ಕಾಂಗ್ರೆಸ್ ಹಿಂದೂತ್ವವನ್ನು ಒಪ್ಪಿಕೊಳ್ಳಬೇಕು: ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನಾ

ಶತಮಾನಗಳಷ್ಟು ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಮರಳಿ ತನ್ನ ಜನಪ್ರಿಯತೆಯನ್ನು ಪಡೆಯಲು ಹಿಂದೂತ್ವವನ್ನು ಒಪ್ಪಿಕೊಳ್ಳಬೇಕು, ಬದಲಾವಣೆಯನ್ನು ನಾವು ಸ್ವೀಕರಿಸಬೇಕಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಆರ್ ಧರ್ಮಸೇನಾ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಶತಮಾನಗಳಷ್ಟು ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಮರಳಿ ತನ್ನ ಜನಪ್ರಿಯತೆಯನ್ನು ಪಡೆಯಲು ಹಿಂದೂತ್ವವನ್ನು ಒಪ್ಪಿಕೊಳ್ಳಬೇಕು, ಬದಲಾವಣೆಯನ್ನು ನಾವು ಕೂಡಾ ಸ್ವೀಕರಿಸಬೇಕಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಆರ್ ಧರ್ಮಸೇನಾ ಹೇಳಿದ್ದಾರೆ.

ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಧರ್ಮಸೇನಾ, ಹಿಂದೂಗಳ ಹಿತಾದೃಷ್ಟಿಯಿಂದ ಕಾಂಗ್ರೆಸ್ ಕೊಡುಗೆ ನೀಡಿದೆ. ಮರೆತುಹೋಗಿರುವ
ಪಕ್ಷದ ಕೊಡುಗೆಗಳನ್ನು ಮರಳಿ ಪಡೆಯಲು ಹಿಂದೂ ಕೋಶವೊಂದನ್ನು  ಸ್ಥಾಪಿಸಬೇಕಾಗಿದೆ ಎಂದರು.

ಮಾಜಿ ಕೇಂದ್ರ ಸಚಿವ ಬಾಬು ಜಗಜೀವನ ರಾಮ್ ಮತಾಂತರವಾಗದಂತೆ ತಡೆಗಟ್ಟಿದದ್ದು, ಮತ್ತಿತರ ಪಕ್ಷದ ಧಾರ್ಮಿಕ ವಿಚಾರಗಳನ್ನು ಉಲ್ಲೇಖಿಸಿದ ಧರ್ಮಸೇನಾ,ಪ್ರತಿ 10 ವರ್ಷಗಳಿಗೊಮ್ಮೆ ರಾಜಕೀಯ ಪರಿಸ್ಥಿತಿ ಬದಲಾವಣೆಯಾಗಲಿದೆ.ಜನ ಸಂಘ
ಮತ್ತಿತರ ಕಾರಣದಿಂದಾಗಿ ಬಿಜೆಪಿ ವಿಕಾಸನಗೊಂಡಿದೆ.ನಾವು ಕೂಡಾ ಬದಲಾವಣೆಯನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com