ಹೂಬ್ಲೋಟ್ ವಾಚ್ ವಿಚಾರ ಪುನರ್ ಪ್ರಸ್ತಾಪಿಸಿದ ಬಿಜೆಪಿ ವಿರುದ್ಧ ಸಿದ್ದು ತೀವ್ರ ಕಿಡಿ

ಹೂಬ್ಲೋಟ್ ವಾಚ್ ವಿವಾದ ವಿಚಾರವನ್ನು ಪುನರ್ ಪ್ರಸ್ತಾಪಿಸಿದ ಬಿಜೆಪಿ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ಕಿಡಿಕಾರಿದ್ದಾರೆ. 
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಹೂಬ್ಲೋಟ್ ವಾಚ್ ವಿವಾದ ವಿಚಾರವನ್ನು ಪುನರ್ ಪ್ರಸ್ತಾಪಿಸಿದ ಬಿಜೆಪಿ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರ ಕಿಡಿಕಾರಿದ್ದಾರೆ. 

ಹೂಬ್ಲೋಟ್ ವಾಚ್ ವಿವಾದ ಮುಗಿದು ಹೋದ ಕಥೆ ಮತ್ಯಾಕೆ ಅದು? ನಾನು ಯಡಿಯೂರಪ್ಪ ಹಳೇ ಕೇಸ್ ಬಗ್ಗೆ ಮಾತನಾಡಲೇ? ನಾನು ಸರ್ಕಾರಕ್ಕೆ ಆ ವಾಚನ್ನು ವಾಪಸ್ ಕೊಟ್ಟಿದ್ದೇನೆ. ಎಸಿಬಿ ತನಿಖೆಯಾಗಿ ಕ್ಲೀನ್ ಚಿಟ್ ಸಿಕ್ಕಿದೆ. ಇದು ಜನರನ್ನು ದಾರಿ ತಪ್ಪಿಸುವ ಕೆಲಸ. ನಾನು ವಾಚ್ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.

ಜೈಲಿಗೆ ಹೋಗಿ ಬಂದ ಡಿಕೆಶಿ ಪಕ್ಕದಲ್ಲಿ ಸಿದ್ದರಾಮಯ್ಯ ಕುಳಿತಿದ್ದಾರೆಂಬ ಬಿಜೆಪಿ ನಾಯಕರ ಹೇಳಿಕೆಗೆ ಗರಂ ಆದ ಸಿದ್ದರಾಮಯ್ಯ ಅವರು, ಇವರಿಗೇನು ಬಹಣ ನೈತಿಕತೆ ಇದೆಯೇ? ನಾನೀಗ ಅದರ ಬಗ್ಗೆ ಮಾತನಾಡೋಲ್ಲ. ಅದು ರಾಜಕೀಯ ದುರುದ್ದೇಶದಿಂದ ಹಾಕಿರುವ ಕೇಸ್. ಈ ಸಂದರ್ಭದಲ್ಲಿ ಅದರ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ. 

ಸರ್ಕಾರದ ಮೇಲೆ ಕೋವಿಡ್ ಚಿಕಿತ್ಸೆ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಡಿರುವ ಆರೋಪಕ್ಕೆ, ನೋಟಿಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನೋಟಿಸ್ ಬಂಡವಾಳ ಏನ್ ನನಗೆ ಗೊತ್ತಿಲ್ಲಾ? ನಾನು ಒಬ್ಬ ಲಾಯರ್ ತಾನೆ? ನಾನೇನು ನೋಟಿಸ್'ಗೆ ಹೆದರಿಕೊಳ್ಳುತ್ತೇನಾ? ಅವನ್ಯಾರೋ ನೋಟಿಸ್ ಕೊಟ್ಟಿದ್ದಾನೆ. ನಾನು ಆರೋಪ ಮಾಡಿರೋದು ರಾಜ್ಯ ಸರ್ಕಾರದ ಮೇಲೆ. ಸರ್ಕಾರದ ವತಿಯಿಂದ ಸಿಎಂ ಇಲ್ಲವೇ ಮುಖ್ಯ ಕಾರ್ಯದರ್ಶಿ ನೋಟಿಸ್ ನೀಡಬೇಕಿತ್ತು. ಆದರೆ, ಎಂಎಲ್'ಸಿ ರವಿಕುಮಾರ್ ಅವರಿಂದ ನೋಟಿಸ್ ಕೊಡಿಸಿದ್ದಾರೆ. ಸರ್ಕಾರದ ಬದಲು ಪಕ್ಷ ಹೇಗೆ ನೋಟಿಸ್ ಕೊಡಲು ಸಾಧ್ಯ. ಯಾರೋ ನೋಟಿಸ್ ಕೊಟ್ಟರೆ ಏನು ಪ್ರಯೋಜನ ಎಂದು ಕಿಡಿಕಾರಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com