ನಾಯಕತ್ವ ಸಮಸ್ಯೆಯಿಂದ ಕಾಂಗ್ರೆಸ್ ಹೈರಾಣ: ಪತ್ರ ಪ್ರಸಂಗ ಸಂಪೂರ್ಣ

ನಾಯಕತ್ವದ ಬದಲಾವಣೆ ಕುರಿತು ಕಾಂಗ್ರೆಸ್‌ನಲ್ಲಿ ಆತಂರಿಕ ಭಿನ್ನಮತ ಸ್ಫೋಟವಾಗಿದೆ. ಕೆಲವರು ಗಾಂಧಿ ಕುಟುಂಬದ ಬೆನ್ನಿಗೆ ನಿಂತರೇ ಇನ್ನೂ ಕೆಲವರು ಗಾಂಧಿಯೇತರ ನಾಯಕತ್ವ ವಹಿಸಬೇಕೆಂಬ ಮಾತುಗಳನ್ನಾಡುತ್ತಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ಬೆಂಗಳೂರು: ನಾಯಕತ್ವದ ಬದಲಾವಣೆ ಕುರಿತು ಕಾಂಗ್ರೆಸ್‌ನಲ್ಲಿ ಆತಂರಿಕ ಭಿನ್ನಮತ ಸ್ಫೋಟವಾಗಿದೆ. ಕೆಲವರು ಗಾಂಧಿ ಕುಟುಂಬದ ಬೆನ್ನಿಗೆ ನಿಂತರೇ ಇನ್ನೂ ಕೆಲವರು ಗಾಂಧಿಯೇತರ ನಾಯಕತ್ವ ವಹಿಸಬೇಕೆಂಬ ಮಾತುಗಳನ್ನಾಡುತ್ತಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬೆನ್ನಿಗೆ ನಿಂತು  ಒಗ್ಗಟ್ಟು ಪ್ರದರ್ಶಿಸುವ ಮೂಲಕ ಹಿರಿಯ ನಾಯಕರು ಸೋಮವಾರ ಕಾಂಗ್ರೆಸ್ ಒಳಗಿನ ಬಿಕ್ಕಟ್ಟನ್ನು ಮುಂದೂಡಲು ಯಶಸ್ವಿಯಾದರು.

ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಆಂತಕರಿಕ ಭಿನ್ನಮತ ಅರಗಿಸಿಕೊಳ್ಳಲಾರದ ತುತ್ತಾಗಿದೆ. ಎರಡು ವಾರಗಳ ಹಿಂದೆ ನಾಯಕತ್ವ ಬದಲಾವಣೆ ಸಂಬಂಧವಾಗಿ ಹಿರಿಯ ಕಾಂಗ್ರೆಸ್ ನಾಯಕರು ಪತ್ರ ಬರೆದಿದ್ದರು. ನಿನ್ನೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು, ಆದರೆ ಯಾವುದೇ ನಿರ್ಧಾರ ಕೈಗೊಳ್ಳದೇ ಹೊಸ ನಾಯಕನನ್ನು ಆಯ್ಕೆ ಮಾಡದೇ ಸೋನಿಯಾ ಗಾಂಧಿ ಅವರೇ ಇನ್ನೂ ಆರು ತಿಂಗಳ ಕಾಲ ಹಂಗಾಮಿ
ಅಧ್ಯಕ್ಷರಾಗಿ ಮುಂದುವರಿಯುವಂತ ತೀರ್ಮಾನ ಕೈಗೊಳ್ಳಲಾಯಿತು.

ಕಾಂಗ್ರೆಸ್ ನ ಹಲವು ಹಿರಿಯ ಮುಖಂಡರು ಸೇರಿದಂತೆ 23 ನಾಯಕರು ಪಕ್ಷದ ನಾಯಕತ್ವ ಬದಲಾವಣೆ ಕುರಿತು ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಗಸ್ಟ್‌ 7 ರಂದು ಪತ್ರ ಬರೆದಿದ್ದರು. ಈ ಪತ್ರ ವೈರಲ್ ಆಗಿತ್ತು. ಈ ಪತ್ರ ಬರೆದ 23 ನಾಯಕರಲ್ಲಿ ಗುಲಾಂ ನಬಿ ಆಜಾದ್, ವೀರಪ್ಪ ಮೊಯ್ಲಿ ಮತ್ತು ಕಪಿಲ್ ಸಿಬಲ್ ಕೂಡ ಇದ್ದರು.

2019ರ ಲೋಕಸಭೆ ಚುನಾವಣೆ ನಂತರ, ಪಕ್ಷದ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ರಾಜಿನಾಮೆ ನೀಡಿದ್ದರು. ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆಯೂ ತಿಳಿಸಿದ್ದರು. ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವುದು ಎಐಸಿಸಿ ಮತ್ತು ಸಿಡಬ್ಲ್ಯೂಸಿ ಕರ್ತವ್ಯವಾಗಿದೆ, ಇದಕ್ಕೆ ಯಾರೂ ಹೊಣೆಗಾರರಲ್ಲ ಎಂದು ಕಾಂಗ್ರೆಸ್ ನಾಯಕ ಬಿಎಲ್ ಶಂಕರ್ ತಿಳಿಸಿದ್ದಾರೆ.

ಈ ಎಲ್ಲಾ ಬಿಕ್ಕಟ್ಟಿನ್ನು ಬಗೆ ಹರಿಸಿಕೊಂಡು ಕಾಂಗ್ರೆಸ್ ಪಕ್ಷ ಪ್ರಬಲ ಮತ್ತು ಸಮರ್ಥವಾಗಿ ಹೊರ ಹೊಮ್ಮುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ . ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಬೇಕೆಂದು ಬಯಸಿದ್ದಾರೆ ಮತ್ತು  ಅವರ ಆಸೆ ಸರಿಯಾಗಿದೆ. ರಾಜ್ಯ
ಕಾಂಗ್ರೆಸ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com