ರಾಜಕಾರಣದಲ್ಲಿ ಜಾತಿ ಗುರಾಣಿಯಾದರೆ ವೈಷಮ್ಯಕ್ಕೆ ದಾರಿ: ನವರಸನಾಯಕ ಜಗ್ಗೇಶ್

ಬೆಂಗಳೂರು: ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಮೂಲಕ ಕೇಂದ್ರ ಬಿಜೆಪಿ ಸರ್ಕಾರವು ಒಕ್ಕಲಿಗರ ಮುಖಂಡ ಕನಕಪುರ ಶಾಸಕ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದೆ ಎಂದು ಆರೋಪಿಸಿ ರಾಜ್ಯ ರಾಜಧಾನಿಯಲ್ಲಿಂದು ಪ್ರತಿಭಟನೆಯ ಕೂಗೂ ಕೇಳಿಬಂದಿದೆ

Published: 11th September 2019 07:09 PM  |   Last Updated: 11th September 2019 07:13 PM   |  A+A-


ಜಗ್ಗೇಶ್

Posted By : Raghavendra Adiga
Source : UNI

ಬೆಂಗಳೂರು ಬೆಂಗಳೂರು: ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಸಿಬಿಐ ಮೂಲಕ ಕೇಂದ್ರ ಬಿಜೆಪಿ ಸರ್ಕಾರವು ಒಕ್ಕಲಿಗರ ಮುಖಂಡ ಕನಕಪುರ ಶಾಸಕ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದೆ ಎಂದು ಆರೋಪಿಸಿ ರಾಜ್ಯ ರಾಜಧಾನಿಯಲ್ಲಿಂದು ಪ್ರತಿಭಟನೆಯ ಕೂಗೂ ಕೇಳಿಬಂದಿದೆ ಇದೇ ವೇಳೆ ರಾಜಕಾರಣಕ್ಕೆ ಜಾತಿ ಗುರಾಣಿ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂದು ನಟ, ರಾಜಕಾರಣಿ ಜಗ್ಗೇಶ್ ಮನವಿ ಟ್ವೀಟ್ ಮಾಡಿದ್ದಾರೆ

“ದೇಶದ ಸಂವಿಧಾನ ಕಾನೂನು! ಜಾತಿ ಧರ್ಮ ಮತ ಪಂಥ ಜನಾಂಗ ಬಡವ ಬಲ್ಲಿದನ ಮಿರಿದ್ದು! ಸತ್ಯಕ್ಕೆಜಯ!ಅಸತ್ಯಕ್ಕೆ ಅಪಜಯ! ಸಿದ್ಧಾಂತ! ನಾವು ನಮ್ಮಸತ್ಯ ಅಸತ್ಯ ನಿರೂಪಿಸಬೇಕು!ಜಾತಿಗಳನ್ನು ಗುರಾಣಿಯಾಗಿ ಬಳಸಬಾರದು! ರಾಜಕೀಯಕ್ಕಾಗಿ ಜಾತಿ ಗುರಾಣಿ ಬಳಸಿದರೆ ಸತ್ಯ ಗೆಲ್ಲದು!ಬದಲಿಗೆ ಜಾತಿ ವೈಷಮ್ಯಕ್ಕೆ ದಾರಿಯಾದೀತು” ಎಂದು ಹೇಳಿದ್ದಾರೆ

ಸರಣಿ ಟ್ವೀಟ್ ನಲ್ಲಿ “ಮುಂದೊಂದು ದಿನ ಇಂದಿನ ಜಾತಿ ವ್ಯವಸ್ಥೆ ತೊಲಗಿ ಹೊಸ ಜಾತಿಹುಟ್ಟುವುದು ಅದು ಬಡವನ ಕೈಹಿಡಿದು ಎತ್ತುವ ಶ್ರೇಷ್ಠ ಮನುಷ್ಯ ಜಾತಿ! ನನ್ನ ಪ್ರಕಾರ ಇರುವುದು ಎರಡೇ ಜಾತಿ ಗಂಡು ಹೆಣ್ಣು,  ಬಡವ ಬಲ್ಲಿದ! ಎಂದು ಈ ಎರಡು ಜಾತಿಗೆ ಸಮಾನತೆ ಸಿಗುತ್ತದೆ ಆಗ ನಮ್ಮ ಭಾರತ ಶ್ರೀಮಂತ ರಾಷ್ಟ್ರ ಆಗುತ್ತದೆ!ಆ ದಿನಗಳಿಗಾಗಿ ಆಶಾಭಾವನೆಯಿಂದ ಕಾಯುವೆ”: ಎಂದಿದ್ದಾರೆ
  
ಒಕ್ಕಲಿಗರ ಕುರಿತಾದ ಇತಿಹಾಸವನ್ನು ಎಷ್ಟು ಜನ ಓದಿದ್ದೀರಿ, ನಿಮ್ಮ ಓಕ್ಕಲುತನ ಯಾವಾಗ ಉದಯವಾಯಿತು ಎಂದು ಅರಿತಿರುವಿರಿ! ತಿಳಿಯದಿದ್ದರೆ ಮಾಹಿತಿಗಾಗಿ ಓದಿ  ಗಂಗಟಿಗಾರ ಓಕ್ಕಲಿಗರು ಗಂಗರಸರ ವಂಶದವರು ಎಂದು ಟ್ವೀಟ್ ಮಾಡಿದ್ದು,  ಈ ಕುರಿತಾದ ಮಾಹಿತಿಯ ತುಣುಕನ್ನು ಶೇರ್ ಮಾಡಿದ್ದಾರೆ.

 

 

 

 

Stay up to date on all the latest ರಾಜಕೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp