ಕೋವಿಡ್ ಪರಿಶೀಲನಾ ಸಭೆಯಲ್ಲಿ ಹಾಲಿ, ಮಾಜಿ ಸಚಿವರ ನಡುವೆ ಮಾತಿನ ಚಕಮಕಿ

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ದೇಶಾದ್ಯಂತ ವ್ಯಾಪಿಸಿರುವ ಕೊರೋನಾವೈರಸ್ ಹಾವಳಿಯ ಕುರಿತು ರಿಶೀಲನಾ ಸಭೆಯಲ್ಲಿ ಹಾಲಿ ಹಾಗೂ ಮಾಜಿ ಸಚಿವರು ಪರಸ್ಪರರು ವಾಗ್ವಾದ ನಡೆಸಿದ್ದಾರೆ.
ಜೆಸಿ ಮಾಧುಸ್ವಾಮಿ ಎಚ್.ಡಿ.ರೆವಣ್ಣ
ಜೆಸಿ ಮಾಧುಸ್ವಾಮಿ ಎಚ್.ಡಿ.ರೆವಣ್ಣ

ಹಾಸನ: ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ನಡುವೆ ಮಾತಿನ ಚಕಮಕಿ ನಡೆದಿದೆ. ದೇಶಾದ್ಯಂತ ವ್ಯಾಪಿಸಿರುವ ಕೊರೋನಾವೈರಸ್ ಹಾವಳಿಯ ಕುರಿತು ರಿಶೀಲನಾ ಸಭೆಯಲ್ಲಿ ಹಾಲಿ ಹಾಗೂ ಮಾಜಿ ಸಚಿವರು ಪರಸ್ಪರರು ವಾಗ್ವಾದ ನಡೆಸಿದ್ದಾರೆ.

ಕೊರೋನಾವೈರಸ್ ಹರಡುವಿಕೆ ಸಂಬಂಧ ಈ ಸಭೆಯನ್ನು ವಿಶೇಷ ಸಭೆಯನ್ನಾಗಿ ಕರೆಯಲಾಗಿತ್ತು.ಹಾಗಾಗಿ ಇಲ್ಲಿ ಇತರೆ ವಿಚಾರಗಳು ಚರ್ಚೆಗೆ ಅವಕಾಶವಿರಲಿಲ್ಲ. ಆದರೆ ಹಾಗೆಂದು ಸಚಿವ ಮಾಧುಸ್ವಾಮಿ ಹೇಳಲಾಗಿ  ಇದನ್ನು ವಿರೋಧಿಸಿದ ಮಾಜಿ ಸಚಿವ ರೇವಣ್ಣ ಎದ್ದುನಿಂತು ಇತರ ವಿಷಯಗಳ ಬಗ್ಗೆ ಚರ್ಚಿಸಲು ಸಚಿವರು ಅನುಮತಿ ನೀಡದಿದ್ದರೆ ಸಭೆಯನ್ನು ಬಹಿಷ್ಕರಿಸುವುದಾಗಿ ಹೇಳಿದರು. ಆದರೆ ಇದಾಗಿ ಕೆಲ ಕ್ಷಣಗಳಲ್ಲಿ ರೇವಣ್ಣ ತಮ್ಮ ನಿರ್ಧಾರದಿಂದ ಹಿಂದೆ ಸರಿದು ಸಭೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ.

ಇದಕ್ಕೆ ಮುನ್ನ ರೋಗಿಗಳಿಗೆ ಖಾಸಗಿ ಆಸ್ಪತ್ರೆಯನ್ನು ಸೇರಲು ಹೇಳಿದ ಕಾರಣದಿಂದ ಸರ್ಕಾರಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ  ಮಧುಸ್ವಾಮಿ ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಅವರಿಗೆ ನಿರ್ದೇಶನ ನೀಡಿದರು.ಅಲ್ಲದೆ 108 ಆಂಬುಲೆನ್ಸ್ ಚಾಲಕರು ರೋಗಿಗಳನ್ನು ಬಲವಂತದಿಂದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾದರೆ ಅಂತಹವರ ವಿರುದ್ಧ  ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಬೇಕು ಎಂದು ನಿರ್ದೇಶಿಸಿದ್ದರು.

ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ತಾಲ್ಲೂಕು ಆಸ್ಪತ್ರೆಗಳಿಗೆ ವೆಂಟಿಲೇಟರ್‌ಗ ಗಾಗಿ ಬೇಡಿಕೆ ಇಟ್ಟಿದ್ದಾರೆ. ಪಿಡಿಎಸ್ ವ್ಯವಸ್ಥೆಗೆ ಹೆಚ್ಚುವರಿ ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ  ಒತ್ತಾಯಿಸಿದರು

ಹಾಸನ ಶಾಸಕ ಪ್ರೀತಂ  ಜೆ ಗೌಡ  ಅವರ ಅನುಯಾಯಿಗೆ ಸೇರಿದ್ದ ರಿದ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಮದ್ಯ ಮಾರಾಟ ಮಾಡಿದ್ದಾರೆ ಎಂಬ ಆರೋಪದ ಮೇಲೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು  ಹಾಸನ ಶಾಸಕ ಪ್ರೀತಂ ಗೌಡ ನಡುವೆ ತೀವ್ರ ಮಾತುಕತೆ ನಡೆದಿದೆ. ಈ ವಿಷಯವನ್ನು ಎತ್ತಿದ ಸಂಸದರು ಬಾರ್‌ನ ಮಾಲೀಕರ ವಿರುದ್ಧ ಸಚಿವರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸಂಸದರು ತಮ್ಮ ಹೆಸರನ್ನು ಈ ವಿಷಯಕ್ಕೆ ಎಳೆದ ವಿಚಾರವಾಗಿಕೋಪಗೊಂಡ ಪ್ರೀತಮ್ ಗೌಡ ಅಬಕಾರಿ ಅಧಿಕಾರಿಗಳು ಎಲ್ಲಾ 360 ಪರವಾನಗಿ ಪಡೆದ ಮದ್ಯದಂಗಡಿಗಳು ಮತ್ತು ಬಾರ್ / ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಬೇಕು ಮತ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು. ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ರಾಜ್ ಸಿಂಗ್ ಅವರು  ಸಚಿವರ ನಡುವಿನ ಈ ಮಾತಿನ ಸಮರದ ನಡುವೆ ಮೂಕ ಪ್ರೇಕ್ಷಕರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com