ಆಕ್ಸಿಜನ್ ಕೊರತೆಯಿಂದ ರಾಜ್ಯದಲ್ಲಿ ಕೊರೋನಾ ರೋಗಿಗಳ ಜೀವಕ್ಕೇ ಆಪತ್ತು ಬಂದಿದೆ :ಎಚ್.ಕೆ.ಪಾಟೀಲ್ 

ಆಕ್ಸಿಜನ್ ಕೊರತೆಯಿಂದ ಒಂದೇ ಒಂದು ಜೀವ ಹೋದರೂ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ.ರಾಜ್ಯದಲ್ಲಿ ಒಂದು ಸಾವಿರ ಸೋಂಕಿತರಿಗೆ ಆಕ್ಸಿಜನ್ ನೀಡಬೇಕಾದ ಅನಿವಾ ರ್ಯ ಪರಿಸ್ಥಿತಿ ಇದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆತಂಕ ವ್ಯಕ್ತಪಡಿ ಸಿದ್ದಾರೆ.
ಎಚ್ ಕೆ ಪಾಟೀಲ್
ಎಚ್ ಕೆ ಪಾಟೀಲ್

ಬೆಂಗಳೂರು: ಆಕ್ಸಿಜನ್ ಕೊರತೆಯಿಂದ ಒಂದೇ ಒಂದು ಜೀವ ಹೋದರೂ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ.ರಾಜ್ಯದಲ್ಲಿ ಒಂದು ಸಾವಿರ ಸೋಂಕಿತರಿಗೆ ಆಕ್ಸಿಜನ್ ನೀಡಬೇಕಾದ ಅನಿವಾ ರ್ಯ ಪರಿಸ್ಥಿತಿ ಇದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆತಂಕ ವ್ಯಕ್ತಪಡಿ ಸಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ಮಾತನಾಡಿದ ಅವರು,ರಾಜ್ಯ ಸರ್ಕಾರ ಅದ್ಯಾವು ದೋ ಗುಜರಾತ್ ನಲ್ಲಿರುವ ಮೆಹತಾ ಕಂಪನಿಗೆ ಆಕ್ಸಿಜೆನ್ ಪೂರೈಕೆಗೆ
ಟೆಂಡರ್ ಕೊಟ್ಟು ತೊಂದರೆ ಮಾಡಿಕೊಂ ಡಿದ್ದಾರೆ.ಮೆಹತಾ ಕಂಪನಿಯಿಂದ ರಾಜ್ಯಕ್ಕೆ ಇನ್ನೂ ಆಕ್ಸಿಜನ್ ಪೂರೈಕೆ ಮಾಡಿಲ್ಲ.

ದೂರದೃಷ್ಟಿಯಿಂದ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಂಡಿಲ್ಲ.ರಾಜ್ಯದಲ್ಲಿ 24,500 ರೋಗಿಗಳಿಗೆ ಆಕ್ಸಿಜನ್ ಅಗತ್ಯವಿದ್ದು,ತುರ್ತಾಗಿ ಒಂದು ಸಾವಿರ ಜನರಿಗೆ ಆಕ್ಸಿಜನ್
ಕೊಡಲೇಬೇಕಾದ ಅತ್ಯಂತ ಅನಿವಾರ್ಯ ಸ್ಥಿತಿ ಇದೆ.ಆದರೆ ಸರ್ಕಾರ ಕೇವಲ 12 ಸಾವಿರ ಆಕ್ಸಿಜನ್ ಬೆಡ್ ಸಿದ್ದಪಡಿಸಿದೆ.ಎಲ್ಲೆಡೆ ಆಕ್ಸಿಜನ್ ಕೊರತೆ ಕಂಡು ಬರುತ್ತಿದ್ದು, 80
ಕಿಲೋಮೀಟರ್ ಹಾಗೂ 100 ಕಿಲೋ ಮೀಟರ್ ಮೇಲೆ ಸರಬರಾಜು ಮಾಡಲಾಗದು ಎಂಬ ತಾಂತ್ರಿಕ ಕಾರಣವನ್ನು ಸರ್ಕಾರ ಕೊಡಬಹುದು ಎಂದು ಅವರು ಆರೋಗ್ಯ ಇಲಾಖೆ
ಅಧಿಕಾರಿಗಳಿಗೆ ತಿಳುವಳಿಕೆ ನೀಡಿದ್ದಾರೆ.  ಬಿಇಐಸಿಯಲ್ಲಿ ಕೋವಿಡ್ ಸೆಂಟರ್ ಮಾಡಿದ್ದಾರೆ ಅಲ್ಲಿ ಕುಡಿಯುವ ನೀರಿಲ್ಲ. 15 ರೂಂಗೆ ಒಂದು ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಕಾರಣ.
ಇದರ ಕುರಿತಾಗಿ ಮಾನವಹಕ್ಕುಗಳ ಆಯೋಗಕ್ಕೆ ವಿವರಿಸಿದ್ದೇನೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿಕೆ ನೀಡಿದ್ದಾರೆ.

ಕೊವಿಡ್ ಸೋಂಕು‌ ಹೆಚ್ಚುತ್ತಲೇ ಇದೆ. ಸರ್ಕಾರದ ಅಸಮರ್ಪಕತೆ ಮುಂದುವರಿದಿದೆ. ಜನ ಇನ್ನೂ ಹೆಚ್ಚಾಗಿ  ಸಮಸ್ಯೆಗೆ ತುತ್ತಾಗುತ್ತಲೇ ಇದ್ದಾರೆ. ಬೆಡ್, ಸಿಬ್ಬಂದಿ, ಔಷಧಿಗಳ ಕೊರತೆ
ಮುಂದುವರಿದಿದೆ. ಆಕ್ಸಿಜನ್ ಕೊರತೆಯು ಇದೀಗ ಹೆಚ್ಚಾಗಿ ಕಂಡು ಬರುತ್ತಿದೆ.

25 ಸಾವಿರ ರೋಗಿಗಳಿಗೆ ಗೆ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ.  ಇದರಲ್ಲಿ ಒಂದು ಸಾವಿರ ಮಂದಿಯ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ‌ಆಕ್ಸಿಜನ್ ಕೊರತೆ
ಮುಂದುವರಿದಿದೆ. ಸರ್ಕಾರದ ಒಂದು ಟಾಸ್ಕ್ ಪೋರ್ಸ್ ಮಾಡಬೇಕು. ಆಕ್ಸಿಜನ್, ಬೆಡ್ ಪೂರೈಕೆ ಇತರ ಸಮಸ್ಯೆ ಬಗ್ಗೆ ಗಮನಹರಿಸಬೇಕು.

ಗುಜರಾತ್ ಕಂಪನಿಗೆ ಆಕ್ಸಿಜನ್ ಟೆಂಡರ್ ಕೊಟ್ಟು ವಾಪಸ್ ಪಡೆದರು. ಲಿಕ್ವಿಡ್ ಆಕ್ಸಿಜನ್ ಫೈಪ್ ಲೈನ್ ಹಾಕಿಲ್ಲ. ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದರೆ ಸರ್ಕಾರವೇ
ಹೊಣೆ. ಈ ವಿಚಾರದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹೆಚ್.ಕೆ.ಪಾಟೀಲ್ ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com