ಸಕ್ಕರೆ ಜಿಲ್ಲೆ ರೈತರ ಓಲೈಕೆಗೆ ಮುಂದಾದ ಸಿಎಂ: 'ತವರು ಮನೆ' ಸೆಂಟಿಮೆಂಟ್ ಕಾರ್ಡ್ ಪ್ಲೇ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಳೇ ಮೈಸೂರು ಭಾಗದಲ್ಲಿ ಕೇಸರಿ ಪತಾಕೆ ಹಾರುವಂತೆ ಮಾಡಲು ಸಿಎಂ ಯಡಿಯೂರಪ್ಪ ಅವರಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ತಮ್ಮ ಕೆಲಸ ಆರಂಭಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮತ್ತು ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಪ್ರಬಲಗೊಳಿಸಲು ಮುಂದಾಗಿದ್ದಾರೆ.
ಯಡಿಯೂರಪ್ಪ
ಯಡಿಯೂರಪ್ಪ

ಮೈಸೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಳೇ ಮೈಸೂರು ಭಾಗದಲ್ಲಿ ಕೇಸರಿ ಪತಾಕೆ ಹಾರುವಂತೆ ಮಾಡಲು ಸಿಎಂ ಯಡಿಯೂರಪ್ಪ ಅವರಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ತಮ್ಮ ಕೆಲಸ ಆರಂಭಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮತ್ತು ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಪ್ರಬಲಗೊಳಿಸಲು ಮುಂದಾಗಿದ್ದಾರೆ.

ತವರು ಜಿಲ್ಲೆಯ  ಮಂಡ್ಯ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಕರ್ನಾಟಕದ ಸಕ್ಕರೆ ಬಟ್ಟಲಿನ ಲಕ್ಷಾಂತರ ರೈತರ ಮನವನ್ನು ಗೆಲ್ಲಲು ಉತ್ಸುಕರಾಗಿದ್ದಾರೆ. ಮೈಶುಗರ್ ಸಕ್ಕರೆ ಕಾರ್ಖಾನೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ, ಮತ್ತು ಕೆಆರ್ ನಗರದ ಶ್ರೀರಾಮ ಸಕ್ಕರೆ ಕಾರ್ಖಾನೆಗಳು ಮೂರು ಸಕ್ಕರೆ ಕಾರ್ಖಾನೆಗಳು ನಿಷ್ಕ್ರಿಯವಾಗಿದ್ದವು, ಇದರ ಸದುಪಯೋಗ ಪಡಿಸಿಕೊಂಡಿರುವ ಯಡಿಯೂರಪ್ಪ ರೈತ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ.

ವಿರೋಧ ಪಕ್ಷದವರ ಕಡು ವಿರೋಧದ ನಡುವೆಯೂ ಸಿಎಂ ಯಡಿಯೂರಪ್ಪ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ನೀಡಿದರು. ಬಿಜೆಪಿ ಶಾಸಕ  ಹಾಗೂ ಯಡಿಯೂರಪ್ಪ ನಿಷ್ಠ ಮುರುಗೇಶ್ ನಿರಾಣಿಗೆ ಪಾಂಡವಪುರದ ಶ್ರೀರಾಮ್ ಕಾರ್ಖಾನೆಯನ್ನು ಗುತ್ತಿಗೆ ನೀಡಿದ್ದಾರೆ.

ಶ್ರೀರಂಗಪಟ್ಟಣ ಭಾಗದ ಕಬ್ಬು ಬೆಳೆಗಾರರು ಮತ್ತೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಮತ್ತೆ ಆರಂಭವಾಗಿದೆ,  ಒಂದು ವರ್ಷದಲ್ಲಿ ಹೊಸ ಯಂತ್ರಗಳನ್ನು ಅಳವಡಿಸಲಾಗುವುದು, ಕಬ್ಬು ಬೆಳೆಗಾರರ ಸಮಸ್ಯೆ ಕೊನೆಗೊಳಿಸಲು ಮೈಶುಗರ್ ನಿಯೋಗ ರಚಿಸಲು ನಿರ್ಧರಿಸಿದ್ದಾರೆ. ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು,ಪ್ರತಿಪಕ್ಷಗಳು ಯಾವುದೇ ವಿಷಯವನ್ನು ಪ್ರಸ್ತಾಪಿಸದಂತೆ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ. ಜೊತೆಗೆ ಬಿಜೆಪಿ ಪರ ಅಲೆ ಮೂಡುವಂತೆ ಮಾಡಿದ್ದಾರೆ.

ರಾಜ್ಯ ರಾಜಕೀಯದ ಮೇಲೆ ಈ ಸಕ್ಕರೆ ಕಾರ್ಖಾನೆ ನಿರ್ಧಾರ ಮಹತ್ವದ ಪರಿಣಾಮ ಬೀರಲಿದೆ ಎಂದು ಬಿಜೆಪಿ ಮುಖಂಡ ಶಿವಣ್ಣ ಹೇಳಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಗಳನ್ನು ರೈತರ ಕಣ್ಣಿನಲ್ಲಿ ವಿಲ್ಲನ್ ಮಾಡಲಿದೆ, ಮಾಜಿ ಪಿಎಂ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭದ್ರಕೋಟೆಯಾದ ಹಾಸನ ಮತ್ತು ಮೈಸೂರಗಳನ್ನು ಕೈ ವಶ ಮಾಡಿಕೊಳ್ಳಲು ಬಿಜೆಪಿ ಸರಣಿ ಸಭೆ ನಡೆಸಿ ತಂತ್ರ ರೂಪಿಸುತ್ತಿದೆ ಎಂದು ಶಿವಣ್ಣ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com