ರಾಜ್ಯದಲ್ಲಿ ತನ್ನದೇ ಬ್ರ್ಯಾಂಡ್ ನಿರ್ಮಾಣಕ್ಕೆ ಕೇಸರಿ ಪಕ್ಷ ಸಿದ್ದತೆ

ತಾನು ಮತಚಲಾಯಿಸುವ ಹಕ್ಕು ಪಡೆಯುವುದಕ್ಕೆ ಇನ್ನೂ ವರ್ಷಗಳಿರುವಾಗಲೇ ಹದಿನೇಳರ ಹರೆಯದ  ಅಹಾನಾ ಈಗಾಗಲೇ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿದ್ದಾರೆ. ಕೇಸರಿ ಪಕ್ಷವು ಕರ್ನಾಟಕದಲ್ಲಿ ಒಟ್ಟಾರೆ  27.77 ಲಕ್ಷ ಸದಸ್ಯರನ್ನು ಹೊಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತಾನು ಮತಚಲಾಯಿಸುವ ಹಕ್ಕು ಪಡೆಯುವುದಕ್ಕೆ ಇನ್ನೂ ವರ್ಷಗಳಿರುವಾಗಲೇ ಹದಿನೇಳರ ಹರೆಯದ  ಅಹಾನಾ ಈಗಾಗಲೇ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿದ್ದಾರೆ. ಕೇಸರಿ ಪಕ್ಷವು ಕರ್ನಾಟಕದಲ್ಲಿ ಒಟ್ಟಾರೆ  27.77 ಲಕ್ಷ ಸದಸ್ಯರನ್ನು ಹೊಂದಿದೆ. ಖಾಸಗಿ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿನಿ ಆಹಾನಾ ಅವರು ಪಕ್ಷದ ಸದಸ್ಯತ್ವ ಪಡೆದದ್ದಕ್ಕೆ ಹೆಮ್ಮೆ ಪಡುತ್ತಾರೆ.ಅಲ್ಲದೆ "ಬಿಜೆಪಿ ಸದಸ್ಯತ್ವ ಅಭಿಯಾನವು ಬಹು ಪಾರದರ್ಶಕವಾಗಿದೆ ಮತ್ತು ಅನುಕೂಲಕರವಾಗಿದೆ, ನೀವು ಅದನ್ನು ತಪ್ಪಿಸಿಕೊಳ್ಳಬಾರದು" ಎಂದು ಹೇಳುತ್ತಾರೆ. ಕಾಲೇಜುಗಳು ಮತ್ತು ವಿಶ್ವವಿದ್ಯಾಲಯ ಕ್ಯಾಂಪಸ್‌ಗಳು ಯಾವಾಗಲೂ ಉದಯೋನ್ಮುಖ ರಾಜಕಾರಣಿಗಳಿಗೆ ವೇದಿಕೆಗಳಾಗಿದೆ ಎಂದು ಹೇಳಲು ಅಡ್ಡಿ ಇಲ್ಲ. ಬಿಜೆಪಿಯ ಅನೇಕ ನಾಯಕರು ಕೂಡ ಕ್ಯಾಂಪಸ್‌ಗಳಿಂದ ಬಂದವರೆಂದು ನಾವಿಲ್ಲಿ ಗಮನಿಸಲುಬಹುದು.

ಆದರೆ ಸದ್ಯಕ್ಕೆ, ಅದು ಕರ್ನಾಟಕದಲ್ಲಿ ಪಕ್ಷವು ಈ ಬಗ್ಗೆ ಗಮನ ಕೇಂದ್ರೀಕರಿಸಿಲ್ಲ. ಏಕೆಂದರೆ ಬಿಜೆಪಿ ದುರ್ಬಲವಾಗಿರುವ ಪ್ರದೇಶಗಳಲ್ಲಿ, ಅದರ ಪ್ರಭಾವವನ್ನು ವಿಸ್ತರಿಸಲು ಮತ್ತು ಕೆಲವು ಪ್ರದೇಶಗಳ ನಾಯಕರು ಮತ್ತು ಸಮುದಾಯಗಳನ್ನು ಮೀರಿ ತಲುಪಲು ಕೆಲಸ ಮಾಡುತ್ತಿದೆ.ನಿಖರವಾಗಿ ಯೋಜಿಸಲಾದತಂತ್ರಗಳನ್ನು ಒಂದೇ ಸಮಯದಲ್ಲಿ ಅನುಸರಿಸಲು ಯೋಜಿಸಿದೆ.ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳ ನೇಮಕ ಮತ್ತು ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೇರಿಸಿರುವುದು ಕೂಡ ಈ ದೊಡ್ಡ ಯೋಜನೆಯ ಭಾಗವಾಗಿದೆ ಎಂದು ಹೇಳಲಾಗುತ್ತದೆ. ಮುಂದಿನ ಕೆಲವು ತಿಂಗಳುಗಳು ಮತ್ತು ವರ್ಷಗಳಲ್ಲಿ ಪಕ್ಷವು ತನ್ನ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಸಾಧ್ಯತೆಯಿರುವ ಪ್ರದೇಶಗಳ ಪಟ್ಟಿಯಲ್ಲಿ ಹಳೆ ಮೈಸೂರು,ಅಗ್ರಸ್ಥಾನದಲ್ಲಿದೆ.ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರೂ ಈ ಭಾಗದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಗಿನ ಹೋರಾಟದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ.

ಪಕ್ಷವು ತನ್ನ ದೌರ್ಬಲ್ಯಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಜೆಡಿಎಸ್-ಕಾಂಗ್ರೆಸ್ ಒಕ್ಕೂಟ ಸೇರಿದಂತೆ ವಿವಿಧ ಅಂಶಗಳು ಹಳೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರ ಅಭ್ಯರ್ಥಿಗಳ ಗೆಲುವು-ಸೋಲಿಗೆ ಹೇಗೆ ಸಹಾಯ ಮಾಡಿದೆ ಎನ್ನುವುದನ್ನು ಪಕ್ಷ ಲೆಕ್ಕ ಹಾಕುತ್ತಿದೆ. ಕರಾವಳಿ ಪ್ರದೇಶ, ಮುಂಬೈ-ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಭಿನ್ನವಾಗಿ, ಅದು ಬಲವಾದ ಕೇಡರ್ ಮತ್ತು ನಾಯಕರನ್ನು ಹೊಂದಿದೆದರಾಬಾದ್-ಕರ್ನಾಟಕ ಪ್ರದೇಶದಲ್ಲಿ,  ಸಹ ಅದು ತನ್ನ ಬೇರನ್ನು ಆಳಕ್ಕೆ ಬಿಟ್ಟುಬಿಡುತ್ತಿದೆ. ಆದರೆ ಹಳೆ ಮೈಸೂರು ಭಾಗ ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಬಲವಾದ ಭದ್ರಕೋಟೆಯಾಗಿ ಉಳಿದಿದೆ."ನಾವು ದುರ್ಬಲವಾಗಿರುವ ಪ್ರದೇಶಗಳ ಮೇಲೆ ನಾವು ಹೆಚ್ಚು ಗಮನ ಹರಿಸುತ್ತಿದ್ದೇವೆ" ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಭಾರತಿ ಮಾಗ್ದುಮ್ ಹೇಳಿದ್ದಾರೆ. ಕಳೆದ ಕೆಲವು ಚುನಾವಣೆಗಳಲ್ಲಿ ತನ್ನ ಅಭ್ಯರ್ಥಿಗಳು ಮತದಾನ ಮಾಡಿದ ಮತಗಳ ಆಧಾರದ ಮೇಲೆ, ಪಕ್ಷವು ಬೂತ್‌ಗಳನ್ನು ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿದೆ, ಬಲದ ಆಧಾರದ ಮೇಲೆ, ಎ ಪ್ರಬಲ ಮತ್ತು ಸಿ ದುರ್ಬಲವಾಗಿದೆ. ಹೆಚ್ಚಿನ ‘ಸಿ ವರ್ಗ’ ಬೂತ್‌ಗಳು ಹಳೆಯ ಮೈಸೂರು ಪ್ರದೇಶದಲ್ಲಿವೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್ಸಿ ಎನ್ ರವಿ ಕುಮಾರ್ ಮಾತನಾಡಿ, ಅವರ ಸದಸ್ಯತ್ವ ಅಭಿಯಾನ ಪಕ್ಷದ ನೆಲೆಯನ್ನು ಬಲಪಡಿಸುವ ನಿರಂತರ ಪ್ರಕ್ರಿಯೆಯಾಗಿದ್ದು, ‘ಸಿ ವರ್ಗ’ ಬೂತ್‌ಗಳತ್ತ ಹೆಚ್ಚಿನ ಗಮನ ಹರಿಸಲಾಗುತ್ತದೆ.ಸದಸ್ಯತ್ವ ಅಭಿಯಾನದ ಸಮಯದಲ್ಲಿ, ಪಕ್ಷವು 50 ಲಕ್ಷ ಸದಸ್ಯರನ್ನು ವೈಯಕ್ತಿಕ ಸಂಪರ್ಕ, ಮಿಸ್ಡ್ ಕಾಲ್ ಸಂಖ್ಯೆಗಳು, ಸಹಾಯವಾಣಿಗಳು ಮತ್ತು  ನಮೋ ಆ್ಯಪ್ ಮೂಲಕ ದಾಖಲಿಸುವ ಗುರಿಯನ್ನು ಹೊಂದಿತ್ತು ಮತ್ತು ಗುರಿ ತಲುಪಲು 24/7 ಸಮರ್ಪಕವಾಗಿ ಕೆಲಸ ಮಾಡಿದ 8,787 ವಿಸ್ತಾರಕರು  27.77 ಲಕ್ಷ ಸದಸ್ಯರನ್ನು ದಾಖಲಿಸಿದ್ದಾರೆ. ಪ್ರತಿ ಬೂತ್‌ನಲ್ಲಿ 100 ಸದಸ್ಯರನ್ನು ದಾಖಲಿಸುವ ಗುರಿ ಹೊಂದಿದೆ. ಈಗ, ಪಕ್ಷವು ಎಲ್ಲಾ ಬೂತ್‌ಗಳಲ್ಲಿ ಇಬ್ಬರು ಸಕ್ರಿಯ ಸದಸ್ಯರನ್ನು ದಾಖಲಿಸಲು ಮುಂದಾಗಿದೆ. ಅವರು ಬೂತ್‌ಗಳಲ್ಲಿ ಪಕ್ಷದ ಪಾಯಿಂಟ್‌ಸ್ಪರ್‌ಸನ್‌ಗಳಾಗಿರುತ್ತಾರೆ, ಪಕ್ಷದ ಸಂದೇಶವನ್ನು ಇತರ ಸದಸ್ಯರು ಮತ್ತು ಮತದಾರರಿಗೆ ಆಯಾ ಬೂತ್‌ಗಳಲ್ಲಿ ತಲುಪಿಸುತ್ತಾರೆ. ರಾಜ್ಯದಲ್ಲಿ ಸದಸ್ಯತ್ವ ಅಭಿಯಾನದ ಜವಾಬ್ದಾರಿ ಹೊತ್ತ ತಂಡದ ಕನ್ವೀನರ್ ಆಗಿರುವ ರವಿ ಕುಮಾರ್ ಅವರು ಸಕ್ರಿಯ ಸದಸ್ಯರಿಗಾಗಿ ಕಾರ್ಯಾಗಾರವನ್ನು ನಡೆಸುವುದಾಗಿ ಹೇಳಿದ್ದಾರೆ.

ಸದಸ್ಯತ್ವ ಅಭಿಯಾನದ ಹೊರತಾಗಿ ಬಿಜೆಪಿ ವಲಯಗಳ ಒಳಗೆ ಮತ್ತು ಹೊರಗೆ ಚರ್ಚೆಯನ್ನು ಹುಟ್ಟುಹಾಕಿದ ಮೂರು ಡಿಸಿಎಂಗಳ ನೇಮಕ, ಮತ್ತು ನಳಿನ್ ಕುಮಾರ್ ಕಟೀಲ್  ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸುವುದು ಸೇರಿದಂತೆ ಇತರ ನಿರ್ಧಾರಗಳ ಸರಣಿಯು ಯೋಜನೆಯ ಭಾಗವಾಗಿದೆ ಎನ್ನಲಾಗುತ್ತಿದೆ.ಕೆಲವು ಸಮುದಾಯಗಳು ಮತ್ತು ನಾಯಕರನ್ನು ಮೀರಿ ಪಕ್ಷವನ್ನು ಕಟ್ಟಲು ಇದು ಅಗತ್ಯ ಎಂದು ಹೇಳಲಾಗಿದೆ. ನಗರ ಮತದಾರರಿಗೆ ಸ್ವೀಕಾರಾರ್ಹವಾದ ಯುವ ನಾಯಕನನ್ನುಆರಿಸುವುದು ಒಂದು ಪ್ರಮುಖ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ. ರೈತರ ಹಿತದೃಷ್ಟಿಯಿಂದ ಹೆಸರುವಾಸಿಯಾಗಿದ್ದ ಮತ್ತು ಪ್ರಬಲವಾದ ಲಿಂಗಾಯತ ಸಮುದಾಯದಿಂದ ಸಾಕಷ್ಟು ಬೆಂಬಲವನ್ನು ಪಡೆದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಯುವ ನಗರ ಮತದಾರರಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಸೀಮಿತ ಪ್ರಸಿದ್ದಿಯನ್ನು ಹೊಂದಿದ್ದಾರೆ.. 2018 ರ ವಿಧಾನಸಭಾ ಚುನಾವಣೆಯಲ್ಲಿ, ಇತರ ಭಾಗಗಳಿಗೆ ಹೋಲಿಸಿದರೆ  ಪಕ್ಷವು ವಿಶೇಷವಾಗಿ ಬೆಂಗಳೂರಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿಲ್ಲ, ಅನೇಕ ರಾಜ್ಯ ಮತ್ತು ಕೇಂದ್ರ ನಾಯಕರ ನೇತೃತ್ವದ ಪ್ರಚಾರದ ಹೊರತಾಗಿಯೂ. ಹೀಗಾಗಲು ಕಾರಣವೇನು ಎಂದು ನಾಯಕರು ವಿಶ್ಲೇಷಿಸುತ್ತಿದ್ದಾರೆ.

ಬಿಎಸ್ ಯಡಿಯೂರಪ್ಪ ಅವರು ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ, ಡಿ.ಸಿ.ಎಂ ಆಗಿ ನೇಮಕಗೊಂಡಿರುವ ಡಾ.ಅಶ್ವಥ್ ನಾರಾಯಣ್ ಅವರನ್ನು ಪಕ್ಷದ ನಗರ ಮುಖ್ಯರನ್ನಾಗಿ ಮಾಡಲಾಗುತ್ತಿದೆ.ಕಂದಾಯ ಸಚಿವ ಆರ್. ಅಶೋಕ್ ಅವರಂತೆಯೇ ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ್ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ. “ಯಡಿಯೂರಪ್ಪ ಜೊತೆಗೆ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಕಟ್ಟಬಲ್ಲ ಯುವ ನಾಯಕರು ನಮಗೆ ಅಗತ್ಯವಿದೆ.ಗೋವಿಂದ ಕಾರಜೋಳ  ಅವರನ್ನು ಹೊರತುಪಡಿಸಿ ಅಶ್ವಥ್ ನಾರಾಯಣಮತ್ತು ಲಕ್ಷ್ಮಣ್ ಸವದಿ (ಬೆಳಗಾವಿಯ ಲಿಂಗಾಯತ ನಾಯಕ) ಅವರನ್ನು ಡಿ.ಸಿ.ಎಂಗಳಾಗಿ ನೇಮಿಸಲು ಪಕ್ಷ ನಿರ್ಧರಿಸಿದ ಕಾರಣ ಇದಾಗಿರಬಹುದು" ಪಕ್ಷದ ಮುಖಂಡರೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com