'ಸ್ಕೆಚ್ ಹಾಕಿ ಎಚ್.ಡಿ.ಕೆ ಸರ್ಕಾರ ಉರುಳಿಸಿದ್ದು ನಾನೇ: ಚನ್ನಪಟ್ಟಣದ 10 ಹಳ್ಳಿಗಳ ಹೆಸರು ಹೇಳಿದರೆ ರಾಜಿನಾಮೆ'

ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ‌ ಸರ್ಕಾರಕ್ಕೆ ಸ್ಕೆಚ್ ಹಾಕಿದ್ದೇ ನಾನು‌ ಎಂಬ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಯೋಗೇಶ್ವರ್
ಯೋಗೇಶ್ವರ್

ಚನ್ನಪಟ್ಟಣ: ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ‌ ಸರ್ಕಾರಕ್ಕೆ ಸ್ಕೆಚ್ ಹಾಕಿದ್ದೇ ನಾನು‌ ಎಂಬ ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಚನ್ನಪಟ್ಟಣದಲ್ಲಿ ಕೆಲ‌ವು ದಿನಗಳ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಯೋಗೀಶ್ವರ್ ಇಂತಹ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಗೆ ಚನ್ನಪಟ್ಟಣದಲ್ಲಿ ಇಬ್ಬರು ಗುತ್ತಿಗೆದಾರರನ್ನು ಬಿಟ್ಟರೆ ಬೇರೆ ಯಾರು ಗೊತ್ತಿಲ್ಲ, ಕುಮಾರಸ್ವಾಮಿ ಚನ್ನಪಟ್ಟಣದ 10 ಹಳ್ಳಿಗಳ ಹೆಸರು ಹೇಳಿದರೆ ನಾನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಯೋಗೇಶ್ವರ್ ಸವಾಲು ಹಾಕಿದ್ದಾರೆ.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಸೇರಿ ತಮ್ಮನ್ನು ಸೋಲಿಸಿದ್ದರು. ಈ ಸೋಲಿನಿಂದಾಗಿ ಮತದಾರರಿಗೆ ಮುಖ ತೋರಿಸಲು ಆಗದೆ ಬೆಂಗಳೂರು ಸೇರಿಕೊಂಡೆ. ಕೇವಲ ಚನ್ನಪಟ್ಟಣದಲ್ಲಿ ಕುಳಿತು ರಾಜಕೀಯ ಮಾಡಿದರೆ ಏನು ಸಾಲದು. ಏನಾದರೂ ಮಾಡಬೇಕೆಂದು ತೀರ್ಮಾನಿಸಿ ಬೆಂಗಳೂರಿನಲ್ಲಿ ಕುಳಿತು ಸ್ಕೆಚ್ ಹಾಕಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದೆ ಎಂದು ಒಪ್ಪಿಕೊಂಡಿರುವುದು ಆಡಿಯೋದಲ್ಲಿ ದಾಖಲಾಗಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ನಡೆದಾಗ ಶಿವಕುಮಾರನ ತಮ್ಮ ಸುರೇಶ ನನ್ನನ್ನು ಯಾರು ಅಂತಿದ್ದ. ಅದಾದ ಬಳಿಕ ಸಮ್ಮಿಶ್ರ ಸರ್ಕಾರ ಉರುಳುತ್ತಲೇ ಶಿವಕುಮಾರನನ್ನು ತಿಹಾರ್ ಜೈಲಿಗೆ ಕರೆದುಕೊಂಡು ಹೋಗಲಾಯಿತು. ಕರ್ನಾಟಕದಿಂದ ಯಾರಾದರೂ ಜೈಲಿಗೆ ಹೋಗಿದ್ದರೆ ಈಗಿನ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ. ಈಗ ಈ ಅಣ್ಣ ತಮ್ಮಂದಿರಿಗೆ, ದೇವೇಗೌಡರ ಮಗನಿಗೆ ನಾನು ಯಾರೆಂಬುದು ಗೊತ್ತಾಗಿದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com