4 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನ: ಒಂದೇ ವೇದಿಕೆಯಲ್ಲಿ ಮಾಡಿ ಸಿಎಂ-ಹಾಲಿ ಡಿಸಿಎಂ ಜಟಾಪಟಿ!

ಇನ್ನು ನಾಲ್ಕು ತಿಂಗಳು ಮಾತ್ರ ಈಗಿನ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇರುತ್ತದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರುವಾಗ ನಾನು ಖುಷಿಯಿಂದ ಬಂದೆ. ಅಧಿಕಾರ ಉಳಿಸಿಕೊಳ್ಳಬೇಕು ಅಂದಿದ್ದರೆ ನನಗೆ ಅದ್ಯಾವ ಲೆಕ್ಕವೂ ಆಗಿರಲಿಲ್ಲ"
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ತುಮಕೂರು: ಇನ್ನು ನಾಲ್ಕು ತಿಂಗಳು ಮಾತ್ರ ಈಗಿನ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇರುತ್ತದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರುವಾಗ ನಾನು ಖುಷಿಯಿಂದ ಬಂದೆ. ಅಧಿಕಾರ ಉಳಿಸಿಕೊಳ್ಳಬೇಕು ಅಂದಿದ್ದರೆ ನನಗೆ ಅದ್ಯಾವ ಲೆಕ್ಕವೂ ಆಗಿರಲಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ

ತುಮಕೂರಿನ  ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಪಾಪದ ಹಣ ಸಂಗ್ರಹ ಮಾಡಿ, 20-30 ಕೋಟಿ ರುಪಾಯಿ ನೀಡಿದ್ದರೆ ಸರ್ಕಾರ ಉಳಿಸಬಹುದಿತ್ತು. ಅದರ ಅವಶ್ಯಕತೆ ಇಲ್ಲ. ನನಗೆ ದೇವರು ಹಾಗೂ ನೀವು ಕೊಟ್ಟ ಅಧಿಕಾರ ಇದೆ ಎಂದು ವೇದಿಕೆಯಲ್ಲೇ ಇದ್ದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಗೆ ಟಾಂಗ್ ಕೊಟ್ಟರು "ಕಾಂಗ್ರೆಸ್ ನಲ್ಲಿರುವ ಉತ್ತಮ ನಾಯಕ, ಮಹಾನ್ ರಾಜಕಾರಣಿ ಡಿಕೆಶಿ" ಮುಖ್ಯಮಂತ್ರಿ ಸ್ಥಾನದಿಂದ ಇಳಿದು ಬರುವಾಗ ಆರೂವರೆ ಸಾವಿರ ಕೋಟಿ ರುಪಾಯಿ ಖಜಾನೆಯಲ್ಲಿಟ್ಟಿದ್ದೆ ಎಂದು ಹೇಳಿದ್ದಾರೆ.

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮಾತನಾಡಿ, ಒಬ್ಬ ನಾಯಕ ಯಾವುದಕ್ಕಾಗಿ ಇರುತ್ತಾನೆ ಎಂಬುದು ಮುಖ್ಯವಾದ ವಿಚಾರ‌. ನಾಯಕ ಆದವನು ಎಲ್ಲವನ್ನೂ ತ್ಯಾಗ ಮಾಡಬೇಕು. ಸರ್ವಸ್ವವನ್ನೂ ತ್ಯಾಗ ಮಾಡಿದಾಗ ಮಾತ್ರ ಜತೆಗೆ ಇರುವವರು ಅವರ ಬೆಂಬಲವನ್ನು ನಮಗೆ ಕೊಡುತ್ತಾರೆ ಎನ್ನುವ ಮೂಲಕ ಪರೋಕ್ಷವಾಗಿ ಅತೃಪ್ತರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದರು. 

ಒಬ್ಬ ನಾಯಕ ಮೈ ಮರೆಯುವ ಕೆಲಸ ಮಾಡಬಾರದು. ಸಮಾಜಕ್ಕಾಗಿ ಬದುಕಿದರೆ ಮಾತ್ರ ಉತ್ತಮ ನಾಯಕನಾಗಿ ಇರಲು ಸಾಧ್ಯ. ನಾನು ಈ ಸ್ಥಾನದಲ್ಲಿ ಇರುವುದು ಜನರಿಗೆ ಒಳ್ಳೆಯದು ಮಾಡುವುದಕ್ಕೆ ಎಂದರು. ಈ ವೇಳೆ ಎಚ್. ಡಿ. ಕುಮಾರಸ್ವಾಮಿ ಅವರ ಪರವಾಗಿ ಬೆಂಬಲಿಗರು ಘೋಷಣೆ ಕೂಗಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com