ಗಣೇಶ ಮೂರ್ತಿ,ಸೀರೆ ಹಂಚಿದರೂ ಡಾ. ಸುಧಾಕರ್ ಉಪ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ- ವೀರಪ್ಪ ಮೊಯ್ಲಿ

ಅನರ್ಹ ಶಾಸಕ ಡಾ. ಎಂ. ಸುಧಾಕರ್ ಜನರಿಗೆ ಗಣೇಶ ಮೂತ್ರಿ, ಸೀರೆಗಳನ್ನು ಹಂಚಿದರೂ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.

Published: 02nd September 2019 07:28 PM  |   Last Updated: 02nd September 2019 07:28 PM   |  A+A-


MoilySudhakar

ಸಂಗ್ರಹ ಚಿತ್ರ

Posted By : Nagaraja AB
Source : UNI

ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ. ಎಂ. ಸುಧಾಕರ್ ಜನರಿಗೆ ಗಣೇಶ ಮೂತ್ರಿ, ಸೀರೆಗಳನ್ನು ಹಂಚಿದರೂ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಮಾಜಿ ಸಂಸದ ಎಂ. ವೀರಪ್ಪ ಮೊಯ್ಲಿ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇದೆ.ಅಮೃತ ಕುಡಿದವರನ್ನೇ ಉಳಿಸುವುದಕ್ಕೆ ಸಾಧ್ಯವಿಲ್ಲ ಇನ್ನು ವಿಷ ಕುಡಿದವರು ಬದುಕುಳಿಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿ ಜೊತೆ ಹೋದ ಶಾಸಕರ ಇಂದಿನ ಪರಿಸ್ಥಿತಿ ಹೀಗಿದ್ದು, ರಾಜ್ಯ ಬಿಜೆಪಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.

ಅನರ್ಹ ಶಾಸಕರು ಸುಪ್ರೀಂಕೋರ್ಟ್  ಕದ ತಟ್ಟಿದ್ದಾರೆ. ಆದರೆ, ನ್ಯಾಯಾಲಯದ ತೀರ್ಪು ತಕ್ಷಣಕ್ಕೆ ನೀಡದಿದ್ದರೆ ಅನರ್ಹ ಶಾಸಕರು ಅನರ್ಹರಾಗಿಯೇ ಉಳಿಯಲಿದ್ದಾರೆ ತೀರ್ಪಿಗೆ ಮೊದಲೇ ಚುನಾವಣೆ ನಡೆದರೆ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಮತದಾರರಿಗೆ ಸುಧಾಕರ್ ಏನೇ ಆಮಿಷಗಳು ನೀಡಿದರೂ ಕ್ಷೇತ್ರದ ಜನತೆ ಅವರಿಗೆ ತಕ್ಕ ಪಾಠವನ್ನಂತೂ ಕಲಿಸಲಿದ್ದಾರೆ ಎಂದು ಸುಧಾಕರ್ ಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Stay up to date on all the latest ರಾಜಕೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp