ನಾಳೆಯೇ ಬಿಬಿಎಂಪಿ ಮೇಯರ್ ಚುನಾವಣೆ: ಈ ಬಾರಿ ಮ್ಯಾಜಿಕ್ ಮಾಡುತ್ತಾ ಬಿಜೆಪಿ?

ನಗರದ ಮೇಯರ್, ಉಪಮೇಯರ್ ಹುದ್ದೆಗೆ ಮಂಗಳವಾರ ನಡೆಯಲಿರುವ ಚುನಾವಣೆಗೆ 198 ಪಾಲಿಕೆ ಸದಸ್ಯರು, 5 ಸಂಸದರು, 9 ರಾಜ್ಯಸಭಾ ಸದಸ್ಯರು, 23 ಶಾಸಕರು ಮತ್ತು 22 ವಿಧಾನಪರಿಷತ್ ಸದಸ್ಯರು ಸೇರಿದಂತೆ 257 ಜನರು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಮೇಯರ್, ಉಪಮೇಯರ್ ಹುದ್ದೆಗೆ ಮಂಗಳವಾರ ನಡೆಯಲಿರುವ ಚುನಾವಣೆಗೆ 198 ಪಾಲಿಕೆ ಸದಸ್ಯರು, 5 ಸಂಸದರು, 9 ರಾಜ್ಯಸಭಾ ಸದಸ್ಯರು, 23 ಶಾಸಕರು ಮತ್ತು 22 ವಿಧಾನಪರಿಷತ್ ಸದಸ್ಯರು ಸೇರಿದಂತೆ 257 ಜನರು ಮತದಾನದ ಹಕ್ಕು ಪಡೆದಿದ್ದಾರೆ. ಇದರಲ್ಲಿ  129 ಮತಗಳಿಂದ ಬಹುಮತ ಗಳಿಸಿದ ಪಕ್ಷದ ಸದಸ್ಯರು ಮೇಯರ್ ಸ್ಥಾನಕ್ಕೆ ಆಯ್ಕೆಯಾಗುತ್ತಾರೆ.
  
ಇದರಲ್ಲಿ 101 ಬಿಜೆಪಿ,  76 ಕಾಂಗ್ರೆಸ್ , 14 ಜೆಡಿಎಸ್ ಹಾಗೂ 7 ಪಾಲಿಕೆ ಸದಸ್ಯರಿದ್ದಾರೆ. 5 ಸಂಸದರ ಪೈಕಿ ನಾಲ್ವರು ಬಿಜೆಪಿ ಪಕ್ಷದವರಾಗಿದ್ದು, ರಾಜ್ಯಸಭಾ ಸದಸ್ಯರ ಪೈಕಿ ಆರು ಕಾಂಗ್ರೆಸ್, ಒಬ್ಬರು ಜೆಡಿಎಸ್ ಹಾಗೂ ನಾಲ್ವರು ಬಿಜೆಪಿ ಪಕ್ಷದವರಾಗಿದ್ದಾರೆ. 23 ಶಾಸಕರ ಪೈಕಿ 11 ಕಾಂಗ್ರೆಸ್ ಹಾಗೂ 11  ಬಿಜೆಪಿ ಮತಗಳಿವೆ. ವಿಧಾನಪರಿಷತ್ ಪೈಕಿ 7 ಮತ ಬಿಜೆಪಿ, 5 ಜೆಡಿಎಸ್ ಹಾಗೂ 10 ಕಾಂಗ್ರೆಸ್ ಮತಗಳಿವೆ. ಈ ಮತಗಳನ್ನು ತಾಳೆ ಹಾಕಿದರೆ ಬಿಜೆಪಿ ಪರ 125, ಜೆಡಿಎಸ್ 21, ಕಾಂಗ್ರೆಸ್ 104 ಹಾಗೂ 7 ಪಕ್ಷೇತರ ಮತಗಳಿದ್ದು, ಬಿಜೆಪಿಗೆ ಸುಲಭ ಜಯ ಸಿಗುವ ಸಾಧ್ಯತೆಯಿದೆ. 
  
ಕಾಂಗ್ರೆಸ್ ಸಂಸದರಾದ ಡಿ.ಕೆ.ಸುರೇಶ್, ಬಚ್ಚೇಗೌಡ, ತೇಜಸ್ವಿ ಸೂರ್ಯ, ಸದಾನಂದಗೌಡ, ಪಿ.ಸಿಮೋಹನ್ ಕಾಂಗ್ರೆಸ್ ನ ರಾಜೀವ್ ಗೌಡ ಎಂ.ವಿ, ಬಿ.ಕೆ.ಹರಿಪ್ರಸಾದ್, ಕೆ.ಸಿ.ರಾಮಮೂರ್ತಿ, ಜಯರಾಮ್ ರಮೇಶ್, ಜಿ.ಸಿ.ಚಂದ್ರಶೇಖರ್, ಡಾ.ಎಲ್. ಹನುಮಂತಯ್ಯ, ಜೆಡಿಎಸ್ ನ ಡಿ.ಕುಪೇಂದ್ರ ರೆಡ್ಡಿ ಹಾಗೂ ಬಿಜೆಪಿಯ ರಾಜೀವ್ ಚಂದ್ರಶೇಖರ್, ನಿರ್ಮಲಾ ಸೀತಾರಾಮನ್ ಮೇಯರ್ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. 
  
ಶಾಸಕರಾದ ಎಸ್. ಆರ್.ವಿಶ್ವನಾಥ್, ವಿ.ಸೋಮಣ್ಣ, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಎಸ್. ರಘು, ಎಸ್. ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ರವಿ ಸುಬ್ರಹ್ಮಣ್ಯ, ಆರ್. ಅಶೋಕ್, ಸತೀಶ್ ರೆಡ್ಡಿ ಎಂ, ಎಂ. ಕೃಷ್ಣಪ್ಪ, ಉದಯ್ ಗರುಡಾಚಾರ್ , ಕೃಷ್ಣ ಭೈರೇಗೌಡ, ಮುನಿರತ್ನ, ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಎನ್.ಎ. ಹ್ಯಾರಿಸ್, ಎಂ. ಕೃಷ್ಣಪ್ಪ, ರಾಮಲಿಂಗಾ ರೆಡ್ಡಿ, ಸೌಮ್ಯ ರೆಡ್ಡಿ, ಬಿ.ಎಸ್.ಸುರೇಶ್, ಬಿ.ಶಿವಣ್ಣ, ಜಮೀರ್ ಅಹಮದ್ ಖಾನ್, ಆರ್. ಮಂಜುನಾಥ್ ಮತದಾನದ ಹಕ್ಕು ಪಡೆದಿದ್ದಾರೆ. 
  
ವಿಧಾನಪರಿಷತ್ ಸದಸ್ಯರಾದ ಡಾ.ತೇಜಸ್ವಿನಿ ಗೌಡ, ವೈ.ಎ.ನಾರಾಯಣಸ್ವಾಮಿ, ಎ.ದೇವೇಗೌಡ, ಲಹರ್ ಸಿಂಗ್ ಸಿರೋಯಾ, ಡಿ.ಯು.ಮಲ್ಲಿಕಾರ್ಜುನ, ಕೆ.ಪಿ.ನಂಜುಂಡಿ ವಿಶ್ವಕರ್ಮ, ರವಿಕುಮಾರ್ , ಡಾ.ಜಯಮಾಲಾ ರಾಮಚಂದ್ರ, ರಿಜ್ಞಾನ್ ಅರ್ಷದ್, ಎಚ್.ಎಂ.ರೇವಣ್ಣ, ಸಿ.ರಘು ಆಚಾರ್, ಎಂ. ನಾರಾಯಣಸ್ವಾಮಿ, ಕೆ.ಗೋವಿಂದರಾಜು, ಪಿ.ಆರ್.ರಮೇಶ್, ಎಂ.ಸಿ.ವೇಣುಗೋಪಾಲ್, ಯು.ಬಿ.ವೆಂಕಟೇಶ್, ನಜೀರ್ ಅಹಮದ್, ಟಿ.ಎ.ಶರವಣ, ಸಿ.ಆರ್.ಮನೋಹರ್, ಪುಟ್ಟಣ್ಣ, ಕೆ.ವಿ.ನಾರಾಯಣಸ್ವಾಮಿ, ರಮೇಶ್ ಗೌಡ ಮತ ಚಲಾಯಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com