ದರೋಡೆ ಮಾಡೋದಕ್ಕೆ ಡಿಕೆಶಿಗೆ ನಾವು ಹೇಳಿದ್ವಾ? ದರೋಡೆ ಮಾಡಿ ಸಾರ್ವಜನಿಕವಾಗಿ ಹಂಚುತ್ತಿದ್ದಾರಾ? ಇದಕ್ಕೆ ನಾನು ಹೊಣೆನಾ? 

ಮಾಜಿ ಸಚಿವ ಡಿಕೆ ಶಿವಕುಮಾರ್ ಪರ ಹೋರಾಟದ ಸಭೆಗೆ ಹೋಗಲಿಲ್ಲ ಎಂದು ದೂಷಣೆ ಮಾಡುತ್ತಿದ್ದಾರೆ. ಡಿಕೆಶಿಗೆ ದರೋಡೆ ಮಾಡೋದಕ್ಕೆ ನಾವು ಹೇಳಿದ್ವಾ. ದರೋಡೆ ಮಾಡಿ ಸಾರ್ವಜನಿಕವಾಗಿ ಹಂಚುತ್ತಿದ್ದಾರಾ..? ಇದಕ್ಕೆಲ್ಲ ನಾನು ಹೊಣೆಯೇ..?
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಮಂಡ್ಯ: ಮಾಜಿ ಸಚಿವ ಡಿಕೆ ಶಿವಕುಮಾರ್ ಪರ ಹೋರಾಟದ ಸಭೆಗೆ ಹೋಗಲಿಲ್ಲ ಎಂದು ದೂಷಣೆ ಮಾಡುತ್ತಿದ್ದಾರೆ. ಡಿಕೆಶಿಗೆ ದರೋಡೆ ಮಾಡೋದಕ್ಕೆ ನಾವು ಹೇಳಿದ್ವಾ. ದರೋಡೆ ಮಾಡಿ ಸಾರ್ವಜನಿಕವಾಗಿ ಹಂಚುತ್ತಿದ್ದಾರಾ..? ಇದಕ್ಕೆಲ್ಲ ನಾನು ಹೊಣೆಯೇ..? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮೈಸೂರಿನ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಸಿಎಂ ಪಟ್ಟ ಉಳಿಸಲು ಡಿಕೆಶಿ ಎಲ್ಲರನ್ನೂ ಹೆದುರು ಹಾಕಿಕೊಂಡರು, ಇವತ್ತು ಡಿಕೆಶಿ ಜೊತೆಯಲ್ಲಿ ಕುಮಾರಸ್ವಾಮಿ ನಿಲ್ಲಲಿಲ್ಲ , ಕುಮಾರಸ್ವಾಮಿ ಅವರಿಗೆ ಇಂತ ಕಷ್ಟ ಬಂದಿದ್ದರೇ ಡಿಕೆಶಿ ಸ್ಟೇಷನ್ ಹತ್ತಿರನೇ ಕೂರುತ್ತಿದರು, ಆದರೆ ಡಿಕೆಶಿಗೆ ಮಾನಸಿಕವಾಗಿ ಧೈರ್ಯ ತುಂಬುತಿತ್ತು, ಒಕ್ಕಲಿಗ ಸಂಘಟನೆಗಳಿಂದ ನಡೆದ ಹೋರಾಟಕ್ಕೂ ಸಪೋರ್ಟ್ ಮಾಡಲಿಲ್ಲ, ಅದನ್ನು ಬಿಟ್ಟು ಚನ್ನಪಟ್ಟಣದಲ್ಲಿ ಕಾರ್ಯಕ್ರಮ ಹಾಕಿಕೊಂಡರು ಎಂದು ಕಿಡಿಕಾರಿದರು.

ಡಿ.ಕೆ.ಶಿವಕುಮಾರ್ ಮಾಡಬಾರದ ಅಪರಾಧ ಮಾಡಿಲ್ಲ, ಬಿಜೆಪಿ ಜೊತೆ ಜೆಡಿಎಸ್ ಹೊಂದಾಣಿಕೆಗೆ ಮಾಡಿಕೊಳ್ಳಲು ಡಿಕೆಶಿ ಬಿಡಲಿಲ್ಲ, ಕಾಂಗ್ರೆಸ್ ರಕ್ಷಣೆ ಮಾಡಿಕೊಳ್ಳಲು ನಿಂತಿದ್ದರು, ಈ ಸಿಟ್ಟು ಡಿಕೆಶಿ ಮೇಲೆ ಬಿಜೆಪಿ ನಾಯಕರಿಗೆ ಇತ್ತು ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

ಹಿಂದೆ ದೇವೇಗೌಡರು ಕುಟುಂಬಕ್ಕೂ ಡಿಕೆಶಿಗೂ ವೈಮನಸ್ಸಿತ್ತು,  ಹೀಗೆ ಇಲ್ಲದೆಲ್ಲ ಚರ್ಚೆ ನಡೆಯುತ್ತಿದೆ. ಒಂದಲ್ಲೊಂದು ದಿನ ಸತ್ಯ ಹೊರಗಡೆ ಬರುತ್ತೆ ಎಂದು ಜಾಣ್ಮೆಯಿಂದಲೇ, ಪರೋಕ್ಷವಾಗಿ ಡಿಕೆಶಿ ಬಂಧನಕ್ಕೆ ದೇವೇಗೌಡ ಕುಟುಂಬ ಕಾರಣ ಎಂದು ಆರೋಪಿಸಿದ್ದಾರೆ.

ಮಾಜಿ ಸಚಿವ ಜಿ.ಟಿ.ದೇವೇಗೌಡರು ಜೆಡಿಎಸ್​ನಿಂದ ಅಂತರ ಕಾಯ್ದುಕೊಂಡಿದ್ದಾರೆ. ಶ್ರೀನಿವಾಸ್ ಕೂಡ ಸಿಡಿದೆದ್ದು ಹಲವು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಜೆಡಿಎಸ್ ವರಿಷ್ಠರಿಗೆ ಯಾರೇ ಹೋದರು, ಬಂದರು ತಲೆಕೆಡಿಸಿಕೊಳ್ಳಲ್ಲ ಎಂದು ಚೆಲುವರಾಯಸ್ವಾಮಿ ತಿಳಿಸಿದರು.

ಈ ರೀತಿಯ ಗಂಭೀರ ಆರೋಪ ಮಾಡಿ ಜಾರಿಕೊಂಡ ಚಲುವರಾಯಸ್ವಾಮಿ ಇದರ ಬಗ್ಗೆ ಸತ್ಯ ನನಗೆ ಗೊತ್ತಿಲ್ಲ. ಸತ್ಯಗೊತ್ತಿಲ್ಲದೆ ನಾನು ಮಾತನಾಡೋದು ತಪ್ಪು, ಈ ವಿಚಾರವನ್ನು ಯಾರೋ ಹೇಳ್ತಿದ್ದಾರೆಂದು  ಹಾರಿಕೆ ಉತ್ತರ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com