ಚಿತ್ರದುರ್ಗದ ಈ ಗ್ರಾಮದಲ್ಲಿ ಹಣ, ಜಾತಿ ರಾಜಕೀಯಕ್ಕಿಲ್ಲ ಸ್ಥಾನಮಾನ; ಒಗ್ಗಟ್ಟು, ಭ್ರಾತೃತ್ವವೇ ಗ್ರಾಮಸ್ಥರ ಮಂತ್ರ!

ಜಿಲ್ಲೆಯ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದ ಜನರ ಅಭಿವೃದ್ಧಿಗೆ ಏಕತೆ ಮತ್ತು ಭ್ರಾತೃತ್ವವೇ ಮುಖ್ಯ ಕಾರಣವಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಜಿಲ್ಲೆಯ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದ ಜನರ ಅಭಿವೃದ್ಧಿಗೆ ಏಕತೆ ಮತ್ತು ಭ್ರಾತೃತ್ವವೇ ಮುಖ್ಯ ಕಾರಣವಾಗಿದೆ. ಇಲ್ಲಿ ಗ್ರಾಮ ಪಂಚಾಯತ್ ಅಥವಾ ಸಹಕಾರಿ ಸಂಸ್ಥೆಗಳಿಗೆ ಚುನಾವಣೆಯನ್ನೇ ನಡೆಸುವುದಿಲ್ಲ. ಜಾತಿ, ಧರ್ಮ, ಹಣ, ಸಮುದಾಯಗಳ ಬೇಧಭಾವವಿಲ್ಲದೆ ಗ್ರಾಮದ ಮುಖ್ಯಸ್ಥರು ಸದಸ್ಯರನ್ನು ಆಯ್ಕೆ ಮಾಡುತ್ತಾರೆ. 

ಗ್ರಾಮದಲ್ಲಿ ಜನರ ಮಧ್ಯೆ ಒಗ್ಗಟ್ಟು ಇರಲು ಮಾಜಿ ಸಚಿವ ಜಿ ಹೆಚ್ ಅಶ್ವಥ್ ರೆಡ್ಡಿ ಹಾಗೂ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಸಾಕಷ್ಟು ಕೆಲಸ ಮಾಡಿದ್ದಾರೆ. 1972ರ ಚುನಾವಣೆಯಿಂದಲೂ ಇದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. 

ಕಡಬನಕಟ್ಟೆ ಮತ್ತು ಕಡಬನಕಟ್ಟೆ ಮೈಸರಹಟ್ಟಿಯಿಂದ 6 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಡಬನಕಟ್ಟೆಯ ಚಳ್ಳಕೆರೆ ಶಾಸಕ ರಘುಮೂರ್ತಿ, ಅಶ್ವಥ ರೆಡ್ಡಿಯವರು ಜನರಲ್ಲಿ ಸಹೋದರ ಭಾತೃತ್ವ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ರಾಜಕೀಯ ಜನರ ಮಧ್ಯೆ ಸುಳಿಯುವುದಿಲ್ಲ. ಅಶ್ವಥ್ ರೆಡ್ಡಿಯವರ ಆದೇಶದ ಪ್ರಕಾರ, ನನ್ನ ತಂದೆ ಟಿ ತಿಪ್ಪಯ್ಯ ಮಂಡಲ ಪಂಚಾಯತ್ ನ ಅಧ್ಯಕ್ಷರಾಗಿ ನಂತರ ಗ್ರಾಮ ಪಂಚಾಯತ್ ಗೆ ಸಹ ಚುನಾಯಿತರಾದರು. ನಂತರ ನನ್ನ ತಂದೆಯವರು ಗ್ರಾಮ ಪಂಚಾಯತ್ ಮತ್ತು ಸಹಕಾರಿ ಸೊಸೈಟಿಗಳ ಸದಸ್ಯರನ್ನು ಚುನಾಯಿಸುವಲ್ಲಿ ಭಾಗಿಯಾಗಿದ್ದಾರೆ, ನಾನು ಈ ಸಂಪ್ರದಾಯವನ್ನು ಮುಂದುವರಿಸಿದ್ದೇನೆ ಎಂದರು.

ಇಲ್ಲಿ ಕಮ್ಮಾರರು, ವಾಲ್ಮೀಕಿ ನಾಯಕರು, ಆದಿ ಕರ್ನಾಟಕ, ಆದಿ ದ್ರಾವಿಡ, ಕುಂಬಾರ, ಡೋಬಿ, ವಿಶ್ವಕರ್ಮ, ಪಿಂಜಾರ ಮತ್ತು ಇತರ ಸಮುದಾಯದವರಿಗೆ ಎಲ್ಲಾ ವರ್ಗದವರಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಯಾವುದೇ ರಾಜಕೀಯ ಪಕ್ಷಗಳ ಬಾವುಟಗಳನ್ನು ಪ್ರದರ್ಶಿಸಲಾಗುವುದಿಲ್ಲ ಎನ್ನುತ್ತಾರೆ ಶಾಸಕ ರಘುಮೂರ್ತಿ.

ಬಸವಣ್ಣನವರ ಅನುಭವ ಮಂಟಪ ಪರಿಕಲ್ಪನೆಗೆ ನಮ್ಮ ಗ್ರಾಮ ಕಡಬನಕಟ್ಟೆ ಉತ್ತಮ ಉದಾಹರಣೆ ಎನ್ನುತ್ತಾರೆ ನಿವಾಸಿ ಸುರೇಶ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com