ಏಳು ದಶಕಗಳ ಓಲೈಕೆ ರಾಜಕಾರಣದ ಪರಿಣಾಮ; ಇವರುಗಳನ್ನು ಬೇರು ಸಹಿತ ಮಟ್ಟ ಹಾಕಲೇಬೇಕು: ಸಿ.ಟಿ.ರವಿ

ಕಲ್ಲು, ದೊಣ್ಣೆ, ಪೆಟ್ರೋಲ್ ಬಾಂಬ್ ಗಲಭೆಕೋರರಿಗೆ ಬಂದಿದ್ದೆಲ್ಲಿಂದ? ಗಲಭೆ ಪೂರ್ವಯೋಜಿತ, ಗಲಭೆ ನಡೆಸುವವರಿಗೆ ಒಂದು ನೆಪ ಬೇಕಿತ್ತು. ಇವರುಗಳನ್ನು ಬೇರು ಸಹಿತ ಮಟ್ಟ ಹಾಕಲೇಬೇಕು.
ಬೆಂಗಳೂರು ಹಿಂಸಾಚಾರ
ಬೆಂಗಳೂರು ಹಿಂಸಾಚಾರ

ಬೆಂಗಳೂರು: ಡಿಜೆ ಹಳ್ಳಿ ಹಿಂಸಾಚಾರ ಪ್ರಕರಣವನ್ನು ಪ್ರವಾಸೋದ್ಯಮ ಸಚಿವ ಸಿಟಿ ರವಿ ಖಂಡಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ಡಿ.ಜೆ ಹಳ್ಳಿ ಗಲಭೆ ಪ್ರಕರಣವನ್ನು ಖಂಡಿಸುತ್ತೇನೆ. ಪತ್ರಕರ್ತರು, ಪೊಲೀಸರು, ಅಮಾಯಕ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವುದು ಪೂರ್ವಯೋಜಿತ ಎಂಬಂತೆ ಕಾಣಿಸುತ್ತದೆ ಎಂದು ಹೇಳಿದ್ದಾರೆ.

ಕಲ್ಲು, ದೊಣ್ಣೆ, ಪೆಟ್ರೋಲ್ ಬಾಂಬ್ ಗಲಭೆಕೋರರಿಗೆ ಬಂದಿದ್ದೆಲ್ಲಿಂದ? ಗಲಭೆ ಪೂರ್ವಯೋಜಿತ, ಗಲಭೆ ನಡೆಸುವವರಿಗೆ ಒಂದು ನೆಪ ಬೇಕಿತ್ತು. ಇವರುಗಳನ್ನು ಬೇರು ಸಹಿತ ಮಟ್ಟ ಹಾಕಲೇಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ. 

ಡಿ.ಜೆ ಹಳ್ಳಿ ಗಲಭೆ ಪ್ರಕರಣ, ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವರಿಗೆ ತಾವು ಕಾನೂನನ್ನು ಮೀರಿದವರು ಎಂಬ ಭಾವನೆಯಿದೆ ಇದು ಏಳು ದಶಕಗಳ ಓಲೈಕೆ ರಾಜಕಾರಣದ ಪರಿಣಾಮ ಎಂದು ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com