27 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸದಿರಲು ಚುನಾವಣಾ ಆಯೋಗ ತೀರ್ಮಾನ!

ಪ್ರಸ್ತುತ ಚುನಾವಣೆ ಘೋಷಣೆಯಾಗಿರುವ ಗ್ರಾಮ ಪಂಚಾಯತಿಗಳ ಪೈಕಿ ಕೆಲ ಗ್ರಾಮ ಪಂಚಾಯತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿತವಾಗಿರುವ ಹಿನ್ನೆಲೆ ಒಟ್ಟು 26 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸದಿರಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ.
27 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸದಿರಲು ಚುನಾವಣಾ ಆಯೋಗ ತೀರ್ಮಾನ!

ಬೆಂಗಳೂರು: ಪ್ರಸ್ತುತ ಚುನಾವಣೆ ಘೋಷಣೆಯಾಗಿರುವ ಗ್ರಾಮ ಪಂಚಾಯತಿಗಳ ಪೈಕಿ ಕೆಲ ಗ್ರಾಮ ಪಂಚಾಯತಿಗಳು ನಗರ ಸ್ಥಳೀಯ ಸಂಸ್ಥೆಗಳಾಗಿ ಪರಿವರ್ತಿತವಾಗಿರುವ ಹಿನ್ನೆಲೆ ಒಟ್ಟು 26 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸದಿರಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ. ಇದಲ್ಲದೆ ಉಡುಪಿ ಜಿಲ್ಲೆ ಕುಂದಾಪುರದ ಗ್ರಾಮವೊಂದರ ವಿಚಾರ ವಿವಾದದ ವಿಚಾರಣೆ ನಡೆಯುತ್ತಿರುವ ಕಾರಣ ಆ ಗ್ರಾಮ ಪಂಚಾಯತಿಗೆ ಸಹ ಚುನಾವಣೆ ಇರುವುದಿಲ್ಲ.

ಹಾಗಾಗಿ ರಾಜ್ಯದ 5762 ಗ್ರಾಮ ಪಂಚಾಯಯತ್ ಗಳ ಪೈಕಿ  5735 ಗ್ರಾಮ ಪಂಚಾಯತ್ ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

ಕುಂದಾಪುರ ತಾಲೂಕಿನ ಹೊಸಾಡು ಗ್ರಾಮ ಪಂಚಾಯತಿಗೆ ಸೇನಾಪುರ ಗ್ರಾಮವನ್ನು ಸೇರಿಸಿರುವುದನ್ನು ಪ್ರಶ್ನಿಸಿ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಮೇಲ್ಮನವಿ ಸಲ್ಲಿಕೆಯಾಗಿರುವ ಕಾರಣ ಈ ಸಂಬಂಧ ವಿಚಾರಣೆ ನಡೆಯುತ್ತಿದೆ. ಅದರಿಂದಾಗಿ ಹೊಸಾಡು ಗ್ರಾಮ ಪಂಚಾಯತಿ ಚುನಾವಣೆ ಇರುವುದಿಲ್ಲ,

ಇನ್ನು ಚುನಾವಣೆ ಇರದ ಗ್ರಾಮ ಪಂಚಾಯತಿಗಳ ಪಟ್ಟಿ ಹೀಗಿದೆ-

ಬೆಂಗಳೂರು ಉತ್ತರ ತಾಲೂಕಿನ ಸೋಮಶೆಟ್ಟಿಹಳ್ಳಿ, ಚಿಕ್ಕಬಾಣವಾರ, ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ, ಯಲಹಂಕ ತಾಲೂಕಿನ ಹುಣಸಮಾರನಹಳ್ಳಿ, ಸೊಣ್ಣಪ್ಪನಹಳ್ಳಿ, ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ, ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಯರಗಟ್ಟಿ, ಅಥಣಿ ತಾಲೂಕಿನ ಕಾಗವಾಡ, ಬೆಳಗಾವಿ ತಾಲೂಕಿನ ಮಚ್ಚೆ ಮತ್ತು ಪೀರನವಾಡಿ

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ, ಚಿಂಚೋಡಿ, ಕರಡಿಗುಡ್ಡ, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೆಚ್.ಕಡದಕಟ್ಟೆ, ಹರಿಹರ ತಾಲೂಕಿನ ಗುತ್ತೂರು, ಕೋಲಾರ ತಾಲೂಕಿನ ವೇಮಗಲ್, ಕುರುಗಲ್, ಶೆಟ್ಟಿಹಳ್ಳಿ, ಚೌಡದೇವನಹಳ್ಳಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿ, ಮನ್ನಬೆಟ್ಟು, ಕಟೀಲು (ಕೊಂಡೆ ಮೂಲ), ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಾಡು ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ (ಗುಳದಕೇರಿ), ಮಂಕಿ-ಎ (ಹಳೆಮರ), ಮಂಕಿ-ಬಿ(ಅನಂತವಾಡಿ), ಮಂಕಿ-ಸಿ(ಚಿತ್ತಾರ) 

ಚಿಕ್ಕಮಗಳೂರಿನಲ್ಲಿ ಒಂದೇ ಹಂತದಲ್ಲಿ ಚುನಾವಣೆ

ಚಿಕ್ಕಮಗಳೂರಿನಲ್ಲಿ ಡಿಸೆಂಬರ್ 27ರಿಂದ 29ರವರೆಗೆ ದತ್ತ ಜಯಂತಿ ಆಚರಣೆ ಇರುವ ಕಾರಣ ಚಿಕ್ಕಮಗಳುರು ಜಿಲ್ಲೆಯ ಎಲ್ಲಾ 209  ಗ್ರಾಮ ಪಂಚಾಯತಿಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಡಿಸೆಂಬರ್ 22ರಂದು ಇಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೆ ಮುನ್ನ ಜಿಲ್ಲೆಯ 97 ಗ್ರಾಮ ಪಂಚಾಯತಿಗಳಿಗೆ ಮೊದಲ ಹಂತ ಹಾಗೂ ಉಳಿದ 112  ಗ್ರಾಮ ಪಂಚಾಯತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸುವುದಾಗಿ ಆಯೋಗ ಪ್ರಕಟಿಸಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com