ಜಿಎಸ್‌ಟಿ ಪಾಲು ಕೊಡದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ತಾಕತ್ತು ಬಿಜೆಪಿ ಸಂಸದರು, ಸಚಿವರಿಗೆ ಇಲ್ಲವೇ: ಪ್ರಿಯಾಂಕ ಖರ್ಗೆ

ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಪಾಲನ್ನು ಪಡೆದುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಈ ಬಗ್ಗೆ ತುಟಿಕ್ ಪಿಟಿಟ್ ಎನ್ನದೇ, ರಾಜ್ಯದ ಮುಖ್ಯಮಂತ್ರಿ, ಸಚಿವರು ಜನರಿಗೆ ಮೋಸ ಮಾಡುತ್ತಿದ್ದಾರೆ.

Published: 01st August 2020 07:02 PM  |   Last Updated: 01st August 2020 07:02 PM   |  A+A-


Priyank Kharge

ಪ್ರಿಯಾಂಕ್ ಖರ್ಗೆ

Posted By : Vishwanath S
Source : UNI

ಬೆಂಗಳೂರು: ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಪಾಲನ್ನು ಪಡೆದುಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಈ ಬಗ್ಗೆ ತುಟಿಕ್ ಪಿಟಿಟ್ ಎನ್ನದೇ, ರಾಜ್ಯದ ಮುಖ್ಯಮಂತ್ರಿ, ಸಚಿವರು ಜನರಿಗೆ ಮೋಸ ಮಾಡುತ್ತಿದ್ದಾರೆ.ನಮಗೆ ಸಲ್ಲಬೇಕಾದ ಹಣ ನೀಡದೇ, ರಾಜ್ಯವನ್ನ ಬೀದಿಯಲ್ಲಿ ಬಿಡುವುದೇ ಪ್ರಧಾನಿಯವರು ಹೇಳಿದ ಆತ್ಮನಿರ್ಭರತೆಯಾ? ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಪ್ರಶ್ನಿಸಿದ್ದಾರೆ.

ಟ್ವೀಟರ್ ನಲ್ಲಿ ತಮ್ಮ ಆಕ್ರೋಷ ವ್ಯಕ್ತಪಡಿಸಿರುವ ಅವರು, ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಇಂತಹ ಸಂದರ್ಭದಲ್ಲ ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್ ಟಿ ಪರಿಹಾರದ ಹಣವನ್ನು ನೀಡಲು ಹಿಂದೇಟು ಹಾಕಿದೆ. 15ನೇ ಹಣಕಾಸು ಆಯೋಗ ದಿಂದ ರಾಜ್ಯಕ್ಕೆ 9000 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಆರ್ಥಿಕ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳೂ ಸಹ ಬಜೆಟ್‌ನಲ್ಲಿ ಉಲ್ಲೇಖ ಮಾಡಿದ್ದರು. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಈ ವಿಚಾರ ವಾಗಿ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಯಾರೊಬ್ಬರಿಗೂ ಇಲ್ಲವೇ? ತಮ್ಮ ಸ್ಥಾನಮಾನ ಉಳಿಸಿಕೊಳ್ಳಲು “ದೆಹಲಿ ಪೆರೇಡ್” ಮಾಡುವ ಬಿಜೆಪಿ ನಾಯಕರು, ಅವರಿಗೆ ರಾಜ್ಯದ ಹಕ್ಕಿಗಾಗಿ ಹೋರಾಡೋಕೆ ಪುರಸೊತ್ತಿಲ್ವಾ? ಎಂದು ಕಟು ಶಬ್ದಗಳನ್ನು ಬಿಜೆಪಿ ಸಂಸದರು, ಸರ್ಕಾರದ ಸಚಿವರನ್ನು ಪ್ರಶ್ನಿಸಿದ್ದಾರೆ.

ಕೊರೋನಾದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದರ ನಡುವೆ ಕೇಂದ್ರ ಸರ್ಕಾರವು -GST ಪರಿಹಾರದ 2 ಕಂತನ್ನು ರಾಜ್ಯಕ್ಕೆ ನೀಡಲು ಸಾಧ್ಯವಿಲ್ಲ ಎಂದಿದೆ. 15 ನೇ ಹಣಕಾಸು ಆಯೋಗದಿಂದ ರಾಜ್ಯದ ತೆರಿಗೆ ಪಾಲಿನಲ್ಲಿ 9,000 ಕೋಟಿ ರೂ. ಖೋತಾ‌ ಮಾಡಿದೆ. ತನ್ನ ಪ್ರಾಯೋಜಿತ ರಾಜ್ಯ ಯೋಜನೆಗಳಿಗೂ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಪ್ರಿಯಾಂಕ ಖರ್ಗೆ ಗುಡುಗಿದ್ದಾರೆ.

Stay up to date on all the latest ರಾಜಕೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp