ಕಾಂಗ್ರೆಸ್ ಉಳಿಸಲು ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸರಿ ದಾರಿಯಲ್ಲಿ ನಡೆಯಬೇಕು: ಮುನಿಯಪ್ಪ

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ತಮ್ಮ ಹೋಗುತ್ತಿರುವ ಹಾದಿಯನ್ನು ಸರಿ ಪಡಿಸಿಕೊಳ್ಳಬೇಕು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಇಲ್ಲದಿದ್ದರೇ  ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಮಕಾಡೆ ಮಲಗುತ್ತದೆ ಎಂದು
ಕೆ.ಎಚ್ ಮುನಿಯಪ್ಪ
ಕೆ.ಎಚ್ ಮುನಿಯಪ್ಪ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ತಮ್ಮ ಹೋಗುತ್ತಿರುವ ಹಾದಿಯನ್ನು ಸರಿ ಪಡಿಸಿಕೊಳ್ಳಬೇಕು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯಬೇಕು ಇಲ್ಲದಿದ್ದರೇ  ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಮಕಾಡೆ ಮಲಗುತ್ತದೆ ಎಂದು , ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ದಗೆ ನೀಡಿರುವ ಸಂದರ್ಶನದಲ್ಲಿ ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.

ಪ್ರ: ಪ್ರಸ್ತುತ ಕಾಂಗ್ರೆಸ್ ಪಕ್ಷ ಇರುವ ಪರಿಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಕಾಂಗ್ರೆಸ್ ಪಕ್ಷ ಶೋಚನೀಯ ಪರಿಸ್ಥಿತಿಯಲ್ಲಿದೆ, ಪಕ್ಷವನ್ನು ಮತ್ತೊಮ್ಮೆ ಕಟ್ಟಲು ನಾವು ಒಗ್ಗಟ್ಟಾಗಿ ಹೋಗಬೇಕು,  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಸಿಎಲ್ ಪಿ ಮುಖಂಡ ಸಿದ್ದರಾಮಯ್ಯ ಮತ್ತ ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಅವರ ಮೇಲಿದೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಏಕೆ ಪಕ್ಷದ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ ಎಂಬುದು ತಿಳಿದಿಲ್ಲ.

ಪ್ರ: ಪಕ್ಷದ ಬಗ್ಗೆ ನಿಮಗಿರುವ ಕಾಳಜಿ ಏನು?
2019ರ ಲೋಕಸಭೆ ಚುನಾವಣೆ ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಪ್ರಯತ್ನ ನಡೆದಿಲ್ಲ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದಾರೆ, ಅವರು ತಮ್ಮ ಜವಬ್ದಾರಿ ಅರಿತುಕೊಂಡು ದೊಡ್ಡ ನಿರ್ಧಾರ ಮಾಡಿದ್ದಾರೆ, ಆದರೆ ಉಳಿದ ನಾಯಕರು ಮಾಡಿದ್ದೇನು? ಯಾರ ನಾಯಕತ್ವದಲ್ಲಿ ರಾಜ್ಯದಲ್ಲಿ 2018ರ ಚುನಾವಣೆ ನಡೆಯಿತು,  ಅದಕ್ಕೆ ಯಾರು ಹೊಣೆ? ನಾವೆಲ್ಲರೂ ಒಟ್ಟಿಗೆ ಪಕ್ಷ ಮುನ್ನಡೆಸುವಂತೆ ಹೈಕಮಾಂಡ್ ಸೂಚಿಸಿದ, 15 ಶಾಸಕರು ಪಕ್ಷ ತೊರೆದಿದ್ದಾರೆ, ಇದಕ್ಕೆ ಕಾರಣವೇನು, ಇವರಲ್ಲಿ ಬಹುತೇಕರು ಸಿದ್ದರಾಮಯ್ಯ ಆಪ್ತರು,  ಅವರು ತಮ್ಮ ಸ್ವಂತ ಸಾಮರ್ಥ್ಯದಿಂದ ಚುನಾವಣೆ  ಗೆದ್ದಿರುವವರು, ಅವರನ್ನು ವಾಪಸ್ ಕರೆದುಕೊಂಡು ಬರುವ ಪ್ರಯತ್ನ ಮಾಡಲಿಲ್ಲ ಏಕೆ? ಕುಮಾರಸ್ವಾಮಿ ಅವರೊಂದಿಗಿದ್ದ ಭಿನ್ನಾಭಿಪ್ರಾಯವನ್ನು ಏಕೆ ಸರಿ ಮಾಡಿಕೊಳ್ಳಲಿಲ್ಲ?

ಪ್ರ: ಕಳೆದ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಸೋಲಿಗೆ ಕಾರಣರಾದವರು ವಿರುದ್ದ ಕ್ರಮ ಕೈಗೊಂಡಿಲ್ಲ ಏಕೆ?

ನನ್ನ ಸೋಲಿಗೆ ಕಾರಣರಾದ ಶಾಸಕರನ್ನು ಪಕ್ಷದಿಂದ ಹೊರಹಾಕುವುದಾಗಿ ಸಿದ್ದರಾಮಯ್ಯ ಹೇಳಿದ್ದರು, ಅವರಿಗೆ ಎಚ್ಚರಿಕೆ ನೀಡಬೇಕಿತ್ತು, ಇಲ್ಲ ರಾಜಿನಾಮೆ ಕೇಳಬೇಕಿತ್ತು, ನನ್ನನ್ನು ರಕ್ಷಿಸಲು ಅವರು ಯಾವುದೇ ಕ್ರಮ ಕೈಗೊಂಡಿಲ್ಲ, ನಾನು ಇದನ್ನು ಪ್ರಶ್ನಿಸುತ್ತಲೇ ಬಂದಿದ್ದೇನೆ, ಪಕ್ಷದ ವಿರುದ್ದ ಮಾತನಾಡಿದ್ದಕ್ಕೆ ರೋಷನ್ ಬೇಗ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ,ಆದರೆ ರಮೇಶ್ ಕುಮಾರ್ ವಿರುದ್ದ ಮಾತ್ರ ಏಕೆ ಕ್ರಮ ಕೈಗೊಂಡಿಲ್ಲ.

ಪ್ರ: ನೀವು ಈ ರೀತಿಯ ಪ್ರಶ್ನೆ ಕೇಳಿದಾಗ ಕೆ,ಸಿ ವೇಣುಗೋಪಾಲ್ ಅವರ ಪ್ರತಿಕ್ರಿಯೆ ಹೇಗಿತ್ತು?
 ಪಕ್ಷದ ಶಿಸ್ತು ಸಮಿತಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದ್ದರು. ನನ್ನ ಪ್ರಶ್ನೆ ಏನಂದರೇ ಪಕ್ಷದ ವಿರುದ್ಧ ಮಾತನಾಡಿದ್ದಕ್ಕೆ ರೋಷನ್ ಬೇಗ್ ಅವರನ್ನು ಉಚ್ಚಾಟಿಸಲಾಯಿತು,ಆದರೆ ನನ್ನನ್ನು ಸೋಲಿಸಿದವರು ಬಿಜೆಪಿಯವರಲ್ಲ, ಕಾಂಗ್ರೆಸ್ಸಿಗರು, ಈ ಬಗ್ಗೆ ಪ್ರಶ್ನಿಸಿದರೇ ಸಿದ್ದರಾಮಯ್ಯ ಕೋಪಗೊಳ್ಳುತ್ತಾರೆ,

ಪ್ರ: ಸಿಎಲ್ ಪಿ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಲು ಬೇಡಿಕೆ  ಇಟ್ಟಿದ್ದೀರಾ?

ಸದ್ಯದ ಪರಿಸ್ಥಿತಿಯಲ್ಲಿ ಬದಲಾವಣೆ ಸಾಧ್ಯವಿಲ್ಲ, ಉಪ ಚುನಾವಣೆ ಸಮೀಪಿಸುತ್ತಿರುವುದರಿಂದ ಹೈ ಕಮಾಂಡ್ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕಷ್ಟ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com