'ಎಚ್.ಡಿ ದೇವೇಗೌಡ ಮತ್ತು ಕುಮಾರಸ್ವಾಮಿಗೆ ದೇಹವೆಲ್ಲಾ ಬಂಗಾರ, ಕಿವಿ ಮಾತ್ರ ಹಿತ್ತಾಳೆ'

ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ದೇಹವೆಲ್ಲಾ ಬಂಗಾರ, ಕಿವಿ ಮಾತ್ರ ಹಿತ್ತಾಳೆ, ಹೀಗಾಗಿ ಯಾರು ಏನು ಚಾಡಿ ಹೇಳಿದರೂ ಕೇಳಿ ಬಿಡುತ್ತಾರೆ

Published: 21st September 2019 01:30 PM  |   Last Updated: 21st September 2019 01:30 PM   |  A+A-


HD Devegowda And Kumaraswamy

ಎಚ್.ಡಿ ದೇವೇಗೌಡ ಮತ್ತು ಕುಮಾರಸ್ವಾಮಿ

Posted By : shilpa
Source : Online Desk

ಮಂಡ್ಯ: ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ದೇಹವೆಲ್ಲಾ ಬಂಗಾರ, ಕಿವಿ ಮಾತ್ರ ಹಿತ್ತಾಳೆ, ಹೀಗಾಗಿ ಯಾರು ಏನು ಚಾಡಿ ಹೇಳಿದರೂ ಕೇಳಿ ಬಿಡುತ್ತಾರೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ನಾಗಮಂಗಲದಲ್ಲಿ ಮಾತನಾಡಿದ ಅವರು, ಕೆಲ ಭಟ್ಟಂಗಿಗಳು ಕುಮಾರಸ್ವಾಮಿಗೆ ನನ್ನ ಬಗ್ಗೆ ಚಾಡಿ ಚುಚ್ಚಿದ್ದಾರೆ ಎಂದು ಕಿಡಿಕಾರಿದರು.ಜೆಡಿಎಸ್ ಮತ್ತು ನನ್ನ ಸಂಬಂಧ ಚೆನ್ನಾಗಿದೆ. 20 ವರ್ಷದಿಂದ ಅಧಿಕಾರ ಇಲ್ಲದ ನನ್ನನ್ನು ಜೆಡಿಎಸ್ ಪಕ್ಷ ಸಂಸದನನ್ನಾಗಿ ಮಾಡಿದೆ. ಕುಮಾರಸ್ವಾಮಿ ನಮ್ಮ ನಾಯಕ. ಏಕವಚನದಲ್ಲಿ ಮಾತನಾಡೋ ರೈಟ್ಸ್  ಇದೆ ಮಾತನಾಡಲಿ ಬಿಡಿ ಎಂದರು.

ನಿಖಿಲ್ ಕುಮಾರಸ್ವಾಮಿ ಸೋಲಿಗೆ ಮಂಡ್ಯ ಜೆಡಿಎಸ್ ಮುಖಂಡರು ಕಾರಣರಲ್ಲ. ಜಿಲ್ಲೆಯ ಜನ ಸ್ವಾಭಿಮಾನಕ್ಕೆ ಮತಕೊಡಬೇಕೆಂದು ಕೊಟ್ಟಿದ್ದಾರೆ. ಜೆಡಿಎಸ್ ವರಿಷ್ಠರ ಮೇಲೆ ಗೌರವವಿದೆ. ದೇವೇಗೌಡರು ಹಲವು ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ. ನನ್ನ ಮುಂದೆ ಯಾವುದೇ ಅವಕಾಶ ಇಲ್ಲ. ನಾನು ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.
 


Stay up to date on all the latest ರಾಜಕೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp