ನಾಳಿನ ವಿಧಾನ ಸಭೆ ಕಲಾಪಕ್ಕೆ ಕಾಂಗ್ರೆಸ್ ಬಹಿಷ್ಕಾರ: ಏಕಾಏಕಿ ಗೋಹತ್ಯಾ ನಿಷೇಧ ವಿಧೇಯಕ ಮಂಡಿಸಿದ್ದಕ್ಕೆ ಆಕ್ರೋಶ

ಪ್ರಜಾಪ್ರಭುತ್ವ ವ್ಯವಸ್ಥೆ ಉಲ್ಲಂಘಿಸಿ ಸಂವಿಧಾನ ವಿರೋಧಿಯಾಗಿ ಚರ್ಚೆಗೆ ಅವಕಾಶ ನೀಡದೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ ಅಂ ಗೀಕಾರ ಮಾಡಿದ್ದನ್ನು ಖಂಡಿಸಿ ನಾಳಿನ ಕಲಾಪ ಬಹಿಷ್ಕಾರ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆ ಉಲ್ಲಂಘಿಸಿ ಸಂವಿಧಾನ ವಿರೋಧಿಯಾಗಿ ಚರ್ಚೆಗೆ ಅವಕಾಶ ನೀಡದೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ ಅಂ ಗೀಕಾರ ಮಾಡಿದ್ದನ್ನು ಖಂಡಿಸಿ ನಾಳಿನ ಕಲಾಪ ಬಹಿಷ್ಕಾರ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಬಿಲ್ ಮಂಡಿಸುವ ಯಾವ ನಿಯಮವನ್ನೂ ಪಾಲನೆ ಮಾಡಿಲ್ಲ.ಹಾಗಾಗಿ ನಾವು ನಾಳಿನ ಕಲಾಪ ಬಹಿಷ್ಕಾರಕ್ಕೆ ನಿರ್ಧಾರ ಮಾಡಿದ್ದೇವೆ.ನಾಳೆ ನಡೆಯುವ ಎಲ್ಲಾ ಕಲಾಪದಿಂದ ನಾವು ದೂರ ಉಳಿಯಲಿದ್ದೇವೆ.ಹಳ್ಳಿಗಾಡಿನ‌ ಆರ್ಥಿಕ ವ್ಯವಸ್ಥೆ ಹಾಳು ಮಾಡುವ ಧೋರ ಣೆ ಖಂಡಿಸಿ ನಾಳೆ ಸದನ ಕಲಾಪ ಬಹಿಷ್ಕಾರ ಮಾಡಿದ್ದೇವೆ ಎಂದು ಪ್ರಕಟಿಸಿದರು.ಗ್ರಾಮ ಪಂಚಾಯತ್ ಚುನಾ ವಣೆ ವೇಳೆ ಈ ಬಿಲ್ ತಂದಿದ್ದಾರೆ.ಇದರ ಪರಿಣಾಮ ಏನಾಗಲಿದೆ? ಇದು ನೀತಿ ಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೇ ? ಹಾಗಾದರೆ ನೀತಿ‌ ಸಂಹಿತೆ ಏಕೆ ಬೇಕು? ನಾವು ಚುನಾವಣಾ ಆಯೋಗದ ಮೊರೆಗೂ ಹೋಗಲಿದ್ದೇವೆ ಎಂದರು

ಕಾನೂನು ಸಚಿವ ಜೆ ಸಿ ಮಧುಸ್ವಾಮಿ ಅವರು ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸುವುದನ್ನು ವಿರೋಧಿಸಿ ಸರ್ಕಾರ ಪ್ರತಿಪಕ್ಷದ ಸದಸ್ಯರನ್ನು ಕತ್ತಲಲ್ಲಿರಿಸಿದೆ  ಇದು 'ಅಸಂವಿಧಾನಿಕ ಮತ್ತು ಪ್ರಜಾಪ್ರಭುತ್ವ ವಿರೋಧಿ' ಧೋರಣೆ ಸಿದ್ದರಾಮಯ್ಯ ಹೇಳಿದರು, "ರಾಜ್ಯ ಸರ್ಕಾರವು ಎಲ್ಲಾ ಪ್ರಜಾಪ್ರಭುತ್ವದ ನಿಯಮಾವಳಿಗಳನ್ನೂ ಪೂರ್ವ ಅಧಿಸೂಚನೆ ಇಲ್ಲದೆ ಮಸೂದೆಯನ್ನು ಮಂಡಿಸುವ ಮೂಲಕ ಗಾಳಿಗೆ ತೂರಿಸಿತು" ಅವರು ಹೇಳಿದ್ದಾರೆ.

ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಚ್ ಕೆ ಪಾಟೀಲ್ ಮತ್ತಿತರರನ್ನು ಒಳಗೊಂಡಂತೆ ಪಕ್ಷದ ಹಿರಿಯ ಸದಸ್ಯರ ಜತೆ ಸಮಾಲೋಚಿಸಿದ ನಂತರ ಸದನದ ಕಲಾಪದಿಂದ ದೂರವಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಸುಗಳನ್ನು ಆರ್ ಎಸ್ಎಸ್ ಬಿಜೆಪಿಯವರು ಸಾಕುವುದಿಲ್ಲ!

ವಯಸ್ಸಾದ ಹಸು,ಗೊಡ್ಡು ರಾಸುಗಳನ್ನು ಆರ್ ಎಸ್ಎಸ್ ನವರು ಬಂದು ಸಾ ಕುತ್ತಾರಾ? ರೈತರು ರಾಸುಗಳ ಸಾಕಾಣಿಕೆ ಮಾಡುತ್ತಾರೆಯೋ ಹೊರತು ಆರ್ಎಸ್ಎಸ್ ಬಿಜೆಪಿ ಅವರಲ್ಲ ಎಂದು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ತರಾತುರಿ ಬಿಲ್ ಮಂಡಿಸಲು ಹೊರಟ ಸರ್ಕಾರದ ಕ್ರಮವನ್ನು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.

ಯಾವುದೇ ಮಾಹಿತಿ ನೀಡದೆ,ಬಿಲ್ ಗಳ ಪ್ರತಿ ನೀಡದೇ ಬಿಲ್ ತಂದಿದ್ದಾರೆ,ಬಿಎಸಿ ನಿರ್ಣಯ ಉಲ್ಲಂಘಿಸಿದ್ದಾರೆ.ಹಾಗಾಗಿ ಸರ್ಕಾರ ಸದನ ನಡೆಯುವಾಗ ಪ್ರತಿ ದಿನ ಹಿಂದಿನ ದಿನ ಮುಂದಿನ ದಿನ ಸದನದಲ್ಲಿ ಏನು ನಡೆಯಬೇಕು ಎಂದು ಕಾರ್ಯಕಲಾಪ ಪಟ್ಟಿ ಸಿದ್ದಪಡಿಸಿ ಅಧ್ಯಕ್ಷರ ಒಪ್ಪಿಗೆ ಪಡೆದು ಕಳಿಸಿಕೊಡಲಾಗುತ್ತದೆ.ನಿನ್ನೆ ಬಿಎಸಿ ಸಭೆಯಲ್ಲಿ ಯಾವುದೇ ಹೊಸ ಬಿಲ್ ತರಲ್ಲ,ವಿವಿ ಬಿಲ್,ಸಂಸದೀಯ ಕಾರ್ಯದರ್ಶಿ ಕಾಯ್ದೆ,ಸುಗ್ರೀವಾಜ್ಞೆಆಗಿದ್ದ ಬಿಲ್ ಮಾತ್ರ ಚರ್ಚೆ ಮಾಡುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು.ಅದಕ್ಕಾಗಿ ಡಿಸೆಂಬರ್ 15 ರವವರೆಗೆ ಇದ್ದ ಕಲಾಪ ನಾಳೆಗೆ ಕೊನೆ ಮಾಡಲು ಒಪ್ಪಲಾಗಿತ್ತು. ಆದರೆ ಇಂದಿನ ಕಾರ್ಯಕಲಾಪ ಪಟ್ಟಿಯಲ್ಲಿ ಎಲ್ಲಿಯೂ ಕೂಡ ಗೋ ಹತ್ಯೆ ಕಾಯ್ದೆ ತರುವ ಬಗ್ಗೆ ಸೇರಿಸಿಲ್ಲ,ಇ ದು ಲಜ್ಜೆಗೆಟ್ಟ ಸರ್ಕಾರ,ಸ್ಪೀಕರ್ ಗೌರವವನ್ನ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com