ಕಪ್ಪು ಹಣ: ಸಿಪಿ ಯೋಗೇಶ್ವರ್, ಸಂತೋಷ್ ಬಂಧಿಸುವಂತೆ ಕಾಂಗ್ರೆಸ್ ಪ್ರತಿಭಟನೆ

ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ, ತನ್ನ ಪಕ್ದದ ನಾಯಕರಾದ ಸಿ ಪಿ ಯೋಗೇಶ್ವರ್, ಎನ್ ಆರ್ ಸಂತೋಷ್ ಹಾಗೂ ಎಚ್. ವಿಶ್ವನಾಥ್ ಅವರನ್ನು ಬಂಧಿಸಿ ತನಿಖೆ ನಡೆಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸಿ.ಪಿ ಯೋಗೇಶ್ವರ್
ಸಿ.ಪಿ ಯೋಗೇಶ್ವರ್

ಬೆಂಗಳೂರು: ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ, ತನ್ನ ಪಕ್ದದ ನಾಯಕರಾದ ಸಿ ಪಿ ಯೋಗೇಶ್ವರ್, ಎನ್ ಆರ್ ಸಂತೋಷ್ ಹಾಗೂ ಎಚ್. ವಿಶ್ವನಾಥ್ ಅವರನ್ನು ಬಂಧಿಸಿ ತನಿಖೆ ನಡೆಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಆನಂದ್ ರಾವ್ ವೃತ್ತದ ಬಳಿ ಇರುವ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ವಿಧನಾ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ವಿರುದ್ದ ಘೋಷಣೆ ಕೂಗಿದರು.

ಇಬ್ಬರೂ ಬಿಜೆಪಿ ಸರ್ಕಾರ ರಚನೆ ಮಾಡುವ ವೇಳೆ, ಚುನಾವಣೆ ಸಂದರ್ಭದಲ್ಲಿ ಅಕ್ರಮ ಹಣ ಬಳಸಿರುವುದು ಬಹಿರಂಗೊಂಡಿದೆ.

ಕೇಂದ್ರ ಸರ್ಕಾರ ಕಪ್ಪು ಹಣ ಹೊಂದಿರುವವರ ವಿರುದ್ಧ ಕ್ರಮ ಜರುಗಿಸುತ್ತಿದೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾರೆ. ಆದರೆ ತಮ್ಮ ಪಕ್ಷದ ನಾಯಕರ ವಿರುದ್ಧ ಮಾತ್ರ ದಿವ್ಯ ಮೌನ ವಹಿಸುತ್ತಾರೆ. ಬಿಜೆಪಿಯ ಎಚ್. ವಿಶ್ವನಾಥ್ ಇತ್ತೀಚೆಗೆ ಮಾತನಾಡಿದ ಸಂದರ್ಭದಲ್ಲಿ ತಮಗೆ ಸಿ.ಪಿ. ಯೋಗೇಶ್ವರ್ ಮತ್ತು ಎನ್.ಆರ್, ಸಂತೋಷ್ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಅವರಿಂದ ತಲುಪಿಸಬೇಕಾಗಿದ್ದ ಹಣವನ್ನು ತಲುಪಿಸಿಲ್ಲ. ಈ ಇಬ್ಬರನ್ನು ತಕ್ಷಣ ಬಂಧಿಸಿ ಇವರುಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com