ಇಡಿ ಬಂಧನದಿಂದ ಡಿಕೆ ಶಿವಕುಮಾರ್ ರಾಜಕೀಯ ಬದುಕು ಮುಗಿಯಿತೇ? ಇಲ್ಲಿದೆ ವಿಶ್ಲೇಷಣೆ

ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಪ್ರಭಾವಿ ನಾಯಕ ಡಿ ಕೆ ಶಿವಕುಮಾರ್ ಬಂಧನದ ಮೂಲಕ ಹಲವು ಪ್ರಕ್ರಿಯೆಗಳು ಮುನ್ನಲೆಗೆ ಬಂದಿವೆ. 
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ನ ಪ್ರಭಾವಿ ನಾಯಕ ಡಿ ಕೆ ಶಿವಕುಮಾರ್ ಬಂಧನದ ಮೂಲಕ ಹಲವು ಪ್ರಕ್ರಿಯೆಗಳು ಮುನ್ನಲೆಗೆ ಬಂದಿವೆ.

ಅದು ವಶಪಡಿಸಿಕೊಂಡಿರುವ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವುದು, ರಾಜಕೀಯದಲ್ಲಿ ನಿರ್ದಿಷ್ಟ ಜನಾಂಗವನ್ನು ಬಲಪಡಿಸುವುದು ಮತ್ತು ಹೊಸ ಅಧಿಕಾರ ಕೇಂದ್ರಗಳನ್ನು ಸ್ಥಾಪಿಸುವುದಾಗಿದೆ.

ಡಿ ಕೆ ಶಿವಕುಮಾರ್ ವಿಚಾರದಲ್ಲಿ ತಿರಸ್ಕಾರ ಮತ್ತು ಪ್ರೀತಿ ಎರಡೂ ಸಂಗತಿಗಳಿವೆ. ಸ್ಥಳೀಯ ಮಟ್ಟದಲ್ಲಿ ಅವರು ಪ್ರಭಾವಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಮೇಲಿನ ಆರೋಪಗಳು ಮತ್ತು ಬೆಳಗಾವಿಯಲ್ಲಿ ಜಾರಕಿಹೊಳಿ ಸೋದರರ ರಾಜಕೀಯದಲ್ಲಿ ಡಿ ಕೆ ಶಿವಕುಮಾರ್ ಮೂಗು ತೂರಿಸಿದ್ದರಿಂದ ಅವರಿಗೆ ಪಕ್ಷದೊಳಗೆಯೇ ತಿರಸ್ಕಾರವುಂಟಾಗಿದೆ.

ಇನ್ನೊಂದೆಡೆ ಪಕ್ಷದಲ್ಲಿ ಅವರ ತಂತ್ರಗಾರಿಕೆ, ರಾಜಕೀಯ ವಿರೋಧಿಗಳನ್ನು ಎದುರಿಸುವ ರೀತಿ, ದಕ್ಷಿಣ ಕರ್ನಾಟಕ ಭಾಗದಲ್ಲಿ ಹೆಚ್ ಡಿ ದೇವೇಗೌಡರು ಒಕ್ಕಲಿಗ ಸಮುದಾಯದ ಮೇಲೆ ಹೊಂದಿದ್ದ ಪ್ರಾಬಲ್ಯವನ್ನು ತನ್ನತ್ತ ಸೆಳೆದುಕೊಂಡಿದ್ದು ನಿಜಕ್ಕೂ ಡಿ ಕೆ ಶಿವಕುಮಾರ್ ಅವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿ.

ಡಿಕೆಶಿ ಎಂದು ಸಂಕ್ಷಿಪ್ತವಾಗಿಯೇ ಜನರಿಂದ ಕರೆಸಿಕೊಳ್ಳುವ ಕನಕಪುರದ ಕೆಂಪೇಗೌಡರ ಮಗ, ಕನಕಪುರ ಬಂಡೆ ಎಂದು ಕರೆಯಲ್ಪಡುವ  ಡಿ ಕೆ ಶಿವಕುಮಾರ್ ರಾಜಕೀಯಕ್ಕೆ ಪ್ರವೇಶ ಪಡೆದಿದ್ದು ಕರ್ನಾಟಕದಲ್ಲಿ ದೇವರಾಜು ಅರಸ್ ಅವರ ರಾಜಕೀಯ ಪ್ರಾಬಲ್ಯ ಕಡಿಮೆಯಾಗುತ್ತಾ ಬಂದಂತಹ ಸಂದರ್ಭದಲ್ಲಿ, ಅದು 1970ರ ಉತ್ತರ ಭಾಗದಲ್ಲಿ. ಜನತಾ ಪಕ್ಷ ಮತ್ತು ಬಿಜೆಪಿ ರಾಜ್ಯದಲ್ಲಿ ಆಗ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತಿತ್ತು. ಈ ಸಮಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ ಒಂದು ಗುಂಪು ದೇವರಾಜ್ ಅರಸ್ ಅವರ ಕಡೆಗೆ ಹೋಯಿತು. ಡಿ ಕೆ ಶಿವಕುಮಾರ್ ಕಾಂಗ್ರೆಸ್ ಯುವ ಸಂಘಟನೆ ಸೇರಿದರು.

1989ರಲ್ಲಿ ದೇವೇಗೌಡರನ್ನು ಚುನಾವಣೆಯಲ್ಲಿ ಸೋಲಿಸಿದಾಗ ಡಿಕೆಶಿ ರಾಜಕೀಯ ಬದುಕಿನ ಚಿತ್ರಣವೇ ಬದಲಾಯಿತು. ನಂತರ ಅವರ ಪುತ್ರ ಅವರ ಇಂದಿನ ನೆಚ್ಚಿನ ಗೆಳೆಯ ಹೆಚ್ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿಯನ್ನು ಕೂಡ ಚುನಾವಣೆಯಲ್ಲಿ ಸೋಲಿಸಿದ್ದರು. ಅಲ್ಲಿಂದ ಕಳೆದ ವರ್ಷ ಗುಜರಾತ್ ನ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ರೆಸಾರ್ಟ್ ನಲ್ಲಿ ತಂದಿರಿಸುವವರೆಗೂ ಪಕ್ಷದಲ್ಲಿ ಸುದೀರ್ಘ ಪಯಣ ಮಾಡಿದ್ದಾರೆ. ಈ ಮಧ್ಯೆ ಹಲವು ಅವಕಾಶಗಳು-ಅದೃಷ್ಟಗಳು ಅವರಿಗೆ ಸಿಕ್ಕಿವೆ, ಅನೇಕ ಕೇಸುಗಳು ಮತ್ತು ಆರೋಪಗಳನ್ನು ಮೈಮೇಲೆ ಎಳೆದುಹಾಕಿಕೊಂಡಿದ್ದಾರೆ.

ಹಿಂದಿನ ಮೈತ್ರಿ ಸರ್ಕಾರದಲ್ಲಿ ದೇವೇಗೌಡ ಕುಟುಂಬದ ವಿರುದ್ಧ ತೀವ್ರ ವಿರೋಧವಿದ್ದರೂ ಅವನ್ನೆಲ್ಲಾ ಬದಿಗೊತ್ತಿ ಮೈತ್ರಿ ಸರ್ಕಾರ ರಚನೆಯಲ್ಲಿ ಡಿಕೆಶಿಯದ್ದೇ ಬಹುಮುಖ್ಯ ಪಾಲು ಎಂಬುದರಲ್ಲಿ ಸಂಶಯವಿಲ್ಲ. ಇದು ಅವರ ಬಂಧನದ ಮೂಲಕವೂ ಕಾಣುತ್ತದೆ. ಇಡಿ ಅವರನ್ನು ಬಂಧಿಸಿದ ನಂತರ ಕುಮಾರಸ್ವಾಮಿ, ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಅವರ ಬೆಂಬಲಕ್ಕೆ ನಿಂತಿದೆ.

ಡಿಕೆ ಶಿವಕುಮಾರ್ ಬಂಧನ ಅವರ ರಾಜಕೀಯ ಮಹಾತ್ವಾಕಾಂಕ್ಷೆಗಳಿಗೆ ಹಿನ್ನಡೆಯಾಗಿರಬಹುದು, ಆದರೆ ಅವರ ರಾಜಕೀಯ ಬದುಕು ಮುಗಿದುಹೋಯಿತು ಎನ್ನುವಂತಿಲ್ಲ. ಇಂದು ಅಸ್ತಿತ್ವಕ್ಕೆ ಹಾತೊರೆಯುತ್ತಿರುವ ಕಾಂಗ್ರೆಸ್ ಗೆ ಶಿವಕುಮಾರ್ ಬಂಧನ ಅಸ್ತಿತ್ವದ ಕೊರತೆಯಿಂದ ಮೇಲೆ ಬರಲು ಒಂದು ಅವಕಾಶ ಸಿಕ್ಕಿದೆ. ಇಡಿ ತನಿಖೆಯಿಂದ ಕ್ಲೀನ್ ಚಿಟ್ ಸಿಕ್ಕಿ ಹೊರಬಂದರೆ ಶಿವಕುಮಾರ್ ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಪ್ರಭಾವಿ ಮುಖಂಡನಾಗಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com