ಕೋವಿಡ್ ಬಿಕ್ಕಟ್ಟು: ಪಾಕಿಸ್ತಾನವನ್ನು ಹಾಡಿ ಹೊಗಳಿದ ಧಾರವಾಡ ಕಾಂಗ್ರೆಸ್ ಮುಖಂಡ

ಕೊರೋನಾ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳುವ ಭರದಲ್ಲಿ ಧಾರವಾಡದ ಕಾಂಗ್ರೆಸ್ ನಾಯಕರೊಬ್ಬರು ಶತ್ರುರಾಷ್ಟ್ರ ಪಾಕಿಸ್ತಾನವನ್ನು ಹೊಗಳಿ ವಿವಾದಕ್ಕೀಡಾಗಿದ್ದಾರೆ.
ಅನಿಲ್ ಕುಮಾರ್ ಪಾಟೀಲ್
ಅನಿಲ್ ಕುಮಾರ್ ಪಾಟೀಲ್

ಧಾರವಾಡ: ಕೊರೋನಾ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳುವ ಭರದಲ್ಲಿ ಧಾರವಾಡದ ಕಾಂಗ್ರೆಸ್ ನಾಯಕರೊಬ್ಬರು ಶತ್ರುರಾಷ್ಟ್ರ ಪಾಕಿಸ್ತಾನವನ್ನು ಹೊಗಳಿ ವಿವಾದಕ್ಕೀಡಾಗಿದ್ದಾರೆ.

ಧಾರವಾಡದ ನವಲಗುಂದದಲ್ಲಿ  ನಡೆದ 'ಆರೋಗ್ಯ ಹಸ್ತ' ಕಾರ್ಯಕ್ರಮದಲ್ಲಿ  ಭಾಷಣ ಮಾಡುವಾಗ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್  ಪಾಕಿಸ್ತಾನವನ್ನು ಹೊಗಳಿದ್ದಾರೆ. ವಲಸೆ ಕಾರ್ಮಿಕರು ಬೀದಿಗೆ ಬಿದ್ದಾಗ ಕೇಂದ್ರ ಸರ್ಕಾರ ಅಸಹಾಯಕತೆ ಪ್ರದರ್ಶಿಸಿದೆ.  ದೈನಂದಿನ ವೇತನದಿಂದ ತಮ್ಮ ಕುಟುಂಬವನ್ನು ಪೋಷಿಸುವ ಮಂದಿ ಸಾಯುತ್ತಿದ್ದಾರೆ ಈ ಎಲ್ಲದರ ಹೊರತಾಗಿ ಕೊರೋನಾವೈರಸ್ ಬಿಕ್ಕಟ್ಟು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದ ಅನಿಲ್ ಕುಮಾರ್ ಪಾಕಿಸ್ತಾನದ ಉದಾಹರಣೆ ನೀಡಿದ್ದಾರೆ.

"ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾರತದಲ್ಲಿ ವಾಸಿಸುವ ಜನರು ಒಂದೇ ವಂಶದವರು ಮತ್ತು ಅವರ ವಂಶವಾಹಿಗಳು ಒಂದಕ್ಕೊಂದು ತಾಳೆಯಾಗುತ್ತದೆ. "ನಾವು ಒಡಹುಟ್ಟಿದವರು. ಒಂದು ದೇಶದಿಂದ ಜನರು ಇನ್ನೊಂದು ದೇಶಕ್ಕೆ ಹೋಗುವಾಗ ಅವರನ್ನು ಬೇರೆರಾಷ್ಟ್ರದ ಜನರಂತೆ ಕಾಣುವುದು ಸಾಧ್ಯವಿಲ್ಲ. ಏಕೆಂದರೆ ಈ ಮೂರೂ ರಾಷ್ಟ್ರದ ಜನರು ಒಂದೇ ಆಗಿದ್ದೇವೆ. ಹವಾಮಾನ ಸ್ಥಿತಿ, ತಾಪಮಾನದ ಸ್ಥಿತಿಯೂ ಒಂಡೇ ಆಗಿದೆ.  ಆದರೆ ಪಾಕಿಸ್ತಾನದಲ್ಲಿ ಕೇವಲ 300 ರಿಂದ 400 ಕೊರೋನಾ ಪ್ರಕರಣಗಳು ಒಂದು ದಿನಕ್ಕೆ ವರದಿಯಾಗುತ್ತಿದೆ. ಭಾರತದಲ್ಲಿ, ನಾವು ಪ್ರತಿದಿನ 70,000 ಪ್ರಕರಣಗಳಿಗೆ ಸಾಕ್ಷಿಯಾಗಿದ್ದೇವೆ. " ಅನಿಲ್ ಕುಮಾರ್ ಪಾಕಿಸ್ತಾನದ ಸಾಧನೆಯನ್ನು ಹೊಗಳಿದ್ದಾರೆ.

ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಾಟೀಲ್ ಹೇಳಿದರು. ಸರ್ಕಾರವು ಅಸಮರ್ಥವಾಗಿರುವುದರಿಂದ ಈ ಪರಿಸ್ಥಿತಿ ಮುಂದುವರಿಯುತ್ತದೆ ಎಂದು ಅವರು ಭವಿಷ್ಯ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com