ಕಾಂಗ್ರೆಸ್ ನಲ್ಲಿ ಹೊಸ ಬಣ, ಗುಂಪುಗಾರಿಕೆ: ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸೋಲು ಗೆಲುವಿನ ಪರಾಮರ್ಶೆ 

ಗುಂಪುಗಾರಿಕೆ, ಬಣ ರಾಜಕೀಯ ಮತ್ತೆ ಕಾಂಗ್ರೆಸ್ ನ್ನು ಕಾಡುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್ ನಲ್ಲಿ ಎರಡು ಗುಂಪು ಇರುವುದು ಗೊತ್ತಿರುವ ಸಂಗತಿಯೇ, ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ ಕೆ ಶಿವಕುಮಾರ್ ಬಣ.
ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್
ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್

ಬೆಂಗಳೂರು: ಗುಂಪುಗಾರಿಕೆ, ಬಣ ರಾಜಕೀಯ ಮತ್ತೆ ಕಾಂಗ್ರೆಸ್ ನ್ನು ಕಾಡುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್ ನಲ್ಲಿ ಎರಡು ಗುಂಪು ಇರುವುದು ಗೊತ್ತಿರುವ ಸಂಗತಿಯೇ, ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ ಕೆ ಶಿವಕುಮಾರ್ ಬಣ.

ಕಾಂಗ್ರೆಸ್ ನ ಹಿರಿಯ ಹಳೆ ನಾಯಕರಾದ ಬಿ ಕೆ ಹರಿಪ್ರಸಾದ್, ಕೆ ಹೆಚ್ ಮುನಿಯಪ್ಪ, ಡಾ ಜಿ ಪರಮೇಶ್ವರ್, ಮಾರ್ಗರೇಟ್ ಆಳ್ವ, ಹೆಚ್ ಕೆ ಪಾಟೀಲ್ ಮತ್ತು ಇನ್ನೂ ಕೆಲವರು ಇಲ್ಲಿಯವರೆಗೆ ಪ್ರತ್ಯೇಕವಾಗಿ ಮೂರು ಸಭೆಗಳನ್ನು ನಡೆಸಿದ್ದಾರೆ. ಇವರು ಎರಡೂ ಬಣಕ್ಕೆ ಸೇರಿದವರಲ್ಲ. ಅವರದ್ದು ಪ್ರತ್ಯೇಕ ಬಣ.

2013ರಿಂದ 2018ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದಾಗ ಎಲ್ಲ ನಾಯಕರು ಒಟ್ಟಿಗೆ ಇದ್ದರು. ಯಾವಾಗ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತೋ ಸಿದ್ದರಾಮಯ್ಯ ಬಣದಿಂದ ಒಬ್ಬೊಬ್ಬರೇ ಹೊರಗೆ ಬರಲಾರಂಭಿಸಿದರು. ಸಿದ್ದರಾಮಯ್ಯ ಬಣದಲ್ಲಿ ಹೆಚ್ ಸಿ ಮಹದೇವಪ್ಪ, ಜಮೀರ್ ಅಹ್ಮದ್, ಅಶೋಕ್ ಪಟ್ಟಣ್, ಪ್ರಕಾಶ್ ರಾಥೋಡ್ ಮೊದಲಾದವರು ಸದ್ಯ ಗುರುತಿಸಿಕೊಂಡಿದ್ದಾರೆ. 

2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತಾಗ, ವಿಧಾನಸಭೆ ಉಪ ಚುನಾವಣೆಗಳಲ್ಲಿ ಸೋತಾಗ ಸಿದ್ದರಾಮಯ್ಯನವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಳೆದ ಡಿಸೆಂಬರ್ ನಲ್ಲಿ ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡರು. ಡಿ ಕೆ ಶಿವಕುಮಾರ್ ಅವರನ್ನು ಕಳೆದ ಮಾರ್ಚ್ ನಲ್ಲಿ ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದಾಗ ಆಗ ಹುಟ್ಟಿಕೊಂಡಿದ್ದೇ ಡಿಕೆ ಶಿ ಬಣ. ಅದರಲ್ಲಿ ಅವರ ಸೋದರ ಡಿ ಕೆ ಸುರೇಶ್, ಶಾಸಕ ರಂಗನಾಥ್ ದೊಡ್ಡಯ್ಯ ಮೊದಲಾದವರಿದ್ದಾರೆ.

ಇನ್ನು ಸದ್ಯದಲ್ಲಿಯೇ ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳ ಉಪ ಚುನಾವಣೆಗಳಿವೆ. ಎರಡೂ ಕ್ಷೇತ್ರಗಳಲ್ಲಿ 2018ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು ಮತ್ತು ಬಸವಕಲ್ಯಾಣ ಕ್ಷೇತ್ರದ ಶಾಸಕ ನಾರಾಯಣ ರಾವ್ ನಿಧನದಿಂದ ಈಗ ಉಪ ಚುನಾವಣೆ ಅನಿವಾರ್ಯವಾಗಿದೆ. 

ಈ ಕ್ಷೇತ್ರಗಳಲ್ಲಿ ಮಾಜಿ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಭಾವ ಜೋರಾಗಿದೆ. ಖರ್ಗೆಯವರ ಬೆಂಬಲವಿಲ್ಲದೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರಿಗೂ ಇಲ್ಲಿ ಪ್ರಚಾರ ನಡೆಸಿ ಗೆಲ್ಲಲು ಸಾಧ್ಯವಿಲ್ಲ. ಇಲ್ಲದಿದ್ದರೆ ಶಿರಾ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಂತೆ ಇಲ್ಲಿಯೂ ಕಾಂಗ್ರೆಸ್ ಗೆ ಸೋಲು ಕಟ್ಟಿಟ್ಟ ಬುತ್ತಿ. ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರಿಗೂ ಸಂಬಂಧ ಅಷ್ಟಕಷ್ಟೆ. ಇಲ್ಲಿ ಯಾವ ರೀತಿ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಬಯಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com