'ಜೆಡಿಎಸ್ ತೊರೆಯುವ ಜರೂರತ್ತು ನನಗಿಲ್ಲ, ನನ್ನ ತಲೆಯಲ್ಲಿ ಬೇರೆ ಪಕ್ಷ ಸೇರುವ ಆಲೋಚನೆಯೂ ಬಂದಿಲ್ಲ'

ಜೆಡಿಎಸ್ ತೊರೆಯುವಂತಹ ಜರೂರತ್ತು ನನಗಿಲ್ಲ. ನಾನಿನ್ನೂ ಜೆಡಿಎಸ್ ನಲ್ಲಿದ್ದೇನೆ, ಮುಂದೆಯೂ ಜೆಡಿಎಸ್ ನಲ್ಲೇ ಇರುತ್ತೇನೆ ಎಂದು ಮಾಜಿ ಶಾಸಕ ವೈ ಎಸ್ ವಿ ದತ್ತ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಸಭೆಯಲ್ಲಿ ವೈಎಸ್ ವಿ ದತ್ತ
ಜೆಡಿಎಸ್ ಸಭೆಯಲ್ಲಿ ವೈಎಸ್ ವಿ ದತ್ತ

ಬೆಂಗಳೂರು: ಜೆಡಿಎಸ್ ತೊರೆಯುವಂತಹ ಜರೂರತ್ತು ನನಗಿಲ್ಲ. ನಾನಿನ್ನೂ ಜೆಡಿಎಸ್ ನಲ್ಲಿದ್ದೇನೆ, ಮುಂದೆಯೂ ಜೆಡಿಎಸ್ ನಲ್ಲೇ ಇರುತ್ತೇನೆ ಎಂದು ಮಾಜಿ ಶಾಸಕ ವೈ ಎಸ್ ವಿ ದತ್ತ ಸ್ಪಷ್ಟಪಡಿಸಿದ್ದಾರೆ.

ವೈ ಎಸ್ ವಿ ದತ್ತ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಾರೆಂದು ಟಿವಿ ಚಾನೆಲ್ ನಲ್ಲಿ ಪ್ರಸಾರವಾದ ಸುದ್ದಿಯ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ನೆನ್ನೆ ರಾತ್ರಿ ತಾನೆ ದೇವೇಗೌಡರ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿಕೊಂಡು ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ಮಾತನಾಡಿಕೊಂಡು ಬಂದಿದ್ದೇನೆ. ನನ್ನ ತಲೆಯಲ್ಲಿ ಇದುವರೆಗೂ ಬಂದಿಲ್ಲದ ಆಲೋಚನೆಯನ್ನು ಟಿವಿ ಅವರು ಒಂದು ಸುದ್ದಿ ಅಂತ ಪ್ರಸಾರ ಮಾಡಿದ್ದಾರೆ. 

ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ?? ಸುಮ್ಮನೆ ಇವನ್ನೆಲ್ಲ ನಿರ್ಲಕ್ಷಿಸಿ. ಪಕ್ಷ ಸಂಘಟನೆ ಕಡೆ ಗಮನ ಕೊಡೋಣ. ಮೊನ್ನೆ ಪಕ್ಷ ಸಂಘಟನೆ ಬಗ್ಗೆ ಗ್ರಾಮ ಪಂಚಾಯಿತಿ ಚುನಾವಣೆ ಬಗ್ಗೆ ಪಕ್ಷದ ಕಚೇರಿಯಲ್ಲಿ ಮಾತನಾಡಿದ್ದೇನೆ ಅದರ ಕಡೆ ಗಮನ ಕೊಡೋಣ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು 22 ವರ್ಷದ ಹುಡುಗನಾಗಿದ್ದಾಗ ರಾಜಕೀಯ ಪ್ರವೇಶ ಮಾಡಿದ್ದೇನೆ. ಜೆ ಪಿ ತತ್ವ ಸಿದ್ಧಾಂತ ಮೆಚ್ಚಿ ಬಂದವನು, ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ನಡೆದುಕೊಂಡಿದ್ದೇನೆ. ಪಕ್ಷ ತತ್ವ ಸಿದ್ಧಾಂತ ಮುರಿಯುವ ಸಂದರ್ಭದಲ್ಲಿ ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಹಾಗೂ ಎಂಎಲ್‌ ಸಿಯಾಗಿ ಕೆಲಸ ಮಾಡಿದ್ದೇನೆ, ದೇವೇಗೌಡರು ಇರುವವರೆಗೂ ತಾವು ಜೆಡಿಎಸ್‌ನಲ್ಲಿ‌ ಇರುತ್ತೇನೆ ಎಂದು ಸೂಚ್ಯವಾಗಿ ಹೇಳಿದರು.

ಜೆಡಿಎಸ್ ಜೊತೆ ಮೈತ್ರಿಯಿಂದ ಕಾಂಗ್ರೆಸ್ ಗೆ ನಷ್ಟವಾಗಿದೆ ಎಂಬ ಕಾಂಗ್ರೆಸ್ ನಾಯಕರ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಸಿದ್ದರಾಮಣ್ಣನಿಗೆ ಈಗ ನಷ್ಟ - ಲಾಭ ಗೊತ್ತಾಗಿದೆ. ನಮ್ಮ ಜೊತೆ ಇದ್ದಾಗಿನಿಂದಲೂ ಇದೇ ಪರಿಸ್ಥಿತಿ ಇದೆ , ಕರ್ನಾಟಕದಲ್ಲಿ ಯಾವತ್ತೂ ತ್ರಿಕೋನ ಸ್ಪರ್ಧೆ ಇದೆ, ನಾವು ನಮ್ಮ ಕಾಲಿನ ಮೇಲೆ ನಿಂತುಕೊಳ್ಳಬೇಕು ಎಂಬ ಆಸೆ ನಮಗೆ ಎಂದು ದತ್ತಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com