರಚಾರ ಆರಂಭಿಸಿದ್ದಾರೆ.ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಸೂಚಿಸುವಂತೆ ಮುಖ್ಯಮಂತ್ರಿ ಬಳಿ ಎಂಟಿಬಿ ನಾಗರಾಜ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
  
ಹೊಸಕೋಟೆ ಕ್ಷೇತ್ರದಲ್ಲಿ ಶರತ್ ಬಚ್ಚೇಗೌಡ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿಕೊಂಡು ಪ್ರಚಾರ ಆರಂಭಿಸಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಮನೆಮನೆ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಮಾಡಿಕೊಳ್ಳಲಿ ಅದಕ್ಕೂ ನನಗೂ ಸಂಬಂಧ ಇಲ್ಲ. ಅನರ್ಹತೆ ಪ್ರಕರಣದ ನಾನು ಸುಪ್ರೀಂಕೋರ್ಟ್ ತೀರ್ಪು ಬಂದ ಮೇಲೆ ಮುಂದಿನ‌ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
  
ಕಾಂಗ್ರೆಸ್ ಪಕ್ಷದಲ್ಲಿ ಈಗ ಮೂರು ಗುಂಪುಗಳಾಗಿವೆ.ಮೂಲ ಕಾಂಗ್ರೆಸ್ಸಿಗರು, ಸಿದ್ದರಾಮಯ್ಯ ಗುಂಪು ಹಾಗೂ ಪರಮೇಶ್ವರ್ ಗುಂಪು ಇದೆ ಎಂದು ಅನರ್ಹ ಶಾಸಕ ಎಂ.ಟಿಬಿ ನಾಗರಾಜ್ ಅವರು ಲೇವಡಿ ಮಾಡಿದ್ದಾರೆ.
  
ಈ ರೀತಿಯ ಗುಂಪುಗಾರಿಕೆ ಮಾಡಿಯೇ ? ಲೋಕಸಭೆಯಲ್ಲಿ ಒಂದೇ ಒಂದು ಸ್ಥಾನ ಗೆದ್ದಿದ್ದಾರೆ. ಕಾಂಗ್ರೆಸ್ ಒಂದು ಸ್ಥಾನ ಗೆದ್ದಿದ್ದು,ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಬದಲಾಗಿದೆ.ಕಾಂಗ್ರೆಸ್​ನಲ್ಲಿ ನಾಯಕತ್ವ ಬದಲಾಗಿದೆ. ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ಹಾಗೂ ನಾಯಕತ್ವದ ಕೊರತೆ ಇದೆ ಎಂದು ಅವರು ಆರೋಪಿಸಿದರು.
  
ಡಿ.ಕೆ ಶಿವಕುಮಾರ್ ಅವರ ಚುನಾವಣೆ ರಣರಂಗದಲ್ಲಿ ಎಂಟಿಬಿ ನಾಗರಾಜ್ ಅವರನ್ನು ನೋಡಿ ಕೊಳ್ಳುತ್ತೇನೆ ಎಂಬ  ಹೇಳಿಕೆಗೆ ಉತ್ತರಿಸಿದ ಅವರು,ಅವರ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಹಿಂದೆಯೂ ಅದನ್ನೇ ಹೇಳಿದ್ದೆ ಈಗಲೂ ಅದನ್ನೇ ಹೇಳುತ್ತೇನೆ ಎಂದರು.
  
ಅಲ್ಲದೇ ಮತ್ತೆ ಮಧ್ಯಂತರ ಚುನಾವಣೆ ಬರುತ್ತದೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಸಿದ್ದರಾಮಯ್ಯಅವರು ಕನಸು ಕಾಣುತ್ತಿದ್ದಾರೆ.ಇನ್ನೂ 3 ವರ್ಷಗಳ ಕಾಲ ಈ ಸರ್ಕಾರದ ಸುಭದ್ರವಾಗಿರುತ್ತದೆ. ಸರ್ಕಾರವನ್ನು ಏನು ಮಾಡಲು ಆಗುವುದಿಲ್ಲ ಎಂದರು.
  
ಟಿಪ್ಪು ಜಯಂತಿ ಆಚರಣೆ ಬಗ್ಗೆ ಇಬ್ರಾಯಿಂ ಹೇಳಿಕೆಗೆ ತಿರುಗೇಟು ನೀಡಿದ ಅವರು,ಈಗ ಡಿಕೆಶಿ ಕೂಡಾ ಬಂದಿದಾರಲ್ಲ.ಹಾಗಾಗಿ ಇಬ್ರಾಹೀಂ ಹಾಗೆ ಹೇಳಿರಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com