ಐಟಿ-ಇಡಿ ತನಿಖೆಯಿಂದ ತಪ್ಪಿಸಿಕೊಳ್ಳಲು ರಮೇಶ್ ಜಾರಕಿಹೊಳಿಯಿಂದ ಸಮ್ಮಿಶ್ರ ಸರ್ಕಾರ ಪತನ!

ಬಿಜೆಪಿಯಲ್ಲಿ ಹಲವು ಮಂದಿ ಇಡಿ ಕೈಗೆ ಸಿಕ್ಕಿಕೊಂಡಿದ್ದಾರೆ, ಆದರೆ ಅವರ ವಿರುದ್ಧ ಯಾವ ತನಿಖೆಯಿಲ್ಲ, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮನೆ ಮೇಲೆ ಕೆಲವು ತಿಂಗಳ ಹಿಂದೆ ಐಟಿ ದಾಳಿ ನಡೆದಿತ್ತು,
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಳಗಾವಿ: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ರಾಜಕೀಯ ಧ್ವೇಷದಿಂದ ಕೂಡಿದ್ದಾಗಿದೆ ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ಬಿಜೆಪಿಯಲ್ಲಿ ಹಲವು ಮಂದಿ ಇಡಿ ಕೈಗೆ ಸಿಕ್ಕಿಕೊಂಡಿದ್ದಾರೆ, ಆದರೆ ಅವರ ವಿರುದ್ಧ ಯಾವ ತನಿಖೆಯಿಲ್ಲ, ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮನೆ ಮೇಲೆ ಕೆಲವು ತಿಂಗಳ ಹಿಂದೆ ಐಟಿ ದಾಳಿ ನಡೆದಿತ್ತು, ಅದಾದ ನಂತರ ಅವರು ತರಾತುರಿಯಲ್ಲಿ ಬಿಜೆಪಿಗೆ ಹಾರಿದರು, ಅದಾದ ನಂತರ ಇಡಿ ಕೈಗೆ ಸಿಕ್ಕಿ ಹಾಕಿಕೊಳ್ಳಬಹುದು ಎಂಬ ಭಯದಿಂದ ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರ ಉರುಳಿಸಿದರು ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ. 

ಬಿಜೆಪಿಗೆ ಸೇರುವಂತೆ ಸಿವಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು,  ಆದರೆ ಅವರು ನಿರಾಕರಿಸಿದರು, ಹೀಗಾಗಿ ಅವರನ್ನು ಬಂಧಿಸಲಾಗಿದೆ,  ಕಾಂಗ್ರೆಸ್ ನ ಹಲವು ನಾಯಕರ ವಿರುದ್ಧ ಇದೇ ರೀತಿಯ ಪ್ರಕರಣಗಳು ದಾಖಲಾಗಿದ್ದವು, ಆದರೆ ಅವರು ಬಿಜೆಪಿ ಸೇರಿದ ಕಾರಣ ಅವರ ವಿರುದ್ಧದ ಕೇಸ್ ಗಳನ್ನು ಮುಚ್ಚಿ ಹಾಕಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರ ಯಾವತ್ತೂ ಜನರ ಒಳಿತಿಗಾಗಿ ಕೆಲಸ ಮಾಡಿಲ್ಲ, ಪ್ರವಾಹ ಪೀಡಿತ ಜನರಿಗೆ ,ಸರಿಯಾದ ರೀತಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ದೂರಿದ್ದಾರೆ,.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com