ಸಸಿಕಾಂತ್ ಸೆಂಥಿಲ್ ವಿರುದ್ಧ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ: ಸಂಸದನ ಬೆನ್ನಿಗೆ ನಿಂತ ಬಿಜೆಪಿ

ತಮ್ಮ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ದ ಸಂಸದ ಅನಂತ್ ಕುಮಾರ್ ಹೆಗಡೆ ಮಾಡಿರುವ ಟ್ವೀಟ್ ಅನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.
ತೇಜಸ್ವಿನಿ ಮತ್ತು ಅನಂತ್ ಕುಮಾರ್ ಹೆಗಡೆ
ತೇಜಸ್ವಿನಿ ಮತ್ತು ಅನಂತ್ ಕುಮಾರ್ ಹೆಗಡೆ

ಬೆಂಗಳೂರು: ತಮ್ಮ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ವಿರುದ್ದ ಸಂಸದ ಅನಂತ್ ಕುಮಾರ್ ಹೆಗಡೆ ಮಾಡಿರುವ ಟ್ವೀಟ್ ಅನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಮಾಜಿ ಸಂಸದೆ ಹಾಗೂ ಬಿಜೆಪಿ ವಕ್ತಾರೆ ತೇಜಸ್ವಿನಿ ರಮೇಶ್, ಅನಂತ್ ಕುಮಾರ್ ಹೆಗಡೆ ಅವರ್ ಟ್ವೀಟ್ ನ ಒಂದೊಂದು ಪದಗಳನ್ನು ಪ್ರತ್ಯೇಕವಾಗಿ ಅರ್ಥೈಸುವ ಅವಶ್ಯಕತೆಯಿಲ್ಲ, ಪ್ರತಿ ಪದದ ಅರ್ಥ ಭಾಷಾಂತರಿಸಿ ವಿವಾದ ಸೃಷ್ಟಿಸಬಾರದು. ಟ್ವೀಟ್ ನ ಹಿಂದಿರುವ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸಸಿಕುಮಾರ್ ಸೆಂಥಿಲ್ ಪೂರ್ವಾಗ್ರಹ ಪೀಡಿತರಾಗಿ ಕೆಲಸ ಮಾಡುತ್ತಿದ್ದರು. ಸಂವಿಧಾನಕ್ಕೆ ವಿರೋಧವಾಗಿ ಕೆಲಸ ಮಾಡುತ್ತಿದ್ದರು, ಹೀಗಾಗಿ ಹೆಗಡೆ ಟ್ವೀಟ್ ಮಾಡಿದ್ದರು.ಈ ಜನಗಳಿಗೆ ದೇಶಭಕ್ತಿ ಎಂಬುದು ಇಲ್ಲದಿದ್ದರೇ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ, ಸಸಿಕಾಂತ್ ಸೆಂಥಿಲ್ ಅವರ ಪತ್ರಿಕಾ ಹೇಳಿಕೆಯ ತುಣುಕನ್ನು ಟ್ವೀಟ್ ಮಾಡಿದ್ದ ಹೆಗ್ಡೆ, ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು. ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ನಿಯತ್ತು ತೋರಿಸಲಿ ಎಂದು ಹೇಳಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com